‘ಸಹಕಾರಿ ಸಂಘಗಳು ರೈತರಿಗೆ ಅನುಕೂಲ’

ಬುಧವಾರ, ಜೂನ್ 19, 2019
25 °C

‘ಸಹಕಾರಿ ಸಂಘಗಳು ರೈತರಿಗೆ ಅನುಕೂಲ’

Published:
Updated:

ಅಮೀನಗಡ: ‘ಗ್ರಾಮ ಮತ್ತು ಪಟ್ಟಣಗಳಲ್ಲಿರುವ ಸೌಹಾರ್ದ ಸಹಕಾರಿ ಸಂಘಗಳು ಬಲವರ್ಧನೆಗೊಂಡರೆ ದೇಶ ಆರ್ಥಿಕ ಪ್ರಗತಿ ಹೊಂದಲು ಸಾಧ್ಯ’ ಎಂದು ಕುಡಿಯುವ ನೀರು ಹಾಗೂ ನೈರ್ಮಲ್ಯ ರಾಜ್ಯ ಸಮಿತಿ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ತಿಳಿಸಿದರು.

ಪಟ್ಟಣದ ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ನಡೆದ ಶ್ರೀಮಾತಾ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘2008ರಲ್ಲಿ ಒಂದು ಲಕ್ಷ ಬಂಡವಾಳದೊಂದಿಗೆ ಪ್ರಾರಂಭವಾದ ಸೌಹಾರ್ದ ಸಂಘ, ಸತತ ಪರಿಶ್ರಮದೊಂದಿಗೆ ಪ್ರಗತಿ ಹೊಂದುತ್ತಿದೆ. 3ನೇ ಶಾಖೆ ಪ್ರಾರಂಭಗೊಳಿಸಿದ್ದಲ್ಲದೆ ₹ 4.5 ಕೋಟಿ ಬಂಡವಾಳ ಹೊಂದಿದೆ. ಲಿಂ.ಪ್ರಭುರಾಜೇಂದ್ರ ಶ್ರೀಗಳ ಆಶೀರ್ವಾದದೊಂದಿಗೆ ಸಂಘ ನಿರಂತರ ಪ್ರಗತಿ ಸಾಧಿಸುತ್ತಿದೆ’ ಎಂದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ದಡ್ಡೇನವರ ಮಾತನಾಡಿ ‘ಸಹಕಾರಿ ಸಂಘಗಳು ರೈತರು ಮತ್ತು ಜನಸಾಮಾನ್ಯರ ಆರ್ಥಿಕ ಉನ್ನತಿಗೆ ಪೂರಕವಾಗಿವೆ. ಇಲ್ಲಿನ ಸಾಲ ಸೌಲಭ್ಯಗಳ ಸದುಪಯೋಗವಾಗಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಗಚ್ಚಿನಮಠದ ಶಂಕರರಾಜೇಂದ್ರ ಶ್ರೀ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಜಾತಾ ತತ್ರಾಣಿ ಮಾತನಾಡಿದರು. ಎ.ಆರ್.ನಿಂಬಲಗುಂದಿ ವರದಿ ವಾಚಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಬಿ.ತುಂಬಗಿ, ಸಿದ್ದಪ್ಪ ಕನ್ನೂರ, ಚನ್ನಯ್ಯ ಹೀರೆಮಠ, ಬಿ.ಎಸ್.ನಿಡಗುಂದಿ, ಅಜಮೀರ್ ಮುಲ್ಲಾ, ಉಪಾಧ್ಯಕ್ಷ ಅರವಿಂದ ಗೌಡರ, ಆಡಳಿತ ಮಂಡಳಿ ನಿರ್ದೇಶಕರಾದ ಮಲ್ಲಿಕಾರ್ಜುನ ಹವಾಲ್ದಾರ್, ಮಹಾಂತೇಶ ತೆನಹಳ್ಳಿ, ವಿಷ್ಣು ಗೌಡರ, ಶಿವಬಾಯಿ ಹುನಗುಂದ, ಕಮಲಾಬಾಯಿ ಮಸ್ಕಿ, ಅಮೀನಗಡ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಸಂಗಣ್ಣ ಕುಂಬಾರ, ತುಕಾರಾಮ ರಾಠೋಡ, ಪ್ರಭು ತೆಗ್ಗಿನಮನಿ, ಸಂಗಣ್ಣ ಕಂಬಳಿ, ಪಿ.ಎಸ್.ನಾಗರಾಳ, ಸಂಗಣ್ಣ ಪುರ್ತಗೇರಿ, ಸಂಗು ಮಠ, ಸಾಧನಾ ಗೋಕಾವಿ, ನಾಗರತ್ನಾ ಹುನಗುಂದ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry