ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ₹362 ಕೋಟಿ ಲಂಚ ಪಡೆದಿದ್ದಾರೆ: ಸಿಬಿಐ

ಬುಧವಾರ, ಜೂನ್ 19, 2019
29 °C

ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ₹362 ಕೋಟಿ ಲಂಚ ಪಡೆದಿದ್ದಾರೆ: ಸಿಬಿಐ

Published:
Updated:
ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ ತ್ಯಾಗಿ ₹362 ಕೋಟಿ ಲಂಚ ಪಡೆದಿದ್ದಾರೆ: ಸಿಬಿಐ

ನವದೆಹಲಿ: ಆಗಸ್ಟಾವೆಸ್ಟ್‌­ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರ­ಣಕ್ಕೆ ಸಂಬಂಧಿಸಿದಂತೆ ವಾಯು­ಪಡೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ₹362 ಕೋಟಿ ಲಂಚ ಪಡೆದಿದ್ದಾರೆ ಎಂದು ಸಿಬಿಐ ಹೇಳಿದೆ. ಆಗಸ್ಟಾವೆಸ್ಟ್‌­ಲ್ಯಾಂಡ್‌ ಹೆಲಿಕಾಪ್ಟರ್ ಖರೀದಿ ಹಗರಣ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ ಎಂದು ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ.

₹362 ಕೋಟಿ ವ್ಯವಹಾರ ನಡೆಸುವ ಸಂಚು ನಡೆಸಿ ಅದಕ್ಕೆ ತ್ಯಾಗಿ ನೇತೃತ್ವ ನೀಡಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ. ಈ ಸಂಚಿನಲ್ಲಿ ಆಗ ಏರ್ ಮಾರ್ಷಲ್ ಆಗಿದ್ದ ಜೆ ಎಸ್ ಗುಜರಾಲ್ ಕೂಡಾ ಭಾಗಿಯಾಗಿದ್ದರು ಎಂದು ಸಿಬಿಐ ಹೇಳಿದೆ. ಇಟೆಲಿಯ ಮಧ್ಯವರ್ತಿ ಕಾರ್ಲೊ ಗೆರೊಸಾ, ಕ್ರಿಶ್ಚಿಯನ್‌ ಮೈಕೆಲ್‌, ಗೈಡೊ ಹಶ್ಕೆ ಸೇರಿದಂತೆ ಆಗಸ್ಟಾವೆಸ್ಟ್‌­ಲ್ಯಾಂಡ್‌‍ನ ಅಧಿಕಾರಿಗಳು ಕೂಡಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

ಅತಿಗಣ್ಯರ ಬಳಕೆಗಾಗಿ 12 ಹೆಲಿ­ಕಾಪ್ಟರ್‌ಗಳನ್ನು ಖರೀದಿಸುವ ವಾಯು­ಪಡೆ ಯೋಜನೆಯಲ್ಲಿ ಆಗಸ್ಟಾವೆಸ್ಟ್‌­ಲ್ಯಾಂಡ್, ತನ್ನ ಜತೆ ವ್ಯವಹಾರ ಕುದುರಿ­ಸಲು ಆಗ ವಾಯು­ಪಡೆ ಮುಖ್ಯಸ್ಥರಾ­ಗಿದ್ದ ಎಸ್.ಪಿ.­ತ್ಯಾಗಿ ಹಾಗೂ ಅವರ ಸಂಬಂಧಿ­­ಗಳಿಗೆ ಮಧ್ಯ­ವರ್ತಿ­ಗಳ ಮೂಲಕ 362 ಕೋಟಿ  ಲಂಚ ನೀಡಿದ್ದಾರೆ ಎಂಬುದು ತ್ಯಾಗಿ ಮೇಲಿರುವ ಆರೋಪ.

2005ರಲ್ಲಿ ನಡೆದ ಸಭೆಯಲ್ಲಿ,  ಹೆಲಿ­ಕಾಪ್ಟರ್‌ಗಳು ಹಾರಾಡುವ ಗರಿಷ್ಠ ಎತ್ತರದ ಮಿತಿಯನ್ನು 18,000 ಅಡಿ­ಯಿಂದ 15,000 ಅಡಿಗೆ ಇಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದ­ರಿಂದಾಗಿಯೇ ಟೆಂಡರ್ ಪ್ರಕ್ರಿಯೆ­ಯಲ್ಲಿ ಆಗಸ್ಟಾವೆಸ್ಟ್‌ಲ್ಯಾಂಡ್ ಪಾಲ್ಗೊ­ಳ್ಳಲು ಸಾಧ್ಯವಾಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry