ಫೈನಲ್‌ಗೆ ಭಾರತದ ಜೋಡಿ

ಸೋಮವಾರ, ಮೇ 27, 2019
24 °C

ಫೈನಲ್‌ಗೆ ಭಾರತದ ಜೋಡಿ

Published:
Updated:
ಫೈನಲ್‌ಗೆ ಭಾರತದ ಜೋಡಿ

ತಾಷ್ಕೆಂಟ್: ಭಾರತದ ಯೂಕಿ ಭಾಂಬ್ರಿ ಮತ್ತು ದಿವಿಜ್ ಶರಣ್ ತಾಷ್ಕೆಂಟ್ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಶ್ರೇಯಾಂಕ ರಹಿತ ಭಾರತದ ಜೋಡಿ 3–6, 7–5, 10–6ರಲ್ಲಿ ಗುಲ್ಲೆರ್ಮೊ ಗ್ರೇಸಿಯಾ ಹಾಗೂ ಎನ್ರಿಕ್ ಲೊಪೆಜ್ ವಿರುದ್ಧದ ಹೋರಾಟದಲ್ಲಿ ಗೆದ್ದಿದೆ. ಮೊದಲ ಸೆಟ್‌ನಲ್ಲಿ ಸೋತ ಯೂಕಿ ಜೋಡಿ ಬಳಿಕ ಎರಡು ಸೆಟ್‌ಗಳಲ್ಲಿ ಉತ್ತಮ ಪೈಪೋಟಿ ನೀಡಿತು.

ಚೆನ್ನೈ ಓಪನ್‌ನಲ್ಲಿ ಶರಣ್ ಹಾಗೂ ರಾಜ ಜೋಡಿ ರನ್ನರ್ ಅಪ್ ಆಗಿತ್ತು. ಯೂಕಿ ಈ ಋತುವಿನಲ್ಲಿ ಆಡಲಿರುವ ಮೊದಲ ಫೈನಲ್ ಪಂದ್ಯ ಇದಾಗಿದೆ. ಪ್ರಶಸ್ತಿ ಗೆದ್ದ ಜೋಡಿಗೆ 125 ಹಾಗೂ, ರನ್ನರ್ ಅಪ್ ಜೋಡಿಗೆ 75 ಎಟಿಪಿ ಪಾಯಿಂಟ್ಸ್ ಸಿಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry