ಸೋಮವಾರ, ಸೆಪ್ಟೆಂಬರ್ 16, 2019
21 °C

ಕೆರೆಗಳಿಗೆ ನೀರು ತುಂಬಿಸಲು ಮನವಿ

Published:
Updated:

ಚಾಮರಾಜನಗರ: ಸುವರ್ಣಾವತಿ ಯಿಂದ ತಾಲ್ಲೂಕಿನ ದೊಡ್ಡಕೆರೆ, ಚಿಕ್ಕಕೆರೆ ಮತ್ತು ಸಿಂಡಿಗೆರೆಗಳಿಗೆ ನೇರವಾಗಿ ಪೈಪ್‌ಲೈನ್‌ ನಿರ್ಮಿಸಿ ನೀರು ಹರಿಸುವಂತೆ ಕೆರೆಗಳ ಅಚ್ಚುಕಟ್ಟುದಾರರ ಹೋರಾಟ ಸಮಿತಿ ಸಂಸದ ಆರ್. ಧ್ರುವನಾರಾಯಣ ಮತ್ತು ಕಾಡಾ ಅಧ್ಯಕ್ಷ ಎಚ್‌.ಎಸ್‌. ನಂಜಪ್ಪ ಅವರಿಗೆ ಮನವಿ ಸಲ್ಲಿಸಿತು.

ಜಲಾಶಯದಿಂದ ದೊಡ್ಡಕೆರೆಯನ್ನು ತುಂಬಿಸಿದರೆ ಚಿಕ್ಕಕೆರೆ ಮತ್ತು ಸಿಂಡಿಗೆರೆಗಳು ಭರ್ತಿಯಾಗುತ್ತವೆ. ಈ ಬಾರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಳೆಯಾಗದೆ ಇರುವುದರಿಂದ ಕೆರೆಗಳು ಭಣಗುಡುತ್ತಿವೆ. ನೀರಿನ ಕೊರತೆಯಿಂದ ಜನ ಮತ್ತು ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಲಾಶಯದಿಂದ ನೇರ ಪೈಪ್‌ಲೈನ್‌ ನಿರ್ಮಿಸಿದರೆ ಕೆರೆಗಳನ್ನು ಬೇಗನೆ ತುಂಬಿಸಬಹುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಲಿದೆ ಎಂದು ತಿಳಿಸಿದರು.

ಹೊಂಗಲವಾಡಿ ನಾಲೆಯನ್ನು ಕೂಡಲೇ ದುರಸ್ತಿಗೊಳಿಸಿ ನೀರು ಹರಿಸುವಂತೆ ರಾಮಸಮುದ್ರ, ಬಸವನಪುರ, ಕರಿನಂಜನಪುರ ಗ್ರಾಮಗಳ ರೈತರು ಮನವಿ ಮಾಡಿದರು.

ಸಮಿತಿಯ ಕೆ.ಎನ್. ಶಿವಕುಮಾರಸ್ವಾಮಿ, ಪುಟ್ಟಮಲ್ಲಪ್ಪ, ಕೆ. ವೀರಭದ್ರಸ್ವಾಮಿ, ಮಹೇಶ್‌, ಆರ್‌.ಎಸ್‌. ಭಾಸ್ಕರ್‌, ಬಾಲರಾಜ್‌, ಮಹದೇವಸ್ವಾಮಿ, ಶಿವರುದ್ರಸ್ವಾಮಿ ಇದ್ದರು.

Post Comments (+)