ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಟ್ಟೂರಿನಲ್ಲಿ ನ್ಯಾಯಾಲಯ ಆರಂಭಿಸಿ’

Last Updated 13 ಅಕ್ಟೋಬರ್ 2017, 5:22 IST
ಅಕ್ಷರ ಗಾತ್ರ

ಕೊಟ್ಟೂರು: ‘ಘೋಷಿತ ನೂತನ ತಾಲ್ಲೂಕು ಕೊಟ್ಟೂರಿನಲ್ಲಿ ಜನತೆಗೆ ಅನುಕೂಲವಾಗಲು ಕೂಡಲೇ ಸಿವಿಲ್ ಜಡ್ಜ್ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯವನ್ನು ಆರಂಭಿಸಬೇಕು’ ಎಂದು ವಕೀಲ ಡಿ.ಲಿಂಗರಾಜ್ ಒತ್ತಾಯಿಸಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಶೀಘ್ರದಲ್ಲಿಯೇ ಹಿರಿಯ ವಕೀಲ ಟಿ.ಎಂ.ಸೋಮಯ್ಯ ನೇತೃತ್ವದಲ್ಲಿ ಕೂಡ್ಲಿಗಿಗೆ ತೆರಳಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಲಾಗುವುದು.

ಈ ಹಿಂದೆ ಕೊಟ್ಟೂರಿನಲ್ಲಿ ಹೆಚ್ಚುವರಿ ನ್ಯಾಯಾಲಯ ಸ್ಧಾಪಿಸುವ ಯೋಜನೆ ಸಿದ್ದಗೊಂಡಿತ್ತು. ಈ ಕಾರಣಕ್ಕಾಗಿ ನ್ಯಾಯಾಧೀಶರು ಮತ್ತು ಹಿರಿಯ ವಕೀಲರು ಬಂದು ಸ್ಧಳ ಪರಿಶೀಲನೆ ಮಾಡಿದ್ದರು. ಸರ್ಕಾರ ಕೂಡ ಈ ಬೇಡಿಕೆಗೆ ಸ್ಪಂದಿಸಿತ್ತು.  ಆದರೆ, ಕಾರಣಾತರದಿಂದ ಹೆಚ್ಚುವರಿ ನ್ಯಾಯಾಲಯ ಸ್ಧಾಪನೆ ಪ್ರಕ್ರಿಯೆ ಸ್ಧಗಿತಗೊಂಡಿತು’ ಎಂದರು.

‘ಬರುವ ಜನವರಿಯಿಂದ ಕೊಟ್ಟೂರು ನೂತನ ತಾಲ್ಲೂಕು ಕೇಂದ್ರವಾಗಲಿದೆ. ಸರ್ಕಾರ ಎಲ್ಲ ಇಲಾಖೆಗಳ ಕಚೇರಿಗಳನ್ನು ಆರಂಭಿಸುತ್ತಿದ್ದು, ಅದರ ಜೊತೆಗೆ ನ್ಯಾಯಾಲಯದ ಸ್ಧಾಪನೆಗೂ ಮುಂದಾಗಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT