ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಇಮ್ರಾನ್‌ ಖಾನ್‌ ಬಂಧನಕ್ಕೆ ಚುನಾವಣಾ ಆಯೋಗ ಸೂಚನೆ

Published:
Updated:
ಇಮ್ರಾನ್‌ ಖಾನ್‌ ಬಂಧನಕ್ಕೆ ಚುನಾವಣಾ ಆಯೋಗ ಸೂಚನೆ

ಇಸ್ಲಾಮಾಬಾದ್‌: ರಾಜಕೀಯ ಪಕ್ಷಗಳಿಗೆ ವಿದೇಶದ ನಿಧಿ ಪಡೆಯುವ ಸಂಬಂಧ ಚುನಾವಣಾ ಆಯೋಗವು ಪಕ್ಷಪಾತಿಯಂತೆ ವರ್ತಿಸುತ್ತಿದೆ ಎಂದು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನದ ಪ್ರತಿಪಕ್ಷ ನಾಯಕ ಇಮ್ರಾನ್‌ ಖಾನ್‌ ಅವರನ್ನು ಬಂಧಿಸುವಂತೆ ಆಯೋಗವು ಸೂಚಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 64 ವರ್ಷದ ಇಮ್ರಾನ್‌ ಖಾನ್‌ ವಿರುದ್ಧ ಜಾಮೀನುರಹಿತ ವಾರಂಟ್‌ ಹೊರಡಿಸಲಾಗಿತ್ತು. ವಿಚಾರಣೆಗೆ ಸತತ ಗೈರಾಗಿದ್ದರಿಂದ ಖಾನ್‌ ಅವರನ್ನು ಬಂಧಿಸಿ ಕೋರ್ಟ್‌ ಮುಂದೆ ಹಾಜರುಪಡಿಸುವಂತೆ ಐದು ಮಂದಿ ಸದಸ್ಯರನ್ನು ಒಳಗೊಂಡ ನ್ಯಾಯಪೀಠ ಸೂಚಿಸಿತ್ತು. ಮುಂದಿನ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿದೆ.

ಆದರೆ ಆಯೋಗದ ತೀರ್ಮಾನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಪಾಕಿಸ್ತಾನದ ಖಾನ್‌ ಅವರ ತೆಹ್ರೀಕ್‌–ಎ–ಇನ್ಸಾಫ್‌ ಪಕ್ಷ ತಿಳಿಸಿದೆ.

Post Comments (+)