ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡಿ ಬಿದ್ದ ಜಕ್ಕಲಮಡಗು ಜಲಾಶಯ

Last Updated 12 ಅಕ್ಟೋಬರ್ 2017, 19:39 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಎರಡೂ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಜಕ್ಕಲಮಡಗು ಜಲಾಶಯ ಕೋಡಿ ಬಿದ್ದಿದ್ದು ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ.

2012ರಲ್ಲಿ ನಿರ್ಮಾಣ ಕಾರ್ಯ ಮುಕ್ತಾಯವಾದ ನಂತರ ಇದೇ ಪ್ರಥಮ ಬಾರಿಗೆ ಜಲಾಶಯ ಕೋಡಿ ಬಿದ್ದಿದೆ. 45 ಅಡಿಯಷ್ಟು ಆಳ ನೀರು ನಿಲ್ಲುವ ಸಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಒಟ್ಟಾರೆ 4,390 ದಶಲಕ್ಷ ಲೀಟರ್‌ ನೀರು ಸಂಗ್ರಹಣೆಯಾಗಲಿದೆ. ಇದರಲ್ಲಿ ದೊಡ್ಡ ಬಳ್ಳಾಪುರ ನಗರಕ್ಕೆ 1,390 ದಶಲಕ್ಷ ಲೀಟರ್‌, ಚಿಕ್ಕಬಳ್ಳಾಪುರ ನಗರಕ್ಕೆ 3,000 ದಶಲಕ್ಷ ಲೀಟರ್‌ ನೀರಿನ ಹಂಚಿಕೆಯಾಗಿದೆ ಎನ್ನುತ್ತಾರೆ ನಗರಸಭೆ ನೀರು ಸರಬರಾಜು ವಿಭಾಗದ ಎಂಜಿನಿಯರ್‌ ರಾಮೇಗೌಡ.

ಸದ್ಯ ದೊಡ್ಡಬಳ್ಳಾಪುರ ನಗರದಲ್ಲಿ 5 ದಿನಗಳಿಗೆ ಒಮ್ಮೆ ನಲ್ಲಿ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಈಗ ಜಲಾಶಯ ಕೋಡಿ ಬಿದ್ದಿರುವುದರಿಂದ ಮುಂದಿನ ದಿನಗಳಲ್ಲಿ 3 ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಬೇಕು ಎನ್ನುವುದು ನಾಗರಿಕರ ಒತ್ತಾಯ.

ಬಾಗಿನ ಅರ್ಪಣೆ: ಜಕ್ಕಲಮಡಗು ಜಲಾಶಯ ಕೋಡಿ ಬಿದ್ದಿರುವುದರಿಂದ ಅಕ್ಟೋಬರ್‌ 13ರಂದು ಬೆಳಿಗ್ಗೆ 10 ಗಂಟೆಗೆ ಜಲಾಶಯಕ್ಕೆ ಶಾಸಕ ಟಿ.ವೆಂಕಟರಮಣಯ್ಯ, ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ ಬಾಗಿನ ಅರ್ಪಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT