ಮೋದಿ, ಯಡಿಯೂರಪ್ಪ ವಿರುದ್ಧ ಅಸಭ್ಯವಾಗಿ ಮಾತನಾಡಿರುವ ಸಚಿವ ರೋಷನ್‌ ಬೇಗ್ ವಿಡಿಯೊ ವೈರಲ್‌

ಗುರುವಾರ , ಜೂನ್ 27, 2019
26 °C

ಮೋದಿ, ಯಡಿಯೂರಪ್ಪ ವಿರುದ್ಧ ಅಸಭ್ಯವಾಗಿ ಮಾತನಾಡಿರುವ ಸಚಿವ ರೋಷನ್‌ ಬೇಗ್ ವಿಡಿಯೊ ವೈರಲ್‌

Published:
Updated:
ಮೋದಿ, ಯಡಿಯೂರಪ್ಪ ವಿರುದ್ಧ ಅಸಭ್ಯವಾಗಿ ಮಾತನಾಡಿರುವ ಸಚಿವ ರೋಷನ್‌ ಬೇಗ್ ವಿಡಿಯೊ ವೈರಲ್‌

ಬೆಂಗಳೂರು: ಆವೇಶದಿಂದ ಮಾತನಾಡುವ ಭರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅಸಭ್ಯ ಪದ ಬಳಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಶಿವಾಜಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಬೇಗ್‌ ತಮಿಳಿನಲ್ಲಿ ಮಾಡಿದ ಭಾಷಣದ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

‘ಅಧಿಕಾರಕ್ಕೆ ಬಂದ ಬಳಿಕ ಎಲ್ಲರೂ ‘ನಮ್ಮ ಮೋದಿ ನಮ್ಮ ಮೋದಿ’ ಅಂತ ಹೊಗಳುತ್ತಿದ್ದರು. ಅಧಿಕಾರಕ್ಕೆ ಕೂರಿಸಿದ ಜನರೇ ಈಗ ಮೋದಿಯನ್ನು ಶಪಿಸುತ್ತಿದ್ದಾರೆ. ನೋಟ್ ಬ್ಯಾನ್ ಮಾಡಿದ ಮೇಲೆ ಏನಾಯ್ತು? ಬಿಜೆಪಿ ಪಕ್ಷದವರೇ ... ಮಗ ಏನೆಲ್ಲಾ ಮಾಡಿಬಿಟ್ಟ ಎಂದು ಬೈಯುತ್ತಿದ್ದಾರೆ’ಎಂದು ಬೇಗ್ ಹೇಳಿದ್ದಾರೆ.

‘ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕಾರಣ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾರೆ’ ಎಂದೂ ಬಣ್ಣಿಸಿರುವ ಬೇಗ್‌, ‘ನಾವು 5 ರೂಪಾಯಿಗೆ ಬ್ರೇಕ್ ಫಾಸ್ಟ್, 10 ರೂಪಾಯಿಗೆ ಊಟ ಕೊಡ್ತಿದ್ದೀವಿ. ನೀವ್ಯಾಕೆ ಇದನ್ನೆಲ್ಲ ಕೊಡಲಿಲ್ಲ? ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜನರಿಗೆ ಇದೆನ್ನೆಲ್ಲ ಯಾಕೆ ಕೊಡಲಿಲ್ಲ? ಯಡಿಯೂರಪ್ಪ ಬರೀ ಶೋಭಾ ಕರಂದ್ಲಾಜೆ ನೋಡ್ಕೊಂಡು ನಿಂತಿದ್ದರು’ಎಂದೂ ಯಡಿಯೂರಪ್ಪ ವಿರುದ್ಧ ಲಘುವಾಗಿ ಮಾತನಾಡಿದ್ದರು.

ಬೇಗ್ ಅವರ ಈ ಮಾತುಗಳಿಗೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಸಚಿವರಾಗಿದ್ದುಕೊಂಡು ಪ್ರಧಾನಿಗೆ ಗೌರವ ಕೊಡಲು ಗೊತ್ತಾಗದ ಬೇಗ್ ವರ್ತನೆ, ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ಬೇಗ್ ಅವರು ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಪ್ರತಾಪ್‌ ಸಿಂಹ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ‘ಬೇಗ್‌ ಮಾತನಾಡಿರುವ ವಿಷಯ ನನಗೆ ಗೊತ್ತಿಲ್ಲ. ಯಾವತ್ತೂ ಅವರು ಆ ರೀತಿ ಮಾತನಾಡಿದವರಲ್ಲ. ಆ ಬಗ್ಗೆ ತಿಳಿದುಕೊಂಡು ಹೇಳುತ್ತೇನೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry