ಭಾರತಕ್ಕೆ ಬಂದ ನ್ಯೂಜಿಲೆಂಡ್‌ ತಂಡ

ಮಂಗಳವಾರ, ಜೂನ್ 18, 2019
24 °C

ಭಾರತಕ್ಕೆ ಬಂದ ನ್ಯೂಜಿಲೆಂಡ್‌ ತಂಡ

Published:
Updated:
ಭಾರತಕ್ಕೆ ಬಂದ ನ್ಯೂಜಿಲೆಂಡ್‌ ತಂಡ

ಮುಂಬೈ: ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭಾಗವಹಿಸಲಿರುವ ನ್ಯೂಜಿಲೆಂಡ್‌ ತಂಡದವರು ಶುಕ್ರವಾರ ಭಾರತಕ್ಕೆ ಬಂದಿದ್ದಾರೆ.

ಈ ವಿಷಯವನ್ನು ಕಿವೀಸ್‌ ನಾಡಿನ ತಂಡದ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಮತ್ತೆ ಭಾರತಕ್ಕೆ ಬಂದಿರುವುದು ಖುಷಿ ನೀಡಿದೆ. ನಾವೆಲ್ಲಾ ಟ್ರೈಡೆಂಟ್‌ ಹೋಟೆಲ್‌ನಲ್ಲಿ ತಂಗಿದ್ದೇವೆ’ ಎಂದು ಟೇಲರ್‌ ಬರೆದಿದ್ದಾರೆ.

ಒಂಬತ್ತು ಸದಸ್ಯರ ತಂಡ ಗುರುವಾರ ನ್ಯೂಜಿಲೆಂಡ್‌ನಿಂದ ಹೊರಟಿತ್ತು. ನ್ಯೂಜಿಲೆಂಡ್‌ ‘ಎ’ ತಂಡ ಭಾರತ ‘ಎ’ ವಿರುದ್ಧ ವಿಶಾಖಪಟ್ಟಣದಲ್ಲಿ ಏಕದಿನ ಸರಣಿ ಆಡುತ್ತಿದ್ದು ಈ ಪೈಕಿ ಆರು ಮಂದಿಯನ್ನು ನ್ಯೂಜಿಲೆಂಡ್‌ ಆಯ್ಕೆ ಸಮಿತಿ ಸೀನಿಯರ್‌ ತಂಡಕ್ಕೆ ಆಯ್ಕೆ ಮಾಡಲಿದೆ.

ಕಿವೀಸ್‌ ನಾಡಿನ ತಂಡದವರು ಶನಿವಾರ ಬೆಳಿಗ್ಗೆ ಸಿಸಿಐ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲಿದ್ದಾರೆ. ಏಕದಿನ ಸರಣಿ ಅಕ್ಟೋಬರ್‌ 22ರಂದು ಆರಂಭವಾಗಲಿದ್ದು ಅದಕ್ಕೂ ಮುನ್ನ ಪ್ರವಾಸಿ ಪಡೆ ಬಿಸಿಸಿಐ ಮಂಡಳಿ ಅಧ್ಯಕ್ಷರ ಇಲೆವನ್‌ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳು ಅಕ್ಟೋಬರ್‌ 17 ಮತ್ತು 19 ರಂದು ನಿಗದಿಯಾಗಿವೆ.

ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಏಕದಿನ ಸರಣಿಯ ಪಂದ್ಯಗಳು ಮುಂಬೈ (ಅಕ್ಟೋಬರ್‌ 22), ಪುಣೆ (25) ಮತ್ತು ಕಾನ್ಪುರದಲ್ಲಿ (29) ಆಯೋಜನೆಯಾಗಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry