ಸೋಮವಾರ, ಸೆಪ್ಟೆಂಬರ್ 16, 2019
21 °C

ಮಳೆ: ತುಂಬಿ ಹರಿದ ಎಲ್ಲಮ್ಮ ಹಳ್ಳ

Published:
Updated:
ಮಳೆ: ತುಂಬಿ ಹರಿದ ಎಲ್ಲಮ್ಮ ಹಳ್ಳ

ಚಿಟಗುಪ್ಪ: ವಿವಿಧೆಡೆ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಗಿನ ಜಾವ ಧಾರಾಕಾರ ಮಳೆಯಾಗಿದೆ. ನಿರ್ಣಾ ಗ್ರಾಮದಿಂದ ಮುತ್ತಂಗಿ, ಮದರಗಿ, ಬಾದಲಾಪುರ ಹಾಗೂ ಬಸಂತಪುರಗೆ ಹೋಗುವ ರಸ್ತೆ ಮಧ್ಯದ ಎಲ್ಲಮ್ಮ ಹಳ್ಳ ತುಂಬಿ ಹರಿದು ಸೇತುವೆ ಮೇಲೆ ಮಳೆ ನೀರು ಹರಿದ ಕಾರಣ ಕೆಲ ಕಾಲ ವಾಹನ ಸವಾರರಿಗೆ ತೊಂದರೆಯಾಯಿತು.

ಬಹುತೇಕ ಕಡೆ ಹೊಲಗದ್ದೆಗಳಲ್ಲಿ ನೀರು ಹರಿದು ಬೆಳೆ ಹಾಳಾಗಿವೆ. ನೆಲಕ್ಕುರುಳಿದೆ. ಬೆಳೆಗಳು ಹಾನಿಯಾಗಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪರಿಸ್ಥಿತಿ ಹೇಗೆ ನಿಭಾಯಿಸಬೇಕೆಂದು ಅವರು ಅವರು ಚಿಂತೆಗೆ ಒಳಗಾಗಿದ್ದಾರೆ.

ನಿರ್ಣಾ 92 ಮಿ.ಮೀ, ಬೇಮಳಖೇಡಾ 48.4 ಮಿ.ಮೀ, ಮನ್ನಾ ಎಖ್ಖೇಳಿ 24.1 ಮಿ.ಮೀ, ಚಾಂಗಲೇರಾ 20.2 ಮಿ.ಮೀ ಮತ್ತು ಚಿಟಗುಪ್ಪ 104 ಮಿ.ಮೀ. ಮಳೆಯಾಗಿದೆ.

 

Post Comments (+)