ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷರೀಫ್‌ ವಿರುದ್ಧ ದೋಷಾರೋಪ: 19ಕ್ಕೆ ಮುಂದೂಡಿಕೆ

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ‍ಪನಾಮ ದಾಖಲೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ನವಾಜ್‌ ಷರೀಫ್‌, ಅವರ ಮಗಳು ಹಾಗೂ ಅಳಿಯನ ವಿರುದ್ಧ ದೋಷಾರೋಪ ಹೊರಿಸುವ ಪ್ರಕರಣದ ವಿಚಾರಣೆ ವೇಳೆ ಲಾಹೋರ್‌ ಕೋರ್ಟ್‌ನಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್‌ – ನವಾಜ್‌ (ಪಿಎಂಎಲ್‌–ಎನ್‌) ವಕೀಲರು ಮತ್ತು ಬೆಂಬಲಿಗರ ನಡುವೆ ಗಲಾಟೆ ನಡೆಯಿತು. ಇದರಿಂದ ಪ್ರಕರಣದ ವಿಚಾರಣೆಯನ್ನು ಕೋರ್ಟ್‌ ಇದೇ 19ಕ್ಕೆ ಮುಂದೂಡಿದೆ.

ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ಬಶೀರ್‌ ಅವರು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಪಿಎಂಎಲ್‌–ಎನ್‌ ವಕೀಲರು ಏಕಾಏಕಿಯಾಗಿ ಕೋರ್ಟ್‌ ಆವರಣದೊಳಕ್ಕೆ ನುಗ್ಗಿದರು. ಇವರ ಹಿಂದೆಯೇ ಷರೀಫ್‌ ಅವರ ಬೆಂಬಲಿಗರೂ ಬಂದರು. ಇವರನ್ನು ನಿಯಂತ್ರಿಸಲು ಪೊಲೀಸರು ಮುಂದಾದಾಗ ಗಲಾಟೆ ಶುರುವಾಯಿತು.

ತಮ್ಮನ್ನು ಕೋರ್ಟ್‌ ಆವರಣದಲ್ಲಿ ಓಡಾಡಲು ಭದ್ರತಾ ಸಿಬ್ಬಂದಿ ಬಿಡುತ್ತಿಲ್ಲ ಎಂದು ನ್ಯಾಯಮೂರ್ತಿಗಳ ಎದುರು ಹೇಳಿದ ಪಿಎಂಎಲ್‌–ಎನ್‌ ವಕೀಲರು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವವರೆಗೆ ವಿಚಾರಣೆ ನಡೆಸಬಾರದು ಎಂದು ಬೆದರಿಕೆಯನ್ನೂ ಹಾಕಿದರು!

ಈ ಪ್ರಕರಣದಲ್ಲಿ ತಾವೂ ವಾದಿಸುವುದಾಗಿ ಕೆಲವು ವಕೀಲರು ಮುಂದೆ ಬಂದರು. ಈ ಗಲಾಟೆಯಿಂದಾಗಿ ನ್ಯಾಯಮೂರ್ತಿಗಳು ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT