ಭಾರತದಲ್ಲಿ ಫುಟ್‌ಬಾಲ್‌ಗೆ ಭವ್ಯ ಭವಿಷ್ಯ

ಮಂಗಳವಾರ, ಜೂನ್ 25, 2019
24 °C

ಭಾರತದಲ್ಲಿ ಫುಟ್‌ಬಾಲ್‌ಗೆ ಭವ್ಯ ಭವಿಷ್ಯ

Published:
Updated:
ಭಾರತದಲ್ಲಿ ಫುಟ್‌ಬಾಲ್‌ಗೆ ಭವ್ಯ ಭವಿಷ್ಯ

ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌)ನಂಥ ಟೂರ್ನಿ ಗಳು ಜನಪ್ರಿಯವಾಗುತ್ತಿರುವ ಭಾರತ ದಲ್ಲಿ ಫುಟ್‌ಬಾಲ್ ಕ್ರೀಡೆಗೆ ಭವ್ಯ ಭವಿಷ್ಯವಿದೆ ಎಂದು ಇಂಗ್ಲೆಂಡ್‌ನಲ್ಲಿ ಪ್ರಸಿದ್ಧವಾಗಿರುವ ಪ್ರೀಮಿಯರ್ ಲೀಗ್ ಆಯೋಜಕರು ಮತ್ತು ಖ್ಯಾತ ಆಟಗಾರರು ಅಭಿಪ್ರಾಯಪಟ್ಟರು.

ಪ್ರೀಮಿಯರ್ ಲೀಗ್ ಫ್ಯಾನ್ ಪಾರ್ಕ್‌ ಆಯೋಜನೆಯ ಭಾಗವಾಗಿ ನಗರಕ್ಕೆ ಬಂದಿರುವ ಹಿರಿಯ ಆಟಗಾರರಾದ ಅಲನ್ ಶಿಯರರ್‌, ರಾಬರ್ಟ್‌ ಪಿಯರ್ಸ್‌, ರಾನಿ ಜಾನ್ಸನ್‌, ಶೇ ಗಿವನ್‌ ಮತ್ತು ಪ್ರೀಮಿಯರ್‌ ಲೀಗ್ ವ್ಯವಸ್ಥಾಪಕ ನಿರ್ದೇಶಕ ರಿಚರ್ಡ್ ಮಾಸ್ಟರ್ಸ್‌ ಶುಕ್ರವಾರ ಪತ್ರಕರ್ತರ ಜೊತೆ ಅಭಿಪ್ರಾಯ ಹಂಚಿಕೊಂಡರು.

‘ಕ್ರಿಕೆಟ್ ಕ್ರೀಡೆಯನ್ನು ಭಾರತೀಯರ ಧರ್ಮ ಎನ್ನುತ್ತಾರೆ. ಇಂಥ ದೇಶದಲ್ಲಿ ಫುಟ್‌ಬಾಲ್ ಬಗ್ಗೆ ಜನರ ಆಸಕ್ತಿ ಕುರಿತು ತಿಳಿದು ನಾನು ಬೆರಗಾಗಿದ್ದೇನೆ’ ಎಂದು ಅಲನ್ ಶಿಯರರ್‌ ಹೇಳಿದರು.

‘ಭಾರತದಲ್ಲಿ ಫುಟ್‌ಬಾಲ್‌ಗೆ ಜನರು ಮಾರು ಹೋಗಿದ್ದಾರೆ. ಐಎಸ್‌ಎಲ್‌ ಆರಂಭವಾದ ನಂತರ ಅತ್ಯಂತ ವೇಗವಾಗಿ ಫುಟ್‌ಬಾಲ್ ಪ್ರೇಮ ಇಲ್ಲಿ ಬೆಳೆಯುತ್ತಿದೆ’ ಎಂದು ರಾಬರ್ಟ್ ಪಿಯರ್ಸ್‌ ಮತ್ತು ರಾನಿ ಜಾನ್ಸೆನ್ ಹೇಳಿದರು.

ದಾಖಲೆ ಮುರಿಯುವುದು ಸಾಧ್ಯ: ‘ದಾಖಲೆಗಳು ಇರುವುದೇ ಮುರಿಯು ವುದಕ್ಕೆ. ನನ್ನ ದಾಖಲೆಗಳು ಕೂಡ ದೀರ್ಘ ಕಾಲ ಉಳಿಯುತ್ತವೆ ಎಂದು ನನಗನಿಸುವುದಿಲ್ಲ’ ಎಂದು ಪ್ರೀಮಿಯರ್ ಲೀಗ್‌ನಲ್ಲಿ ಎರಡು ದಾಖಲೆಗಳನ್ನು (ಅತಿ ಹೆಚ್ಚು ಗೋಲು, ಅತಿ ಹೆಚ್ಚು ಹ್ಯಾಟ್ರಿಕ್‌) ಹೊಂದಿರುವ ಅಲನ್ ಶಿಯರರ್ ಅಭಿಪ್ರಾಯಪಟ್ಟರು.

ಐದು ಪಂದ್ಯಗಳ ಪ್ರಸಾರ ಪ್ರೀಮಿಯರ್ ಲೀಗ್‌ನ ಅಕ್ಟೋಬರ್ 14 ಮತ್ತು 15ರ ಪಂದ್ಯಗಳ ನೇರಪ್ರಸಾರ ವೀಕ್ಷಿಸಲು ನಗರದ ವೈಟ್ ಫೀಲ್ಡ್‌ನಲ್ಲಿರುವ ಕೆಟಿಪಿಒ ಬೃಹತ್ ಪರದೆ ಅಳವಡಿಸಲಾಗಿದೆ.

ಪ್ರೀಮಿಯರ್ ಲೀಗ್ ನಲ್ಲಿ ಹೆಸರು ಮಾಡಿರುವ ಪ್ರಸಿದ್ಧ ಆಟಗಾರರ ಜೊತೆ ಸಂವಾದ ನಡೆಸಲು ಫ್ಯಾನ್ ಪಾರ್ಕ್‌ನಲ್ಲಿ ಅವಕಾಶವಿದೆ. ಶನಿವಾರ ಸಂಜೆ ಐದು, ರಾತ್ರಿ 7.30 ಮತ್ತು 10 ಗಂಟೆಗೆ, ಬಾನುವಾರ ಸಂಜೆ ಆರು ಮತ್ತು ರಾತ್ರಿ 10.30ಕ್ಕೆ ಪಂದ್ಯಗಳ ನೇರಪ್ರಸಾರ ನಡೆಯಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry