ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಸಮಿತಿಯ ಸದಸ್ಯರಾಗಿ ಶಕೀಬ್‌

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಲಂಡನ್‌: ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ ಅವರು ಶುಕ್ರವಾರ ಎಂಸಿಸಿ ವಿಶ್ವ ಕ್ರಿಕೆಟ್‌ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದಾರೆ.

ಅವರು ಈ ಸಾಧನೆ ಮಾಡಿದ ಬಾಂಗ್ಲಾದೇಶದ ಮೊದಲ ಕ್ರಿಕೆಟಿಗ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‌ ತಂಡದ ಆಟಗಾರ್ತಿ ಸೂಜಿ ಬೇಟ್ಸ್‌, ಇಯಾನ್‌ ಬಿಷಪ್‌ ಮತ್ತು ಕುಮಾರ ಧರ್ಮಸೇನಾ ಅವರೂ ಸಮಿತಿಯಲ್ಲಿದ್ದಾರೆ. ಇಂಗ್ಲೆಂಡ್‌ ತಂಡದ ಹಿರಿಯ ಆಟಗಾರ ಮೈಕ್‌ ಗ್ಯಾಟಿಂಗ್‌ ಅವರನ್ನು ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

‘ಮೇ ತಿಂಗಳಿನಲ್ಲಿ ನಡೆದ ಎಂಸಿಸಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮೈಕ್‌ ಗ್ಯಾಟಿಂಗ್‌ ಅವರನ್ನು ವಿಶ್ವ ಕ್ರಿಕೆಟ್‌ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಅವರು ಇಂಗ್ಲೆಂಡ್‌ನ ಮತ್ತೊಬ್ಬ ಹಿರಿಯ ಆಟಗಾರ ಮೈಕ್‌ ಬ್ರೇರ್‌ಲೆ ಅವರಿಂದ ತೆರವಾಗಿರುವ ಸ್ಥಾನ ಅಲಂಕರಿಸಲಿದ್ದಾರೆ’ ಎಂದು ಎಂಸಿಸಿ ಪ್ರಕಟಣೆಯಲ್ಲಿ ಹೇಳಿದೆ.

1998ರಲ್ಲಿ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ್ದ ಗ್ಯಾಟಿಂಗ್, ಬಳಿಕ ದಶಕಗಳ ಕಾಲ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ಜೊತೆಗೆ 2014ರಲ್ಲಿ ಅವರು ಎಂಸಿಸಿಯ ಅಧ್ಯಕ್ಷರೂ ಆಗಿದ್ದರು. ಶಕೀಬ್‌ 51 ಟೆಸ್ಟ್‌ ಮತ್ತು 177 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT