ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟದ ಅಕ್ಕಿ ಸಾಗಣೆ: ಸಾರ್ವಜನಿಕರ ಆಕ್ಷೇಪಕ್ಕೆ ಕಾಲ್ಕಿತ್ತ ಶಿಕ್ಷಕರು

Last Updated 13 ಅಕ್ಟೋಬರ್ 2017, 9:56 IST
ಅಕ್ಷರ ಗಾತ್ರ

ರಾಮನಗರ: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಬಿಸಿಯೂಟ ಯೋಜನೆ  ಅಕ್ಕಿಯನ್ನು ಶುಕ್ರವಾರ ಬೆಳಿಗ್ಗೆ  ಸಾರ್ವಜನಿಕರೇ ಪತ್ತೆ ಮಾಡಿದ್ದಾರೆ.

ಸುಮಾರು ಹತ್ತು‌ ಮೂಟೆಗಳಲ್ಲಿ ಅಕ್ಕಿಯನ್ನು ತುಂಬಿ ಎರಡು ಆಟೊಗಳಲ್ಲಿ ಟಿಪ್ಪು ನಗರದ ಅಂಗಡಿ ಒಂದಕ್ಕೆ  ಸಾಗಿಸಲಾಗುತಿತ್ತು. ರೈಲು ನಿಲ್ದಾಣದ ಕೆಳ ಸೇತುವೆಯ ಬಳಿ ಈ ಆಟೊಗಳು ತೆರಳುತ್ತಿದ್ದ ಸಂದರ್ಭ ಸಾರ್ವಜನಿಕರು ಅನುಮಾನಗೊಂಡು ವಿಚಾರಿಸಿದ್ದಾರೆ. ಆಟೋ ಚಾಲಕರು ಈ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿ ಅಕ್ಕಿಯನ್ನು ಮರಳಿ ನಗರದ ಕುಮದಾನ್  ಮೊಹಲ್ಲಾದಲ್ಲಿನ ಯಂಗ್ ಶಿಕ್ಷಣ ಸೊಸೈಟಿಯ ರೆಹಮಾನಿಯಾ ಹಿರಿಯ ಪ್ರಾಥಮಿಕ ಶಾಲೆಯ ಮುಂದೆ ತಂದು ನಿಲ್ಲಿಸಿದ್ದಾರೆ. ಹೀಗಾಗಿ ಈ ಶಾಲೆಯಿಂದಲೇ ಬಿಸಿಯೂಟದ ಅಕ್ಕಿಯನ್ನು ಸಾಗಿಸಿರಬಹುದು ಎಂದು ಶಂಕಿಸಲಾಗಿದೆ.

ಕಾಲ್ಕಿತ್ತ ಶಿಕ್ಷಕರು: ವಿಚಾರ ತಿಳಿದು ಮಾಧ್ಯಮ ಪ್ರತಿನಿಧಿಗಳು ಶಾಲೆಗೆ ತೆರಳಿದ ಸಂದರ್ಭ ಪತ್ರಕರ್ತರ ಎದುರೇ ಶಿಕ್ಷಕರು ಅಲ್ಲಿಂದ ಕಾಲ್ಕಿತ್ತಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಕುರಿತು ರಾಮನಗರ ಡಿಡಿಪಿಯು ಗಂಗಮಾರೇಗೌಡ ಪ್ರತಿಕ್ರಿಯಿಸಿ, ಘಟನೆ ಕುರಿತು ವರದಿ ಪಡೆಯುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT