ಹೋಟೆಲ್‌ ರೂಂನಲ್ಲಿ ಹಿಂದೂ ಮಹಿಳೆಯ ಜತೆ ಕಾಣಿಸಿಕೊಂಡ ಮುಸ್ಲಿಂ ಯುವಕನ ಮೇಲೆ ಹಲ್ಲೆ

ಮಂಗಳವಾರ, ಜೂನ್ 18, 2019
23 °C

ಹೋಟೆಲ್‌ ರೂಂನಲ್ಲಿ ಹಿಂದೂ ಮಹಿಳೆಯ ಜತೆ ಕಾಣಿಸಿಕೊಂಡ ಮುಸ್ಲಿಂ ಯುವಕನ ಮೇಲೆ ಹಲ್ಲೆ

Published:
Updated:
ಹೋಟೆಲ್‌ ರೂಂನಲ್ಲಿ ಹಿಂದೂ ಮಹಿಳೆಯ ಜತೆ ಕಾಣಿಸಿಕೊಂಡ ಮುಸ್ಲಿಂ ಯುವಕನ ಮೇಲೆ ಹಲ್ಲೆ

ಜೋಧಪುರ: ರಾಜಸ್ಥಾನದ ಬಾರ್ಮರ್‌ನಗರದ ಹೋಟೆಲ್‌ವೊಂದರ ರೂಂನಲ್ಲಿ ಹಿಂದೂ ಮಹಿಳೆಯ ಜತೆ ಕಾಣಿಸಿಕೊಂಡ ಮುಸ್ಲಿಂ ಯುವಕನಿಗೆ ಮಹಿಳೆಯ ಸಂಬಂಧಿಕರು ಹಲ್ಲೆ ಮಾಡಿರುವ ಘಟನೆ ಗುರುವಾರ ನಡೆದಿದೆ.

ಸದ್ಯ ಯುವಕನನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೋಟೆಲ್‌ಗೆ ಮುತ್ತಿಗೆ ಹಾಕಿದ 100ಕ್ಕೂ ಹೆಚ್ಚು ಜನರು ಯುವಕನ್ನು ಥಳಿಸಿದ್ದು, ಈ ದೃಶ್ಯಗಳನ್ನೊಳಗೊಂಡ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ ಎಂದು ಹಿಂದೂಸ್ತಾನ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ಕೆಲವರು ‘ಜೈ ಶ್ರೀರಾಮ್‌’ ಘೋಷಣೆ ಕೂಗಿರುವುದು ವಿಡಿಯೊದಲ್ಲಿ ದಾಖಲಾಗಿದ್ದು, ಉದ್ದೇಶಪೂರ್ವಕವಾಗಿಯೇ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬರ್ಮಾರ್‌ ಜಿಲ್ಲೆಯ ಸಯಳ ಗ್ರಾಮದ ಪದು ಖಾನ್‌(21) ದಾಳಿಗೊಳಗಾದವ. ತಾವು ಹೋಟೆಲ್‌ಗೆ ಧಾವಿಸುತ್ತಿದ್ದಂತೆ ಆತನ ಮೇಲೆ ಹಲ್ಲೆ ನಡೆಸಿದ ಜನರ ಗುಂಪು ಅಲ್ಲಿಂದ ಪಲಾಯನ ಮಾಡಿತು ಎಂದು ಪೊಲೀಸರು ಹೇಳಿದ್ದಾರೆ.

‘ಗಾಯಗೊಂಡಿದ್ದ ಪದು ಖಾನ್‌ನನ್ನು, ಜೋಧಪುರ ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದು, ದೂರು ದಾಖಲಿಸಲು ನಿರಾಕರಿಸಿದ್ದಾನೆ’ ಎಂದು ಬರ್ಮಾರ್‌ನ ಹೆಚ್ಚುವರಿ ಪೋಲಿಸ್‌ ಅಧೀಕ್ಷಕ ಕೈಲಾಸ್‌ ದನ್‌ ರತ್ನು ತಿಳಿಸಿದ್ದಾರೆ.

ಹೋಟೆಲ್‌ನವರೂ ಯಾವುದೇ ದೂರು ನೀಡಿಲ್ಲ. ಈ ಬಗ್ಗೆ ಯಾರಾದರೂ ದೂರು ನೀಡಿದರೆ ಪ್ರಕರಣ ದಾಖಲಿಸಿಕೊಳ್ಳುವುದಾಗಿಯೂ ಅವರು ಹೇಳಿದ್ದು, ಪೊಲೀಸರು ಮಹಿಳೆಯ ಬಗ್ಗೆ ಮಾಹಿತಿ ನೀಡಿಲ್ಲ.

ಯುವಕನ್ನು ಥಳಿಸುವ ಮೊದಲು, ಮಹಿಳೆಯ ಸಂಬಂಧಿಕರು ಆಕೆಯ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry