ಭಾನುವಾರ, ಸೆಪ್ಟೆಂಬರ್ 15, 2019
23 °C

ನೀರಿನಲ್ಲಿ ಮುಳುಗಿ ಬಾಲಕ ಸಾವು

Published:
Updated:

ಹೂವಿನಹಡಗಲಿ: ತಾಲ್ಲೂಕಿನ ಉತ್ತಂಗಿ ಗ್ರಾಮದಲ್ಲಿ ಆಕಳ ಮೈತೊಳೆಯಲು ಹಳ್ಳಕ್ಕೆ ಇಳಿದಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಶುಕ್ರವಾರ ಸಾವನ್ನಪ್ಪಿದ್ದಾನೆ.

ಎಸ್.ಎಂ. ವಾಗೀಶಯ್ಯ ವೃಷಬೇಂದ್ರಯ್ಯ (12) ಮೃತ ಬಾಲಕ. ತಳಕಲ್ಲು ರಸ್ತೆಯಲ್ಲಿರುವ ಸುಂಕಮ್ಮನ ಹಳ್ಳದಲ್ಲಿ ಈ ದುರ್ಘಟನೆ ಸಂಭವಿಸಿದೆ.

‘ಗ್ರಾವೆಲ್‌ಗಾಗಿ ಹಳ್ಳದಲ್ಲಿ ಭಾರಿ ಕಂದಕಗಳನ್ನು ತೋಡಲಾಗಿದ್ದು, ಈಚೆಗೆ ಮಳೆ ಬಂದಿರುವುದರಿಂದ ಗುಂಡಿಗಳು ತುಂಬಿಕೊಂಡಿವೆ. ಗುಂಡಿಯ ಆಳ ಗುರುತಿಸಲು ಸಾಧ್ಯವಾಗದೇ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)