ಗುಜರಾತ್ ಫಾರ್ಚೂನ್‌ಜೈಂಟ್ಸ್‌ಗೆ ಜಯ

ಶುಕ್ರವಾರ, ಮೇ 24, 2019
28 °C
ಪುಣೆ ಆವೃತ್ತಿಯ ಮೊದಲ ಪಂದ್ಯದಲ್ಲಿ ಸುಕೇಶ್ ಮಿಂಚು

ಗುಜರಾತ್ ಫಾರ್ಚೂನ್‌ಜೈಂಟ್ಸ್‌ಗೆ ಜಯ

Published:
Updated:
ಗುಜರಾತ್ ಫಾರ್ಚೂನ್‌ಜೈಂಟ್ಸ್‌ಗೆ ಜಯ

ಪುಣೆ: ಪ್ಲೇ ಆಫ್‌ಗೆ ಈಗಾಗಲೇ ಅರ್ಹತೆ ಗಿಟ್ಟಿಸಿರುವ ಕನ್ನಡಿಗ ಸುಕೇಶ್ ಹೆಗಡೆ ಸಾರಥ್ಯದ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡ ಪುಣೆ ಆವೃತ್ತಿಯ ಮೊದಲ ಪಂದ್ಯದಲ್ಲಿಯೂ ಶುಕ್ರವಾರ ಗೆಲುವಿನ ಓಟ ಮುಂದುವರಿಸಿದೆ.

ಪುಣೇರಿ ಪಲ್ಟನ್ ವಿರುದ್ಧದ ಪ್ರೊ ಕಬಡ್ಡಿ ಪಂದ್ಯದಲ್ಲಿ ಗುಜರಾತ್ ತಂಡ 44–20 ಪಾಯಿಂಟ್ಸ್‌ಗಳಿಂದ ಗೆದ್ದಿದೆ. ತವರಿನ ಅಭಿಮಾನಿಗಳ ಎದುರು ಜಯದ ನಿರೀಕ್ಷೆಯಲ್ಲಿದ್ದ ಪುಣೆ ತಂಡಕ್ಕೆ ನಿರಾಸೆಯಾಗಿದೆ. ಈ ತಂಡ ಮೊದಲರ್ಧದ ವೇಳೆಯಲ್ಲಿಯೇ 7–17 ಪಾಯಿಂಟ್ಸ್‌ಗಳಿಂದ ಹಿಂದೆ ಉಳಿದಿತ್ತು.

ಗುಜರಾತ್ ತಂಡಕ್ಕೆ ಸುಕೇಶ್ ಬಲ ತುಂಬಿದರು. ರೈಡಿಂಗ್‌ನಲ್ಲಿ 14 ಹಾಗೂ ಬೋನಸ್‌ನಲ್ಲಿ ಒಂದು ಪಾಯಿಂಟ್ಸ್ ಕಲೆಹಾಕುವ ಮೂಲಕ ಜಯದ ರೂವಾರಿ ಎನಿಸಿದರು. ಸುನಿಲ್ ಕುಮಾರ್ ಏಳು ಪಾಯಿಂಟ್ಸ್‌ಗಳಿಂದ ಗಮನಸೆಳೆದರು.

ಪುಣೇರಿ ತಂಡದ ಸುರೇಶ್ ಕುಮಾರ್ ಆರು ಪಾಯಿಂಟ್ಸ್ ತಂದರೆ, ಮೋನು ಮೂರು ಪಾಯಿಂಟ್ಸ್ ಗಳಿಸಿದರು. ಈ ತಂಡ ಕೂಡ ತವರಿನ ಆವೃತ್ತಿಯ ಪಂದ್ಯಗಳನ್ನು ಆಡುವ ಮೊದಲೇ ಪ್ಲೇ ಆಫ್ ತಲುಪಿದೆ.

ಗುಜರಾತ್ ತಂಡ ‘ಎ’ ವಲಯದ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ತಂಡದ ಬಳಿ 77 ಪಾಯಿಂಟ್ಸ್‌ಗಳು ಇವೆ. ಪುಣೇರಿ ತಂಡ ಕೂಡ ಇದೇ ವಲಯದಲ್ಲಿ 63 ಪಾಯಿಂಟ್ಸ್‌ಗಳಿಂದ ಮೂರನೇ ಸ್ಥಾನದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry