ಕೆರೂರ: ಉತ್ತಮ ಮಳೆ, ಕೈಗೂಡದ ಹಿಂಗಾರು ಬಿತ್ತನೆ

ಶುಕ್ರವಾರ, ಮೇ 24, 2019
29 °C

ಕೆರೂರ: ಉತ್ತಮ ಮಳೆ, ಕೈಗೂಡದ ಹಿಂಗಾರು ಬಿತ್ತನೆ

Published:
Updated:
ಕೆರೂರ: ಉತ್ತಮ ಮಳೆ, ಕೈಗೂಡದ ಹಿಂಗಾರು ಬಿತ್ತನೆ

ಕೆರೂರ: ಪಟ್ಟಣ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ರಾತ್ರಿಯಿಂದ ಮಳೆ ಬಿಟ್ಟುಬಿಟ್ಟೂ ಸುರಿಯುತ್ತಿದೆ. ಶುಕ್ರವಾರ ಮುಸ್ಸಂಜೆ ಸಹ ಆಗಸದಲ್ಲಿ ಕಪ್ಪಡರಿದ್ದ ಕಾರ್ಮೋಡಗಳು ಮಿಂಚು, ಗುಡುಗುಗಳ ಮಧ್ಯೆ ಕೆಲ ಕಾಲ ಬಿರುಸಿನ ಮಳೆ ಸುರಿಯಿತು.

ಹೋಬಳಿ ಪ್ರದೇಶದಲ್ಲಿ ಸೆಪ್ಟೆಂಬರ್ ಕೊನೆ ಮತ್ತು ಅಕ್ಟೋಬರ್‌ ಆರಂಭದ ವಾರದಲ್ಲಿ ಉತ್ತಮವಾಗಿ ಮಳೆ ಸುರಿದ ಪರಿಣಾಮ ಹಲವೆಡೆ ಹಿಂಗಾರು ಬಿತ್ತನೆ ಸಾಧ್ಯವಾಗಿಲ್ಲ. ಹೊಲಗಳಲ್ಲಿ ಕಾಲಿಡದಷ್ಟು ಕೆಸರು ತುಂಬಿದೆ.

ಅಧಿಕ ತೇವಾಂಶದಿಂದ ಬಿತ್ತನೆಗೆ ಇನ್ನೂ ಅವಕಾಶವಿಲ್ಲ. ಹೀಗೆ ಮುಂದುವರಿದರೆ ಬಿತ್ತನೆಯ ಅವಧಿ ಮುಗಿಯುತ್ತ ಬರುತ್ತಿದೆ. ಹೀಗಾದರೆ ರೈತರು ಸಂಕಷ್ಟಕ್ಕೀಡಾಗುತ್ತಾರೆ ಎಂಬುದು ಬಹುತೇಕ ಕೃಷಿಕರ ಅಭಿಮತ.

ಈರುಳ್ಳಿ ದುಸ್ಥಿತಿ: ಹೋಬಳಿ ಕಾಡರಕೊಪ್ಪ, ಹೊಸಕೋಟಿ, ಕೈನಕಟ್ಟಿ, ಅನವಾಲ, ನೀರಬೂದಿಹಾಳ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಇನ್ನೇನು ಕೈಗೆ ಬರಲಿದ್ದ ಈರುಳ್ಳಿ ಬೆಳೆ ದುಸ್ಥಿತಿಯಲ್ಲಿದೆ. ಮಳೆ ನೀರು ಹೊಲಗಳಲ್ಲಿ ನಿಂತಿದ್ದು, ಬೆಳೆಗೆ ಸಂಕಷ್ಟ ಎದುರಾಗಿದೆ.

ಕೆಲವಡೆ ಗಡ್ಡೆಗಳು ಮಳೆಯಿಂದ ಹಾಳಾಗಿ ಹೋಗಿವೆ. ಆದರೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವ ಈರುಳ್ಳಿ ಬೆಳೆ ಹೇಗಾದರೂ ಮಾಡಿ ಮಾರಾಟಕ್ಕೆ ಕೊಂಡೊಯ್ಯುವ ಹವಣಿಕೆ ಬಹುತೇಕ ಈರುಳ್ಳಿ ಬೆಳೆಗಾರರಲ್ಲಿ ಕಂಡು ಬರುತ್ತಿದ್ದು, ಮಳೆರಾಯ ಅವರೆಲ್ಲರಿಗೆ ಅಡ್ಡಗಾಲಾಗಿ ಪರಿಣಮಿಸಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry