ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು–ನಾಳೆ ಜಲ ಚಿತ್ರೋತ್ಸವ

Last Updated 13 ಅಕ್ಟೋಬರ್ 2017, 19:58 IST
ಅಕ್ಷರ ಗಾತ್ರ

ಬೆಂಗಳೂರು: ನೇಚರ್‌ ಇನ್‌ ಫೋಕಸ್‌ ಸಂಸ್ಥೆಯು ಜಂಗಲ್‌ ಲಾಡ್ಜಸ್‌ ಆ್ಯಂಡ್‌ ರೆಸಾರ್ಟ್‌ ಸಹಭಾಗಿತ್ವದಲ್ಲಿ ನಗರದಲ್ಲಿ ಇದೇ 14 ಮತ್ತು 15ರಂದು ಜಲಸಂರಕ್ಷಣೆ ಕುರಿತು ‘ಮೂವಿಂಗ್‌ ವಾಟರ್ಸ್‌’ ಚಲನಚಿತ್ರೋತ್ಸವ ಆಯೋಜಿಸಿದೆ.

ಇಂದಿರಾ ನಗರದ ಗೋಥೆ ಸಂಸ್ಥೆಯ ಮ್ಯಾಕ್ಸ್‌ಮುಲ್ಲರ್‌ ಭವನದಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಈ ಸಿನಿಮೋತ್ಸವ ನಡೆಯಲಿದೆ.

ಜಲಮಾಲಿನ್ಯ, ಕಣ್ಮನ ಸೆಳೆಯುವ ನದಿಗಳನ್ನು ಬಾಧಿಸುವ ಅಂಶಗಳು, ನೀರ್ಗಲ್ಲು ಕರಗಲು ಕಾರಣ ಮತ್ತು ಹವಾಮಾನ ವೈಪರೀತ್ಯ, ಭೂ ಉಷ್ಣತೆಯ ಹೆಚ್ಚಳ, ಅಘನಾಶಿನಿ ನದಿಪಾತ್ರದ ಪ್ರಾಣಿ ಸಂಪತ್ತು ಕುರಿತ ವಸ್ತುವಿಷಯವುಳ್ಳ ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.

ಸಾಗರಾಳದ ಅದ್ಭುತ ವೈಚಿತ್ರ್ಯಗಳು, ನೀರಿನ ಮಾಲಿನ್ಯದಿಂದ ಜಲಚರಗಳ ಮೇಲಾಗುತ್ತಿರುವ ದುಷ್ಪರಿಣಾಮಗಳ ಸವಿವರ ಪ್ರದರ್ಶನದ ಚಿತ್ರಗಳಲ್ಲಿ ಇರಲಿದೆ.

ಅಲ್ಲದೆ ಜಲತಜ್ಞರಾದ ಡಾ. ಆರ್ಣಬ್‌ ದಾಸ್‌, ಸುಪ್ರಭಾ ಶೇಷನ್‌, ಅಶ್ವಿನಿಕುಮಾರ್‌ ಭಟ್‌, ದಿವ್ಯಾ ಕಾರ್ನಾಡ್‌, ಡಾ. ವರ್ಧನ್‌ ಪಾಠನ್‌ಕರ್‌, ಡಾ. ನವೀನ್‌ ನಂಬೂದಿರಿ, ಡಾ. ಮಾನಿಕ್‌ ಚಾಂಡಿ ಅವರೊಂದಿಗೆ ಸಂವಾದ ಇರಲಿದೆ.

ಚಿತ್ರೋತ್ಸವಕ್ಕೆ ಪ್ರವೇಶ ಉಚಿತ. ಹೆಸರು ನೋಂದಣಿಗೆ: http://www.movingwatersfilmsfestival.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT