ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನಕ್ಕೆ ಜಯದ ಜಪ

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದುಬೈ: ಟೆಸ್ಟ್‌ ಸರಣಿಯಲ್ಲಿ ಎದುರಾಗಿದ್ದ ಹೀನಾಯ ಸೋಲಿನಿಂದ ಮೈಕೊಡವಿ ಎದ್ದು ನಿಂತಿರುವ ಪಾಕಿಸ್ತಾನ ತಂಡದವರು ಏಕದಿನ ಸರಣಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸ ಹೊಂದಿದ್ದಾರೆ.

ಶುಕ್ರವಾರ ನಡೆಯುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧ ಸೆಣಸಲಿದ್ದು ಜಯದ ಮಂತ್ರ ಜಪಿಸುತ್ತಿದೆ.

ಈ ವರ್ಷದ ಜೂನ್‌ನಲ್ಲಿ ಇಂಗ್ಲೆಂಡ್‌ ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಯಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದ ಸರ್ಫರಾಜ್‌ ಅಹ್ಮದ್‌ ಬಳಗ ಬ್ಯಾಟಿಂಗ್‌ನಲ್ಲಿ ಬಲ ಯುತವಾಗಿದೆ. ಆಲ್‌ರೌಂಡರ್‌ ಮಹ ಮ್ಮದ್‌ ಹಫೀಜ್‌ ಮತ್ತು ಅಹ್ಮದ್‌ ಶೆಹಜಾದ್‌, ಸೇರ್ಪಡೆ ಈ ತಂಡದ ಬಲ ಹೆಚ್ಚಿಸಿದೆ. ಇವರು ಟೆಸ್ಟ್‌ ಸರಣಿಯಲ್ಲಿ ಆಡಿರಲಿಲ್ಲ.

ಯುಎಇನಲ್ಲಿ ಪಾಕಿಸ್ತಾನದ ಗೆಲುವಿನ ದಾಖಲೆ ಉತ್ತಮವಾಗಿಲ್ಲ. 2009ರ ನಂತರ ಇಲ್ಲಿ 12 ಸರಣಿಗಳನ್ನು ಆಡಿರುವ ಈ ತಂಡ ಒಂಬತ್ತು ಸರಣಿಗಳಲ್ಲಿ ಸೋತಿದೆ. ಆದರೆ ಲಂಕಾ ವಿರುದ್ಧ ಎರಡು ಬಾರಿ ಗೆದ್ದಿದೆ.

ಹಿಂದಿನ ಈ ದಾಖಲೆಯ ಬಲ ದೊಂದಿಗೆ ಕಣಕ್ಕಿಳಿಯಲಿರುವ ತಂಡ ಮತ್ತೊಮ್ಮೆ ಸಿಂಹಳೀಯ ನಾಡಿನ ತಂಡದ ಸವಾಲು ಮೀರಿ ನಿಲ್ಲಲು ಉತ್ಸುಕವಾಗಿದೆ. ಫಖ್ರ್‌ ಜಮಾನ್‌, ಬಾಬರ್‌ ಆಜಮ್‌, ಶೋಯಬ್‌ ಮಲಿಕ್‌ ಮತ್ತು ಇಮಾದ್‌ ವಾಸೀಮ್‌ ಅವರು ಬ್ಯಾಟಿಂಗ್‌ನಲ್ಲಿ ಈ ತಂಡದ ಬೆನ್ನೆಲುಬಾಗಿದ್ದಾರೆ. ಜುನೈದ್‌ ಖಾನ್‌, ಹ್ಯಾರಿಸ್‌ ಸೋಹೈಲ್‌ ಅವರನ್ನು ಹೊಂದಿರುವ ಈ ತಂಡ ಬೌಲಿಂಗ್‌ ವಿಭಾಗದಲ್ಲೂ ಬಲಯುತವಾಗಿದೆ.

ಟೆಸ್ಟ್‌ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿ ಬೀಗುತ್ತಿರುವ ಉ‍ಪುಲ್‌ ತರಂಗ ಪಡೆ ಕೂಡ ಗೆಲುವಿನ ಆರಂಭದ ನಿರೀಕ್ಷೆಯಲ್ಲಿದೆ.

ದಿನೇಶ್‌ ಚಾಂಡಿಮಲ್‌. ನಿರೋ ಷನ್‌ ಡಿಕ್ವೆಲ್ಲಾ, ಲಾಹಿರು ತಿರಿಮಾನ್ನೆ, ಮಿಲಿಂದಾ ಸಿರಿವರ್ಧನೆ ಮತ್ತು ಚಾಮರ ಕಪುಗೆದೆರಾ ಅವರು ಪಾಕ್‌ ಬೌಲರ್‌ಗಳ ಮೇಲೆ ಸವಾರಿ ಮಾಡಬಲ್ಲರು.

ಅಖಿಲ ಧನಂಜಯ, ವಿಶ್ವ ಫರ್ನಾಂಡೊ ಮತ್ತು ಜೆಫ್ರಿ ವಾಂಡರ್ಸೆ ಅವರನ್ನು ಹೊಂದಿರುವ ಈ ತಂಡ ಬೌಲಿಂಗ್‌ ವಿಭಾಗದಲ್ಲೂ ಬಲಿಷ್ಠವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT