ಕಳುವಾಗಿದ್ದ ಸಿಎಂ ಕೇಜ್ರಿವಾಲ್‌ ಕಾರು ಗಾಜಿಯಾಬಾದ್‌ನಲ್ಲಿ ಪತ್ತೆ

ಮಂಗಳವಾರ, ಜೂನ್ 18, 2019
23 °C

ಕಳುವಾಗಿದ್ದ ಸಿಎಂ ಕೇಜ್ರಿವಾಲ್‌ ಕಾರು ಗಾಜಿಯಾಬಾದ್‌ನಲ್ಲಿ ಪತ್ತೆ

Published:
Updated:
ಕಳುವಾಗಿದ್ದ ಸಿಎಂ ಕೇಜ್ರಿವಾಲ್‌ ಕಾರು ಗಾಜಿಯಾಬಾದ್‌ನಲ್ಲಿ ಪತ್ತೆ

ನವದೆಹಲಿ: ಕಳ್ಳತನವಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರ ನೀಲಿ ಬಣ್ಣದ ವ್ಯಾಗನಾರ್ ಕಾರು ಶನಿವಾರ ಪತ್ತೆಯಾಗಿದೆ.

ದೆಹಲಿ ಸಚಿವಾಲಯದ ಸಮೀಪ ನಿಲ್ಲಿಸಲಾಗಿದ್ದ ಕಾರು ಗುರುವಾರ ನಾಪತ್ತೆಯಾಗಿತ್ತು. ಇದೀಗ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಪತ್ತೆಯಾಗಿರುವ ಕಾರನ್ನು ಪೊಲೀಸರು ವಶಪಡಿಸಿಕೊಂಡಿರುವುದಾಗಿ ಎಎನ್ಐ ವರದಿ ಮಾಡಿದೆ.

DL 9C G 9769 ನಂಬರ್‌ ನೀಲಿ ವ್ಯಾಗನಾರ್‌ ಆಮ್‌ ಆದ್ಮಿ ಕಾರು ಎಂದು ಬಣ್ಣಿಸಲಾಗುತ್ತದೆ. ಕೇಜ್ರಿವಾಲ್‌ ಚುನಾವಣಾ ಪ್ರಚಾರದಲ್ಲಿ ಹಾಗೂ ಪಕ್ಷ ಕಟ್ಟುವಾಗಲೂ ಇದೇ ಕಾರನ್ನು ಬಳಸಿದ್ದರು. ಸಿಎಂ ಆದ ನಂತರವೂ ಕೆಲದಿನಗಳು ಇದೇ ಕಾರಿನಲ್ಲಿ ಸಂಚರಿಸುತ್ತಿದ್ದರು. ಹಲವು ಎಎಪಿ ಮುಖಂಡರು ಕಾರು ಪತ್ತೆ ಮಾಡಿಕೊಟ್ಟರೆ ಸೂಕ್ತ ಬಹುಮಾನ ಎಂದು ಘೋಷಿಸಿದ್ದರು.

ಇತ್ತೀಚೆಗೆ ಎಎಪಿ ಯುವ ಘಟಕದ ಮುಖಂಡರಾದ ವಂದನಾ ಸಿಂಗ್‌ ಈ ಕಾರು ಬಳಸುತ್ತಿದ್ದರು.

ಸಚಿವಾಲಯದ ಸಮೀಪದಿಂದಲೇ ಕಾರು ಕಳ್ಳತವಾಗಿದ್ದ ಕುರಿತು ಲೆ.ಗವರ್ನರ್‌ ಅನಿಲ್‌ ಬೈಜಲ್‌ ಅವರಿಗೆ ಪತ್ರ ಬರೆದಿದ್ದ ಸಿಎಂ ಅರವಿಂದ್‌ ಕೇಜ್ರಿವಾಲ್‌, ರಾಷ್ಟ್ರ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕ್ಷೀಣಿಸುತ್ತಿರುವುದರ ಪ್ರತೀಕ ಎಂದು ಅಸಹನೆ ವ್ಯಕ್ತಪಡಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry