ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ತರಬೇತಿಗಾಗಿ ಜಪಾನ್‌ಗೆ ತೆರಳಲಿದ್ದಾರೆ ಭಾರತದ 3 ಲಕ್ಷ ಯುವಕರು!

Last Updated 13 ಅಕ್ಟೋಬರ್ 2017, 14:03 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ 3–5 ವರ್ಷಗಳ ಕಾಲ ಉದ್ಯೋಗ ತರಬೇತಿ ಪಡೆಯಲು ದೇಶದ ಸುಮಾರು 3 ಲಕ್ಷ ಯುವಕರು  ಜಪಾನ್‌ಗೆ ತೆರಳಲಿದ್ದಾರೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ಉದ್ಯೋಗ ತರಬೇತಿಗಾಗಿ ತಗಲುವ ವೆಚ್ಚವನ್ನೂ ಜಪಾನ್‌ ಸರ್ಕಾರವೇ ಭರಿಸಲಿದೆ.

ಭಾರತ, ಜಪಾನ್‌ ನಡುವಣ ತಾಂತ್ರಿಕ ತರಬೇತಿ ಕಾರ್ಯಕ್ರಮದ ಒಪ್ಪಂದಕ್ಕೆ ಮೂರುದಿನಗಳ ಜಪಾನ್‌ ಭೇಟಿ ವೇಳೆ ಅನುಮೋದನೆ ದೊರೆಯಲಿದೆ ಎಂದು ಕೌಶಲ್ಯ ಅಭಿವೃದ್ಧಿ ಹಾಗೂ ವಾಣಿಜ್ಯೋದ್ಯಮ ಸಚಿವ ತಿಳಿಸಿದ್ದಾರೆ. ಪ್ರಧಾನ್‌ ಅಕ್ಟೋಬರ್‌ 16ರಂದು ಟೋಕಿಯೋ ಪ್ರವಾಸ ಕೈಗೊಳ್ಳಲಿದ್ದಾರೆ.

ಜಪಾನ್‌ ಸರ್ಕಾರದ ಧನ ಸಹಾಯದೊಂದಿಗೆ ಮುಂದಿನ ಮುಂದಿನ ಮೂರು ವರ್ಷಗಳಲ್ಲಿ ದೇಶದ 3 ಲಕ್ಷ ಯುವಕರನ್ನು ಉದ್ಯೋಗ ತರಬೇತಿಗಾಗಿ ಕಳುಹಿಸಿಕೊಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

3–5 ವರ್ಷಗಳ ಅವದಿಯಲ್ಲಿ ತರಬೇತಿ ಪಡೆಯಲಿರುವ ಯುವಕರಿಗೆ ಎಲ್ಲಾ ಸೌಕರ್ಯಗಳನ್ನೂ ಒದಗಿಸಿಕೊಡಲಾಗುತ್ತದೆ. ಸುಮಾರು 50 ಯುವಕರು ಅಲ್ಲಿಯೇ ಕೆಲಸ ಗಿಟ್ಟಿಸಿಕೊಳ್ಳಬಹುದು. ತರಬೇತಿಗಾಗಿ ಯುವಕರನ್ನು ಜಪಾನ್‌ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ ಪಾರದರ್ಶಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ತರಬೇತಿ ಪಡೆದು ದೇಶಕ್ಕೆ ಮರಳಿದ ನಂತರ ಯುವಕರು ನಮ್ಮ ಉದ್ಯಮಕ್ಕೆ ಕೊಡುಗೆ ನೀಡಲಿದ್ದಾರೆ ಎಂದೂ ಹೇಳಿದ್ದಾರೆ.

ಕೌಶಲ್ಯ ಅಭಿವೃದ್ಧಿ ದೃಷ್ಟಿಯಿಂದ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಹಕಾರ ಸಾಧಿಸಲು ಈ ಒಪ್ಪಂದಕ್ಕೆ ಒಪ್ಪಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT