ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಂಬಳ ವ್ಯಾಪ್ತಿಯಲ್ಲೂ ಭರ್ಜರಿ ಮಳೆ

Last Updated 14 ಅಕ್ಟೋಬರ್ 2017, 6:53 IST
ಅಕ್ಷರ ಗಾತ್ರ

ಡಂಬಳ: ನಾಲ್ಕು ದಿನಗಳ ವಿರಾಮದ ನಂತರ ಗ್ರಾಮದಲ್ಲಿ ಬುಧವಾರ ರಾತ್ರಿ ಮತ್ತೆ ಭರ್ಜರಿ ಮಳೆಯಾಗಿದೆ. ಎರಡು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆ ಸುರಿದಿದೆ. ಗ್ರಾಮದ ಕೆಲವು ಮನೆಗೆಳಿಗೆ ನೀರು ನುಗ್ಗಿದೆ. ಜಮೀನಿಗೆ ನೀರು ನುಗ್ಗಿದ್ದರಿಂದ ಸೂರ್ಯಕಾಂತಿ, ಮೆಕ್ಕೆಜೋಳ, ಈರುಳ್ಳಿ, ಶೇಂಗಾ ಬೆಳೆಗಳು ಹಾನಿಯಾಗಿವೆ.

ಮಳೆಯ ಆರ್ಭಟದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಚೆಕ್ ಡ್ಯಾಂ, ಕೆರೆ, ಕೃಷಿ ಹೊಂಡ ಹಾಗೂ ಹಳ್ಳಗಳು ತುಂಬಿ ಹರಿದಿವೆ. ಜಮೀನಿನ ಬದುಗಳು ಒಡೆದಿವೆ. ಗ್ರಾಮದ ಹನಮಪ್ಪ ರಾಘಣ್ಣನವರ ಅವರ ಎರಡು ಎಕರೆ ಮೆಕ್ಕೆಜೋಳ ನೆಲಕ್ಕುಳಿದೆ. ಜಯಮ್ಮ ಯಲಭೋವಿ, ರಜಾಕಸಾಬ್ ದೊಡ್ಡಮನಿ, ಪೀರಸಾಬ್ ಸೊರಟೂರ, ದೇವಪ್ಪ ಗೌಡಣ್ಣನವರ, ಮೈಲಾರಪ್ಪ ಹರಿಜನ ಅವರ ಮನೆಗೆ ನೀರು ನುಗ್ಗಿದ್ದರಿಂದ ಅವರು ತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದರು.

‘ಗ್ರಾಮಕ್ಕೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿಲ್ಲ. ವಿವಿಧ ತಗ್ಗು ಪ್ರದೇಶಗಳಲ್ಲಿ ಮಣ್ಣು ಹಾಕಿಸಿ ನೆಲವನ್ನು ಸಮ ಮಾಡುವಂತೆ ಅನೇಕ ಬಾರಿ ಅಧಿಕಾರಿಗಳಿಗೆ ಹೇಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು. ಹೋಬಳಿಯ ಮೇವುಂಡಿ, ಡೋಣಿ,
ಶಿಂಗಟಾರಾಯನಕೇರಿ ತಾಂಡಾ, ಜಂತ್ಲಿ ಶಿರೂರ, ಮುರಡಿ, ಕದಾಂಪುರ, ಹಿರೇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT