ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೊಡಾಫೋನ್,ಐಡಿಯಾ ವಿಲೀನಕ್ಕೆ ಷೇರುದಾರರ ಒಪ್ಪಿಗೆ

Last Updated 13 ಅಕ್ಟೋಬರ್ 2017, 10:28 IST
ಅಕ್ಷರ ಗಾತ್ರ

ನವದೆಹಲಿ: ವೊಡಾಫೋನ್‌, ಐಡಿಯಾ ವಿಲೀನ ಯೋಜನೆಗೆ ಐಡಿಯಾ ಸಂಸ್ಥೆಯು ಷೇರುದಾರರು ಒಪ್ಪಿಗೆ ನೀಡಿದ್ದಾರೆ.

ಗುರುವಾರ ನಡೆದ ಸಭೆಯಲ್ಲಿ ಶೇ 99 ರಷ್ಟು ಷೇರುದಾರರು ವಿಲೀನದ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯು ಮುಂಬೈ ಷೇರುಪೇಟೆಗೆ ಶುಕ್ರವಾರ ಮಾಹಿತಿ ನೀಡಿದೆ.

ವಿಲೀನಕ್ಕೆ ಒಪ್ಪಿಗೆ ನೀಡುವಂತೆ ಎರಡೂ ಸಂಸ್ಥೆಗಳು ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯಮಂಡಳಿಗೆ (ಎನ್‌ಸಿಎಲ್‌ಟಿ) ಕೇಳಿಕೊಂಡಿದ್ದವು. ಭಾರತೀಯ ದೂರಸಂಪರ್ಕ ಪ್ರಾಧಿಕಾರದಿಂದ ಅಂತಿಮ ಒಪ್ಪಿಗೆ ಸಿಗಬೇಕಿದೆ.

ದೂರಸಂಪರ್ಕ ರಂಗದಲ್ಲಿನ ಅತಿದೊಡ್ಡ ವಿಲೀನ ನಿರ್ಧಾರ ಇದಾಗಿದೆ. ಈ ವಿಲೀನದಿಂದಾಗಿ, ಮೊಬೈಲ್‌ ಬಳಕೆದಾರರ ಸಂಖ್ಯೆ ಮತ್ತು ವರಮಾನಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ ಹೊಸ ದೂರಸಂಪರ್ಕ ಸಂಸ್ಥೆ ಅಸ್ತಿತ್ವಕ್ಕೆ ಬರಲಿದೆ. ಸದ್ಯ, ಮಾರುಕಟ್ಟೆಯಲ್ಲಿ ಏರ್‌ಟೆಲ್‌ ಮೊದಲ ಸ್ಥಾನದಲ್ಲಿದ್ದು,  ವೊಡಾಫೋನ್‌ ಎರಡನೇ ಸ್ಥಾನ, ಐಡಿಯಾ ಮೂರನೇ ಸ್ಥಾನದಲ್ಲಿದೆ. ಈ ವಿಲೀನದಿಂದಾಗಿ ವೊಡಾಫೋನ್‌ಗೆ ₹82,800 ಕೋಟಿ ಮತ್ತು ಐಡಿಯಾಗೆ ₹72,200 ಕೋಟಿ ಮೌಲ್ಯ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT