‘ಕೃಷಿಯಲ್ಲಿ ಯಂತ್ರ ಬಳಕೆಯಿಂದ ಕಾರ್ಮಿಕರ ಕೊರತೆ ನಿವಾರಣೆ’

ಬುಧವಾರ, ಜೂನ್ 26, 2019
28 °C

‘ಕೃಷಿಯಲ್ಲಿ ಯಂತ್ರ ಬಳಕೆಯಿಂದ ಕಾರ್ಮಿಕರ ಕೊರತೆ ನಿವಾರಣೆ’

Published:
Updated:

ಕಡೂರು: ಕೃಷಿ ಕಾರ್ಯಗಳಲ್ಲಿ ಯಂತ್ರಗಳ ಬಳಕೆ ಮಾಡುವುದರಿಂದ ಕಾರ್ಮಿಕರ ಕೊರತೆಯನ್ನು ನಿವಾರಿಸಿಕೊಳ್ಳಬಹುದು ಎಂದು ದೇವನೂರು ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯಕುಮಾರ್ ಹೇಳಿದರು. ತಾಲ್ಲೂಕಿನ ದೇವನೂರಿನ ರೇಣುಕಾಮೂರ್ತಿ ಅವರ ರಾಗಿ ಹೊಲದಲ್ಲಿ ಕೃಷಿ ಇಲಾಖೆ ಗುರುವಾರ ಏರ್ಪಡಿಸಿದ್ದ ರಾಗಿ ಕೊಯ್ಯುವ ಯಂತ್ರದ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.

ದೇವನೂರು ಭಾಗದಲ್ಲಿ ತೃಪ್ತಿಕರವಾಗಿ ಮಳೆಯಾಗಿದ್ದು, ರಾಗಿ ಬೆಳೆ ಸಮೃದ್ಧಿವಾಗಿ ಬಂದಿದೆ. ಆದರೆ, ರಾಗಿ ಕಟಾವು ಮಾಡಲು ಕೂಲಿಕಾರರ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಯಂತ್ರದ ಮೂಲಕ ಬಗೆಹರಿಸಿಕೊಳ್ಳಬಹುದು. ಈ ಯಂತ್ರಕ್ಕೆ ಕೃಷಿ ಇಲಾಖೆ ಸಹಾಯ ಧನವನ್ನು ನೀಡುತ್ತದೆ.

ಅಲ್ಲದೆ, ಈ ಯಂತ್ರವನ್ನು ಬಾಡಿಗೆ ನೀಡುವುದರ ಮೂಲಕವೂ ಹಣ ಸಂಪಾದಿಸಬಹುದು. ಈ ಯಂತ್ರದಲ್ಲಿ ಅಲ್ಪ ಮಟ್ಟದಲ್ಲಿ ಹಲವು ಬದಲಾವಣೆಗಳು ಆಗಬೇಕಿದೆ ಎಂದರು. ಸಖರಾಯಪಟ್ಟಣ ರೈತ ಸಂಪರ್ಕ ಕೇಂದ್ರದ ಅಧಿಕಾರಿ ನಾಗರಾಜು ಪ್ರಾಸ್ತವಿಕವಾಗಿ ಮಾತನಾಡಿ, ‘ರಾಗಿ ಕಟಾವು ಯಂತ್ರಕ್ಕೆ ಶೇ 50 ಸಹಾಯಧನವಿದ್ದು, ಕೇವಲ ₹ 64 ಸಾವಿರ ಪಾವತಿಸಬೇಕು. ಗ್ರಾಮಕ್ಕೆ ಎರಡು ಯಂತ್ರವಿದ್ದರೆ ಬೆಳೆ ಕಟಾವು ಸುಲಭವಾಗುತ್ತದೆ’ ಎಂದರು.

ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ಮಾತನಾಡಿ, ‘ತಾಲ್ಲೂಕಿನಾದ್ಯಂತ 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ರಾಗಿ ಬಿತ್ತನೆ ಮಾಡಿದ್ದು ಇಲಾಖೆಯ ಗುರಿಗಿಂತ ಹೆಚ್ಚಿದೆ. ಕಟಾವು ಮಾಡಲು ಸುಲಭವಾಗುವಂತೆ ರಾಗಿ ಕಟಾವು ಯಂತ್ರವನ್ನು ರೈತರಿಗೆ ಇಲಾಖೆ ಸಹಾಯಧನದೊಂದಿಗೆ ನೀಡುತ್ತದೆ.

ರಾಗಿ ಬೆಳೆಯಲ್ಲಿ ಎಲೆ ತಿನ್ನುವ ಕೊಂಡ್ಲಿ ಹುಳುವನ್ನು ನಿಯಂತ್ರಿಸಲು ಕೀಟನಾಶಕ ಸಿಂಪಡಿಸಲು ಸಲಹೆ ನೀಡಲಾಗಿದೆ. ಔಷಧವನ್ನು ಇಲಾಖೆಯು ರಿಯಾಯಿತಿ ದರದಲ್ಲಿ ನೀಡುತ್ತಿದೆ’ ಎಂದರು. ಇಲಾಖೆಯ ಅಧಿಕಾರಿ ಕಾಂತರಾಜು ಮಂಜುನಾಥ್ ಮತ್ತು ವರ್ಷ ಅಸೋಸಿಯಟ್ಸ್ ಕಂಪೆನಿಯ ಸಿಬ್ಬಂದಿ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry