ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣಾಟಕ ಬ್ಯಾಂಕ್‌ಗೆ ₹ 93 ಕೋಟಿ ಲಾಭ

ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ಹಣಕಾಸು ಸಾಧನೆ ಪ್ರಕಟ
Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ಕರ್ಣಾಟಕ ಬ್ಯಾಂಕ್‌ ದ್ವಿತೀಯ ತ್ರೈಮಾಸಿಕದಲ್ಲಿ ₹ 93.38 ಕೋಟಿ ನಿವ್ವಳ ಲಾಭ ಗಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (₹ 123.82 ಕೋಟಿ) ಲಾಭದಲ್ಲಿ ಶೇ 24.58ರಷ್ಟು ಕುಸಿತ ಕಂಡಿದೆ.

ಬ್ಯಾಂಕ್‌ನ ಕಾರ್ಯಾಚರಣೆ ಲಾಭಾಂಶ ಇದೇ ಅವಧಿಯಲ್ಲಿ ₹ 366.24 ಕೊಟಿಗೆ ಹೆಚ್ಚುವ ಮೂಲಕ (ಕಳೆದ ವರ್ಷ ₹ 232.75 ಕೋಟಿ) ಶೇ 57.35ರಷ್ಟು ಪ್ರಗತಿ ದಾಖಲಿಸಿದೆ.

ಶುಕ್ರವಾರ ನಡೆದ ಬ್ಯಾಂಕ್‌ನ ನಿರ್ದೇಶಕರ ಮಂಡಳಿ ಸಭೆಯಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ  ಮಹಾಬಲೇಶ್ವರ ಎಂ.ಎಸ್. ಅವರು ಈ ವಿವರ ನೀಡಿದರು. ಮುಂಬರುವ ದಿನಗಳಲ್ಲಿ ಬ್ಯಾಂಕ್‌ ಇನ್ನಷ್ಟು ಉತ್ತಮ ಪ್ರಗತಿ ಸಾಧಿಸುವ ಆಶಯ ವ್ಯಕ್ತಪಡಿಸಿದರು.

ಮಂಡಳಿಯು ಬ್ಯಾಂಕ್‌ನ ಅರ್ಧ ವಾರ್ಷಿಕ ಹಣಕಾಸು ಫಲಿತಾಂಶವನ್ನು ಅಂಗೀಕರಿಸಿತು. ಬ್ಯಾಂಕ್‌ನ ನಿವ್ವಳ ಬಡ್ಡಿ ಆದಾಯ ಕಳೆದ ವರ್ಷದ ₹ 761 ಕೋಟಿಯ ಬದಲಿಗೆ ₹ 864 ಕೊಟಿಗೆ ಹೆಚ್ಚಳವಾಗಿದೆ. ಈ ಮೂಲಕ ಶೇ 13.48ರಷ್ಟು ಪ್ರಗತಿ ಸಾಧಿಸಲಾಗಿದೆ.

ಬ್ಯಾಂಕ್‌ನ ಒಟ್ಟು ವ್ಯವಹಾರ ₹ 97,685 ಕೋಟಿ ತಲುಪಿದೆ. ಇದರಲ್ಲಿ ಠೇವಣಿ ₹ 56,558 ಕೋಟಿ ಹಾಗೂ ಸಾಲ ನೀಡಿಕೆ ₹ 41,127 ಕೋಟಿ ಸೇರಿದೆ. ಬ್ಯಾಂಕ್‌ನ ಸಿಎಆರ್‌ ಶೇ 12.46 ರಷ್ಟನ್ನು ದಾಖಲಿಸಿದೆ.

ಬ್ಯಾಂಕ್‌ನ ಒಟ್ಟಾರೆ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ₹ 1,715 ಕೋಟಿ ಆಗಿದ್ದು, ನಿವ್ವಳ ಎನ್‌ಪಿಎ ₹ 1,246 ಕೋಟಿಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT