ಠಾಣೆ ಆವರಣದಲ್ಲೇ ಪತಿ, ಪತ್ನಿ ಬಡಿದಾಟ

ಸೋಮವಾರ, ಮೇ 20, 2019
30 °C

ಠಾಣೆ ಆವರಣದಲ್ಲೇ ಪತಿ, ಪತ್ನಿ ಬಡಿದಾಟ

Published:
Updated:

ಧಾರವಾಡ: ‘ಪತಿ ಬೇರೊಬ್ಬರನ್ನು ಮದುವೆಯಾಗಿದ್ದಾನೆ’ ಎಂದು ಠಾಣೆಗೆ ಬಂದ ಪತ್ನಿ. ‘ಅನವಶ್ಯಕ ಕಿರುಕುಳ ನೀಡುತ್ತಿದ್ದಾಳೆ’ ಎಂದು ದೂರು ನೀಡಲು ಬಂದ ಪತಿ. ಇಬ್ಬರೂ ಉಪನಗರ ಠಾಣೆಯಲ್ಲೇ ಗುರುವಾರ ಮಧ್ಯಾಹ್ನ ಹೊಡೆದಾಡಿಕೊಂಡಿದ್ದಾರೆ.

ಹೋಮಿಯೋಪಥಿ ವೈದ್ಯ ಡಾ. ಸಂತೋಷ ವಲಂಡೀಕರ್‌ ಹಾಗೂ ಆತನ ಪತ್ನಿ ಸುರೇಖಾ ಸಾರ್ವಜನಿಕವಾಗಿ ಬಡಿದಾಡಿಕೊಂಡವರು. ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಈ ಇಬ್ಬರ ನಡುವೆ ಕಳೆದ 19ರಂದು ಗಲಾಟೆ ನಡೆದು, ಇದೇ ಠಾಣೆಯ ಮೆಟ್ಟಿಲೇರಿದ್ದರು.

ಆಗ ಇಬ್ಬರೂ ಉಪನಗರ ಠಾಣೆಗೆ ಬಂದು ರಾಜೀಸಂಧಾನ ಮಾಡಿಕೊಂಡಿದ್ದರು. ಆದರೆ ಸಂತೋಷ, ತಮ್ಮ ಪತ್ನಿ ಕಿರುಕುಳ ನೀಡುತ್ತಿದ್ದಾರೆ ಎಂದು ಲಿಖಿತ ದೂರು ದಾಖಲಿಸಲು ಬಂದಾಗ ಮತ್ತೆ ಜಗಳವಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತಂತೆ ಉಪನಗರ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry