ಹಳ್ಳದಲ್ಲಿ ಮುಳುಗಿದ ಬಸ್‌: 70 ಪ್ರಯಾಣಿಕರ ರಕ್ಷಣೆ

ಸೋಮವಾರ, ಜೂನ್ 17, 2019
31 °C

ಹಳ್ಳದಲ್ಲಿ ಮುಳುಗಿದ ಬಸ್‌: 70 ಪ್ರಯಾಣಿಕರ ರಕ್ಷಣೆ

Published:
Updated:
ಹಳ್ಳದಲ್ಲಿ ಮುಳುಗಿದ ಬಸ್‌: 70 ಪ್ರಯಾಣಿಕರ ರಕ್ಷಣೆ

ಬಳ್ಳಾರಿ: ತಾಲ್ಲೂಕಿನ ಚಿತ್ತಗುಂಟ ಗ್ರಾಮದ ಹಳ್ಳದಲ್ಲಿ ಗುರುವಾರ ಮುಳುಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಅನ್ನು ಅಗ್ನಿಶಾಮಕ ದಳ ಮತ್ತು ಪಿ.ಡಿ ಹಳ್ಳಿ ಠಾಣೆಯ ಪೊಲೀಸರು ಗ್ರಾಮಸ್ಥರ ನೆರವಿನಿಂದ ಮೇಲೆತ್ತಿ, ಎಪ್ಪತ್ತು ಪ್ರಯಾಣಿಕರನ್ನು ರಕ್ಷಿಸಿದರು.

ಕೊಪ್ಪಳದಿಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಬಸ್‌ ಮಧ್ಯಾಹ್ನ ಹಳ್ಳದ ಬಳಿ ಬಂದಾಗ ನೀರು ರಭಸವಾಗಿ ಹರಿಯುತ್ತಿತ್ತು. ಚಾಲಕ ಮುಂಜಾಗ್ರತೆ ವಹಿಸದೇ ಬಸ್‌ ಓಡಿಸಿದ್ದರ ಪರಿಣಾಮವಾಗಿ ಅದು ಹಳ್ಳದಲ್ಲೇ ಸಿಲುಕಿ ಅರ್ಧಭಾಗದಷ್ಟು ಮುಳುಗಿತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸತತ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿದೆವು. ಮೊದಲು ಪ್ರಯಾಣಿಕರನ್ನು ಬಸ್‌ನಿಂದ ಹೊರಕ್ಕೆ ಕರೆತಂದು ಹಳ್ಳದಾಚೆಗೆ ಬಿಟ್ಟೆವು. ನಂತರ ಬಸ್‌ ಅನ್ನು ಹೊರಕ್ಕೆ ತಂದೆವು’ ಎಂದು ಪೊಲೀಸರು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry