ವೆಚ್ಚದ ವಿವರ ನಿಮಗೇಕೆ?

ಬುಧವಾರ, ಜೂನ್ 26, 2019
24 °C

ವೆಚ್ಚದ ವಿವರ ನಿಮಗೇಕೆ?

Published:
Updated:
ವೆಚ್ಚದ ವಿವರ ನಿಮಗೇಕೆ?

ಬೆಂಗಳೂರು: ‘ವಿಧಾನಸೌಧ ವಜ್ರ ಮಹೋತ್ಸವಕ್ಕೆ ₹26.87 ಕೋಟಿ ಖರ್ಚು ಮಾಡುವ ವಿವರವನ್ನು ನಿಮಗೇಕೆ ನೀಡಬೇಕು’ ಎಂದು ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಪ್ರಶ್ನಿಸಿದರು.

‘ಖರ್ಚುವೆಚ್ಚ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಟೀಕೆ ಮಾಡುವವರು ಮಾಡುತ್ತಾರೆ ಬಿಡಿ ಎಂದರು. ಖರ್ಚುವೆಚ್ಚ ಕುರಿತು ಪದೇಪದೇ ಕೇಳಿದ ಪ್ರಶ್ನೆಗಳಿಗಳಿಂದ ಅವರು ಸಿಡಿಮಿಡಿಗೊಂಡರು.

‘‘₹26.87 ಕೋಟಿ ವೆಚ್ಚದ ಬಗ್ಗೆ ಪೂರ್ಣ ವಿವರ ಇರುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಅದನ್ನೆಲ್ಲಾ ನಿಮಗೆ ಹೇಳಲು ಸಾಧ್ಯವಿಲ್ಲ. ಅವರು ಕೊಟ್ಟರೆ ಅಷ್ಟು ಖರ್ಚು ಮಾಡುತ್ತೇವೆ’ ಎಂದು ಹರಿಹಾಯ್ದರು.

‘9 ದಿನಗಳ ಮೈಸೂರು ದಸರಾ, 10 ದಿನಗಳ ಬೆಳಗಾವಿ ಅಧಿವೇಶನಕ್ಕೆ ಅಷ್ಟು ದುಡ್ಡು ಖರ್ಚಾಗುವುದಿಲ್ಲ, ಎರಡು ದಿನಗಳ ಕಾರ್ಯಕ್ರಮಕ್ಕೆ ಅಷ್ಟು ದುಡ್ಡು ಅಗತ್ಯವೇ’ ಎಂಬ ಪ್ರಶ್ನೆಗೆ, ‘ಎಲ್ಲಿ, ಎಷ್ಟು ಅವಶ್ಯ ಇರುತ್ತದೋ ಅಷ್ಟು ಖರ್ಚು ಮಾಡಬೇಕಾಗುತ್ತದೆ’ ಎಂದು ಸಮರ್ಥಿಸಿಕೊಂಡರು.

‘ವಜ್ರ ಮಹೋತ್ಸವ ಅಗತ್ಯ ಇತ್ತೇ’ ಎಂಬ ಪ್ರಶ್ನೆಗೆ, ‘ಮಾಧ್ಯಮದವರಿಗೆ ಅದರ ಅಗತ್ಯ ಇಲ್ಲದೇ ಇರಬಹುದು. ಆದರೆ, ಜನರಿಗೆ ಗೊತ್ತಾಗಬೇಕಲ್ಲ. ಅವರಿಗೆ ಗೊತ್ತಾಗಲಿದೆ’ ಎಂದರು.

‘ವಜ್ರಮಹೋತ್ಸವ ಆಯೋಜಿಸುವ ಮೊದಲೇ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಲಾಗಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ’ ಎಂದರು.

‘ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣ ಮಾಡಲಿದ್ದಾರೆ. ಹಾಗಂತ ಇದೇನೂ ಮೊದಲ ಬಾರಿ ನಡೆಯುತ್ತಿರುವುದಲ್ಲ. ಈ ಹಿಂದೆ, ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದರು’ ಎಂದೂ ಅವರು ಸಮರ್ಥಿಸಿಕೊಂಡರು.

‘ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಸಂಪುಟ ಸಭೆ ಅನುಮೋದನೆ ನೀಡಿಲ್ಲ ಎಂದು ಜಯಚಂದ್ರ ಹೇಳಿದ್ದಾರಲ್ಲ’ ಎಂಬ ಪ್ರಶ್ನೆಗೆ, ‘ನನಗೂ ಸಚಿವ ಸಂಪುಟಕ್ಕೂ ಸಂಬಂಧ ಇಲ್ಲ. ಆ ಬಗ್ಗೆ ಅವರನ್ನೇ ಕೇಳಿ’ ಎಂದು ಕೋಳಿವಾಡ ಖಾರವಾಗಿ ಪ್ರತಿಕ್ರಿಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry