ಪುತ್ರನ ಬೆಂಬಲಕ್ಕೆ ಅಮಿತ್‌ ಷಾ

ಮಂಗಳವಾರ, ಜೂನ್ 18, 2019
23 °C

ಪುತ್ರನ ಬೆಂಬಲಕ್ಕೆ ಅಮಿತ್‌ ಷಾ

Published:
Updated:

ನವದೆಹಲಿ: ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಸಹಜ ರೀತಿಯಲ್ಲಿ ಆಸ್ತಿ ಗಳಿಕೆಯ ಆರೋಪ ಹೊತ್ತ ತಮ್ಮ ಪುತ್ರ ಜಯ್‌ ಷಾ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಶುಕ್ರವಾರ ಬಹಿರಂಗವಾಗಿ ಸಮರ್ಥಿಸಿಕೊಂಡಿದ್ದಾರೆ.

ತಮ್ಮ ಪುತ್ರನ ಕಂಪೆನಿಯಲ್ಲಿ ಭ್ರಷ್ಟಾಚಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆತನ ಕಂಪೆನಿಯಲ್ಲಿ ಒಂದು ರೂಪಾಯಿ ಕೂಡ ಅವ್ಯವಹಾರ, ಭ್ರಷ್ಟಾಚಾರ ನಡೆದಿಲ್ಲ. ಗುತ್ತಿಗೆ, ಭೂಮಿ ಸೇರಿದಂತೆ ಸರ್ಕಾರದಿಂದ ಯಾವ ನೆರವೂ ಪಡೆದಿಲ್ಲ ಎಂದು ಹೇಳಿದ್ದಾರೆ.

ಬೋಫೋರ್ಸ್‌ ಹಗರಣದಲ್ಲಿ ನಡೆದಂತೆ ತಮ್ಮ ಪುತ್ರ ಯಾರಿಂದಲೂ ಸಾವಿರಾರು ಕೋಟಿ ರೂಪಾಯಿ ಕಮಿಷನ್‌ ಪಡೆದಿಲ್ಲ ಎಂದು ಷಾ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಅಕ್ಕಿ, ಮೆಕ್ಕೆಜೋಳ, ಆಹಾರಧಾನ್ಯಗಳ ರಫ್ತು ಉದ್ಯಮದಲ್ಲಿ ತಮ್ಮ ಪುತ್ರ ₹1.50 ಕೋಟಿ ನಷ್ಟ ಅನುಭವಿಸಿದ್ದಾನೆ ಎಂದು ಸಮರ್ಥಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry