ಶುಕ್ರವಾರ, ಸೆಪ್ಟೆಂಬರ್ 20, 2019
23 °C

ಬ್ಯಾಡ್ಮಿಂಟನ್‌: ಸೆಮಿಗೆ ರಾಜ್ಯದ ಧೃತಿ, ಡೇನಿಯಲ್‌

Published:
Updated:

ಬೆಂಗಳೂರು: ಕರ್ನಾಟಕದ ಡೇನಿ ಯಲ್‌ ಫರೀದ್‌ ಮತ್ತು ಧೃತಿ ಯತೀಶ್‌, ಅಖಿಲ ಭಾರತ ರಾಷ್ಟ್ರೀಯ ಸೀನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ಕ್ವಾರ್ಟರ್ ಫೈನಲ್‌ನಲ್ಲಿ ಫರೀದ್‌ 21–19, 21–17ರಲ್ಲಿ ಅನ್ಸಲ್‌ ಯಾದವ್‌ ವಿರುದ್ಧ ಗೆದ್ದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಎಂಟರ ಘಟ್ಟದ ಹಣಾಹಣಿಯಲ್ಲಿ ಧೃತಿ 9–21, 21–19, 21–14ರಲ್ಲಿ ರಿಯಾ ಮುಖರ್ಜಿ ಅವರನ್ನು ಮಣಿಸಿದರು.

Post Comments (+)