ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ಒತ್ತೆಯಲ್ಲಿದ್ದ ಕುಟುಂಬದ ರಕ್ಷಣೆ

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಐದು ವರ್ಷಗಳಿಂದ ಅಫ್ಗಾನಿಸ್ತಾನದಲ್ಲಿ ಉಗ್ರರ ಒತ್ತೆಯಲ್ಲಿದ್ದ ಅಮೆರಿಕ–ಕೆನಡಾ ಕುಟುಂಬವೊಂದನ್ನು ರಕ್ಷಿಸಲಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.

‘ಅಮೆರಿಕದ ಪೆನ್ಸಿಲ್ವೇನಿಯಾದ ಕೈಟ್ಲಾನ್‌ ಕೋಲ್ಮನ್‌, ಆಕೆಯ ಪತಿ ಕೆನಡಾದ ಜೊಶುವಾ ಬೊಯ್ಲೆ ಹಾಗೂ ಒತ್ತೆಯಲ್ಲಿದ್ದ ವೇಳೆ ಜನಿಸಿದ್ದ ಮೂವರು ಮಕ್ಕಳನ್ನು ಅಮೆರಿಕ ಸರ್ಕಾರದ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಬಿಡುಗಡೆಗೊಳಿಸಲಾಗಿದೆ’ ಎಂದು ಪಾಕಿಸ್ತಾನ ಹೇಳಿದೆ.

ತಾಲಿಬಾನ್‌ ಉಗ್ರರೊಂದಿಗೆ ಸಂಪರ್ಕವಿರುವ ಹಕ್ಕಾನಿ ಗುಂಪಿನ ಉಗ್ರರು ಈ ದಂಪತಿಯನ್ನು ಅಪಹರಿಸಿದ್ದು, ಇವರ ಬಿಡುಗಡೆಗಾಗಿ ಅಮೆರಿಕ ಪಾಕಿಸ್ತಾನದ ಮೇಲೆ ಒತ್ತಡ ಹೇರಿತ್ತು.

‘ಅಪಹರಣಕ್ಕೊಳಗಾಗಿದ್ದವರು ಬಿಡುಗಡೆಯಾಗಿದ್ದಾರೆ. ಅವರ ಬಿಡುಗಡೆಗೆ ಪಾಕಿಸ್ತಾನ ನೀಡಿದ ನೆರವು ಶ್ಲಾಘನೀಯ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ವಿವಿಧ ದೇಶಗಳ ಪ್ರವಾಸ ಮುಗಿಸಿ ಅಫ್ಗಾನಿಸ್ತಾನಕ್ಕೆ ತಲುಪಿದ್ದ ಕೈಟ್ಲಾನ್‌  ಹಾಗೂ ಜೊಶುವಾ ಅವರನ್ನು 2012ರಲ್ಲಿ ಉಗ್ರರು ಅಪಹರಿಸಿದ್ದರು. ಈ ವೇಳೆ ಕೈಟ್ಲಾನ್‌ ಗರ್ಭಿಣಿಯಾಗಿದ್ದರು.

’ಗುಪ್ತಚರ ಇಲಾಖೆಯ ಸಹಕಾರದಲ್ಲಿ ನಡೆಸಿದ ಕಾರ್ಯಾಚರಣೆಯಿಂದ ಈ ಕುಟುಂಬವನ್ನು ರಕ್ಷಿಸಲಾಗಿದೆ’ ಎಂದು ಪಾಕಿಸ್ತಾನದ ಸೇನಾಪಡೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT