ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇವಲ ಪ್ರಚಾರ ತಂತ್ರ: ಭೀಮಾಶಂಕರ

Last Updated 14 ಅಕ್ಟೋಬರ್ 2017, 7:28 IST
ಅಕ್ಷರ ಗಾತ್ರ

ಕಾರವಾರ: ‘ಗೋವಾ ಬೈನಾ ಕಡಲತೀರದ ನಿರಾಶ್ರಿತ ಕನ್ನಡಿಗರಿಗೆ ರಾಜ್ಯ ಸರ್ಕಾರ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರವು 20x20 ಅಳತೆಯ ಮನೆ ನಿರ್ಮಿಸಿಕೊಡುವುದಾಗಿ ಘೋಷಿಸಿರುವುದು ಅವೈಜ್ಞಾನಿಕವಾಗಿದ್ದು,ಇದು ಪ್ರಚಾರದ ತಂತ್ರವಾಗಿದೆ’ ಎಂದು ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಪಾಟೀಲ ಆರೋಪಿಸಿದ್ದಾರೆ.

ಈ ಕುರಿತು ಅವರು ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೂ ಪತ್ರ ಬರೆದಿದ್ದಾರೆ. ‘ನಿರಾಶ್ರಿತ ಕನ್ನಡಿಗರ ವಸತಿಗಾಗಿ ಯೋಜನೆ ರೂಪಿಸಿದ್ದು, ಇದಕ್ಕೆ ನಿಮ್ಮ ಅನುಮತಿ ನೀಡಿ ಎಂದು ಸೌಜನ್ಯಕ್ಕೂ ಗೋವಾ ಸರ್ಕಾರದೊಂದಿಗೆ ರಾಜ್ಯ ಸರ್ಕಾರ ಪತ್ರ ವ್ಯವಹಾರ ಮಾಡಿಲ್ಲ. ಬೈನಾ ಕಡಲತೀರದಲ್ಲಿ ಅಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಅನುಮತಿ ಇಲ್ಲ.

ಅಲ್ಲದೇ 1,100 ನಿರಾಶ್ರಿತರ ಕುಟುಂಬಕ್ಕೆ ಮನೆ ಕಟ್ಟಿಸಲು ಗೋವಾದಲ್ಲಿ ಎಲ್ಲಿಯೂ ಖಾಲಿ ಜಾಗವಿಲ್ಲ. ಬೈನಾದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತ ಕುಟುಂಬಗಳು ಎಲ್ಲಿ ನೆಲೆಸಿವೆ ಎಂಬ ನಿಖರವಾದ ಮಾಹಿತಿ ಎರಡೂ ಸರ್ಕಾರಕ್ಕೂ ಇಲ್ಲ’ ಎಂದು ದೂರಿದ್ದಾರೆ.

‘ಪ್ರಚಾರಕ್ಕೆ ಗೋವಾ ಕನ್ನಡಿಗರ ವಿಷಯ ಬಳಸಿಕೊಳ್ಳುವುದು ನಿಲ್ಲಿಸಬೇಕು’ ಎಂದು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT