ಹೃತಿಕ್‌ಗೆ ವಾಣಿ ಜೋಡಿ

ಮಂಗಳವಾರ, ಜೂನ್ 18, 2019
23 °C

ಹೃತಿಕ್‌ಗೆ ವಾಣಿ ಜೋಡಿ

Published:
Updated:
ಹೃತಿಕ್‌ಗೆ ವಾಣಿ ಜೋಡಿ

ಭಾರತೀಯ ಫ್ಯಾಷನ್‌ ಲೋಕದಲ್ಲಿ ಮಾಡೆಲ್‌ ಹಾಗೂ ನಟಿಯಾಗಿ ಗುರುತಿಸಿಕೊಂಡಿರುವ ವಾಣಿ ಕಪೂರ್‌, ಯಶ್‌ ರಾಜ್‌ ಫಿಲ್ಮ್ಸ್‌ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಹೃತಿಕ್‌ ರೋಶನ್‌ ಅವರೊಂದಿಗೆ ಅಭಿನಯಿಸಲಿದ್ದಾರೆ.

ಬಹುದೊಡ್ಡ ಆ್ಯಕ್ಷನ್‌ ಸಿನಿಮಾ ಇದಾಗಲಿದೆ ಎಂದು ಹೇಳಲಾಗುತ್ತಿರುವ ಈ ಚಿತ್ರದಲ್ಲಿ ಟೈಗರ್‌ ಶ್ರಾಫ್‌ ಕೂಡ ಇರಲಿದ್ದಾರೆ. 2019ರ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಸುಶಾಂತ್‌ ಸಿಂಗ್‌ ಹಾಗೂ ಪ್ರಣೀತಿ ಚೋಪ್ರ ಅವರೊಂದಿಗೆ ಶುದ್ಧ ದೇಸಿ ರೊಮ್ಯಾನ್ಸ್‌ ಚಿತ್ರದಲ್ಲಿ ಅಭಿನಯಿಸುವ ಮೂಲಕ ವಾಣಿ ಕಪೂರ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಮುಂದಿನ ದಿನಗಳಲ್ಲಿ ತಮಿಳು ಸಿನಿಮಾ ರಂಗದಲ್ಲಿ ವಾಣಿ ಅವಕಾಶಗಳನ್ನು ಗಿಟ್ಟಿಸಿಕೊಂಡರು.

ಹೃತಿಕ್‌ ಮುಂದಿನ ಚಿತ್ರದಲ್ಲಿ ಹೊಸಮುಖವೇ ಬೇಕು ಎಂದು ಹುಡುಕಾಟದಲ್ಲಿ ತೊಡಗಿದ್ದ ತಂಡ ಇದೀಗ ವಾಣಿ ಕಪೂರ್‌ ಅಭಿನಯಿಸುವುದನ್ನು ಖಚಿತಪಡಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry