ಕೆಎಸ್‌ಸಿಎ ತಂಡಕ್ಕೆ ಜಯ

ಸೋಮವಾರ, ಜೂನ್ 17, 2019
25 °C

ಕೆಎಸ್‌ಸಿಎ ತಂಡಕ್ಕೆ ಜಯ

Published:
Updated:

ಬೆಂಗಳೂರು: ಬಿ.ಎಮ್ ಶ್ರೇಯಸ್ (17ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಕೆಎಸ್‌ಸಿಎ ತಂಡ 19 ವರ್ಷದೊಳಗಿನವರ ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಗುರುವಾರ ತಮಿಳುನಾಡು ಸಂಸ್ಥೆ ಎದುರು 8 ವಿಕೆಟ್‌ಗಳಿಂದ ಜಯಿಸಿತು.

ಮೊದಲು ಬ್ಯಾಟ್ ಮಾಡಿದ ತಮಿಳು ನಾಡು ತಂಡ 20.3 ಓವರ್‌ಗಳಲ್ಲಿ 80 ರನ್‌ಗಳಿಗೆ ಆಲೌಟ್‌ ಆಯಿತು. ಕೆಎಸ್‌ಸಿಎ ತಂಡ 18.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಶ್ರೇಯಸ್‌ ಕೇವಲ 17 ರನ್‌ಗಳನ್ನು ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಅಮನ್‌ ಖಾನ್‌ 21 ರನ್‌ಗಳಿಗೆ ಎರಡು ವಿಕೆಟ್ ಕಬಳಿಸಿದರು. ಬಳಿಕ ಸುಲಭ ಗುರಿ ಬೆನ್ನಟ್ಟಿದ ಕೆಎಸ್‌ಸಿಎ ತಂಡಕ್ಕೆ ದೇವ್‌ ಪಡಿಕ್ಕಲ್‌ ಆಸರೆಯಾದರು. ಈ ಆಟಗಾರ 43 ರನ್‌ಗಳನ್ನು ದಾಖಲಿಸಿದರು. ನಿಕಿನ್ ಜೋಸ್ ಅಜೇಯ 21 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ತಮಿಳುನಾಡು ಸಂಸ್ಥೆ: 20.3 ಓವರ್‌ಗಳಲ್ಲಿ 80 (ಬಿ.ಎಮ್‌ ಶ್ರೇಯಸ್‌ 17ಕ್ಕೆ4, ಅಮನ್ ಖಾನ್‌ 21ಕ್ಕೆ2). ಕೆಎಸ್‌ಸಿಎ: 18.3 ಓವರ್‌ಗಳಲ್ಲಿ 2 ವಿಕೆಟ್‌ಗೆ 81 (ದೇವ್ ಪಡಿಕ್ಕಲ್‌ 43, ಎಸ್‌.ಜೆ ನಿಕಿನ್ ಜೋಸ್‌ ಅಜೇಯ 21). ಫಲಿತಾಂಶ: ಕೆಎಸ್‌ಸಿಎ ತಂಡಕ್ಕೆ 8 ವಿಕೆಟ್‌ಗಳ ಜಯ.

ಆಂಧ್ರ ಸಂಸ್ಥೆ: 31 ಓವರ್‌ಗಳಲ್ಲಿ 151( ವಂಶಿಕೃಷ್ಣ 37, ವಿನಯ್‌ 30; ಅಜಯ್‌ ಗೌಡ 30ಕ್ಕೆ4, ಅನಿಕೇತ ರೆಡ್ಡಿ 33ಕ್ಕೆ4). ಹೈದರಾಬಾದ್: 26 ಓವರ್‌ಗಳಲ್ಲಿ 99 (ಎನ್‌ ತಿಲಕ್ 30, ಗಿರೀಶ ರೆಡ್ಡಿ 21ಕ್ಕೆ2, ವಿನಯ್‌ 13ಕ್ಕೆ5). ಫಲಿತಾಂಶ: ಆಂಧ್ರ ತಂಡಕ್ಕೆ 52 ರನ್‌ಗಳ ಜಯ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry