ದೀಪಾವಳಿಗೆ ದೇಶಿ ಆಕಾಶಬುಟ್ಟಿ

ಮಂಗಳವಾರ, ಜೂನ್ 25, 2019
29 °C

ದೀಪಾವಳಿಗೆ ದೇಶಿ ಆಕಾಶಬುಟ್ಟಿ

Published:
Updated:
ದೀಪಾವಳಿಗೆ ದೇಶಿ ಆಕಾಶಬುಟ್ಟಿ

ದೀಪಾವಳಿ ಸಂದರ್ಭದಲ್ಲಿ ಆಕಾಶಬುಟ್ಟಿಗಳನ್ನು ಮನೆ ಎದುರು ತೂಗು ಹಾಕುತ್ತಾರೆ. ಈ ಬುಟ್ಟಿಗಳು ಶುಭ, ಅದೃಷ್ಟ ಸೂಚಕವೂ ಹೌದು. ಕರಾವಳಿ ಭಾಗದಲ್ಲಿ ಇವುಗಳನ್ನು ಗೂಡು ದೀಪ ಎಂದು ಕರೆದರೆ, ಉತ್ತರ ಕರ್ನಾಟಕದಲ್ಲಿ ಆಕಾಶ ಬುಟ್ಟಿ ಎಂದು ಕರೆಯುತ್ತಾರೆ.

ಹಿಂದೆಲ್ಲಾ ಬಿದಿರು ಕಡ್ಡಿಗಳಿಂದ ಮಾಡಿದ ಆಕಾಶ ಬುಟ್ಟಿಗಳನ್ನು ಮನೆಯೆದುರು ಕಾಣುತ್ತಿದ್ದೇವು. ಆದರೆ ಕಳೆದ 10 ವರ್ಷಗಳಿಂದ ಚೀನಿ ಆಕಾಶಬುಟ್ಟಿಗಳೇ ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ದೇಶಿ ವಸ್ತುಗಳ ಬಳಕೆ ಹಾಗೂ ಮಾರಾಟವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನಗರದ ನಗರದ ಸಮರ್ಪಣ ಸಮಾಜ ಸ್ಪಂದನ ಸಂಘ ದೀಪಾವಳಿಗೆ ದೇಶಿ ಆಕಾಶಬುಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ.

ಮನೆ ಮುಂದೆ ಬಿದಿರಿನ ಕಡ್ಡಿಗಳಿಂದ ಮಾಡಿದ ಆಕಾಶ ಬುಟ್ಟಿಗಳು ದುಷ್ಟ ಶಕ್ತಿಗಳನ್ನು ಮನೆಯೊಳಗೆ ಬಾರದಂತೆ ತಡೆದರೆ, ಅದರೊಳಗೆ ಹಚ್ಚಿರುವ ಹಣತೆಯು ಐಶ್ವರ್ಯದ ಲಕ್ಷ್ಮೀಯನ್ನು ಮನೆಯೊಳಗೆ ಸ್ವಾಗತಿಸುತ್ತದೆ ಎಂದು ಪ್ರತೀಕವಿದೆ. ನಾಲ್ಕು ವರ್ಷಗಳಿಂದ ಬಿದಿರಿನ ಕೆಲಸ ಮಾಡುವ ಮೇದರ ಜನಾಂಗದಿಂದ ಬಿದಿರಿನ ಕಡ್ಡಿಗಳು ಹಾಗೂ ದೇಶಿ ಬಟ್ಟೆಯಿಂದ ಆಕಾಶ ಬುಟ್ಟಿಯನ್ನು ತಯಾರಿಸಿ ಸಮರ್ಪಣ ಸಮಾಜ ಸ್ಪಂದನ ಸಂಘ ಮಾರಾಟ ಮಾಡುತ್ತಿದೆ. ಈ ವರ್ಷ ಈ ಆಕಾಶಬುಟ್ಟಿಗಳಿಗೆ ‘ಆಯೋಜಕ’ ಎಂಬ ಹೆಸರು ಇಡಲಾಗಿದೆ.

ಆಕಾಶ ಬುಟ್ಟಿಗಳಿಗೆ ಬೇಕಾದ ಗೋಂದು, ದಾರವನ್ನು ಸಮರ್ಪಣ ಸಮಾಜದ ಮಹಿಳೆಯರು ಮಾಡುತ್ತಾರೆ. ಬುಟ್ಟಿಗೆ ಸುತ್ತಲು ಬೇಕಾದ ತೆಳುಬಟ್ಟೆಯನ್ನು ಸೂರತ್‌ನಿಂದ ತರಿಸಿಕೊಂಡಿದ್ದಾರೆ. ಈ ಆಕಾಶಬುಟ್ಟಿಗಳನ್ನು ಸುಮನಹಳ್ಳಿಯ ಮನಃ ಪರಿವರ್ತನಾ ಕೇಂದ್ರದ ಬಾಲಕರು ತಯಾರಿಸಿದ್ದಾರೆ. ಬಿದಿರಿನ ಕಡ್ಡಿಗಳನ್ನು ಹಾಗೂ ಅಗತ್ಯ ವಸ್ತುಗಳನ್ನು ಮನಃ ಪರಿವರ್ತನಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಈ ಬಾಲಕರಿಗೆ ಸಮರ್ಪಣಾ ಸಂಸ್ಥೆಯ ಸದಸ್ಯರೊಬ್ಬರು ಹೇಳಿಕೊಡುತ್ತಾರೆ. ಪ್ರತಿದಿನ 50–60 ಆಕಾಶಬುಟ್ಟಿ ತಯಾರಾಗುತ್ತದೆ. ಒಂದು ಆಕಾಶ ಬುಟ್ಟಿಗೆ ₹300.

‘ಈ ಬಾರಿ ಚನ್ನರಾಯಪಟ್ಟಣ ಮರದ ಕಡ್ಡಿಗಳಿಂದಲೂ ಆಕಾಶ ಬುಟ್ಟಿ ತಯಾರಿಸಲಾಗಿದೆ. ಒಂದು ಆಕಾಶ ಬುಟ್ಟಿಯಲ್ಲಿ ದುಡ್ಡಿನಲ್ಲಿ ಆಕಾಶಬುಟ್ಟಿ  ಮಾಡಿದ ವ್ಯಕ್ತಿಗೆ ₹30, ಕರ್ನಾಟಕ ಯೋಧರ ಕಲ್ಯಾಣ ನಿಧಿಗೆ ₹30, ಗೋಂದು, ದಾರ ಸಿದ್ದಪಡಿಸಿದ  ಮಹಿಳೆಯರಿಗೆ ₹20, ಪ್ಯಾಕಿಂಗ್‌, ವಿತರಣೆ ಹೊರತುಪಡಿಸಿ ಉಳಿದ ಹಣ ಸಮರ್ಪಣ ಸಂಸ್ಥೆಗೆ ಸೇರುತ್ತದೆ’ ಎನ್ನುತ್ತಾರೆ ಸಮರ್ಪಣ ಸಮಾಜ ಸ್ಪಂದನ ಸಂಘದ ಸ್ಥಾಪಕರಾದ ಶಿವಕುಮಾರ ಹೊಸಮನಿ.

₹150 ಬೆಲೆಯ ಆಕಾಶಬುಟ್ಟಿಯೂ ಇಲ್ಲಿ ಲಭ್ಯ. ಆಕಾಶಬುಟ್ಟಿಯ ಜೊತೆಗೆ ಎರಡೆರಡು ಹಣತೆಗಳನ್ನು ಉಚಿತವಾಗಿ ಸಮರ್ಪಣ ಸಂಸ್ಥೆ ನೀಡುತ್ತದೆ. ಕಳೆದ ಗಣಪತಿ ಹಬ್ಬಕ್ಕೆ ಸಮರ್ಪಣ ಸಂಸ್ಥೆ ಕರೆಯ ಅಂಚಿನ ಫಲವತ್ತಾದ ಮಣ್ಣಿನಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಮಾಡಿ ಮಾರಿದ್ದರು. ಈ ಗಣೇಶನ ಮೂರ್ತಿಗಳನ್ನು ಮನೆಗಳಲ್ಲಿ ವಿಸರ್ಜಿಸಲು  ಸಾಧ್ಯವಾಗದಿದ್ದರೆ ಆ ಮಣ್ಣನ್ನು ವಾಪಸ್‌ ತಂದುಕೊಡುವಂತೆ ಸಂಸ್ಥೆ ಗ್ರಾಹಕರಿಗೆ ಮನವಿ ಮಾಡಿತ್ತು. ‘ಸುಮಾರು 800 ಮೂರ್ತಿಗಳ ಮಣ್ಣು  ವಾಪಸ್‌ ಬಂದಿತ್ತು. ಆ ಮಣ್ಣಿನಿಂದ  ಹಣತೆ ಮಾಡಲಾಗಿದೆ. ಸುಮಾರು 10 ಸಾವಿರ ಹಣತೆಗಳನ್ನು ಮಾಡಲಾಗಿದೆ’ ಎಂದು ಶಿವಕುಮಾರ್‌ ಹೇಳುತ್ತಾರೆ.

‘ಈ ಆಕಾಶಬುಟ್ಟಿಯಲ್ಲಿ ಕೆಳಗೆ ಹಣತೆ ಇಡಬಹುದು. ಕೆಲ ಆಕಾಶ ಬುಟ್ಟಿಗೆ ಮೇಲಿನಿಂದ ವಿದ್ಯುತ್‌ ಬಲ್ಬ್‌ ಜೋಡಿಸಬಹುದು. ಆದರೆ ಹಣತೆ ಹಾಗೂ ವಿದ್ಯುತ್‌ ಬಲ್ಬ್‌ ಎರಡೂ ಇಡಬಾರದು. ಒಡೆದು ಹೋಗುವ ಅಪಾಯವಿರುತ್ತದೆ’ ಎಂದು ಶಿವಕುಮಾರ್‌ ಎಚ್ಚರಿಕೆ ನೀಡುತ್ತಾರೆ. ಈ ಆಕಾಶ ಬುಟ್ಟಿಗಳನ್ನು ಮಂಗಳೂರು, ಗದಗ, ರಾಯಚೂರು, ಹುಬ್ಬಳ್ಳಿ ಹಾಗೂ ರಾಜ್ಯದಾದ್ಯಂತ ಮಾರಾಟ ಮಾಡಲಾಗುತ್ತಿದೆ.

ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ನಗರದ ಕೆಲ ಶಾಲೆಗಳಿಗೆ ಹೋಗಿ ಪಟಾಕಿ ದುರಂತ ಹಾಗು ಪರಿಸರ ಮಾಲಿನ್ಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಸಮರ್ಪಣ ಸಂಸ್ಥೆ ಮಾಡುತ್ತದೆ.

ಆಕಾಶ ಬುಟ್ಟಿ ಬೇಕಾದವರು ಶಿವಕುಮಾರ್‌ ಅವರ 9980008074 ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮಾಡಿದರೆ ಅವರು ಆಕಾಶಬುಟ್ಟಿ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry