ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ ದಸರಾ– ಶಕ್ತಿದೇವತೆ ಮೆರವಣಿಗೆ

Last Updated 14 ಅಕ್ಟೋಬರ್ 2017, 9:04 IST
ಅಕ್ಷರ ಗಾತ್ರ

ಕನಕಪುರ: ಸಾಮೂಹಿಕ ವಿಜಯದಶಮಿಯ 16ನೇ ವರ್ಷದ ದಸರಾ ಉತ್ಸವವು ಕಲಾ ತಂಡಗಳು, ಪಲ್ಲಕ್ಕಿ ಉತ್ಸವಗಳು, ಶಕ್ತಿದೇವತೆಗಳ ಮೆರವಣಿಗೆಯೊಂದಿಗೆ ಯಶಸ್ವಿಯಾಗಿ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ನಗರದ ಕೆನರಾಬ್ಯಾಂಕ್‌ ಮುಂಭಾಗದ ಮೈದಾನದಲ್ಲಿ ಏರ್ಪಡಿಸಿದ್ದ ಬಹಿರಂಗ ಸಾರ್ವಜನಿಕ ವೇದಿಕೆ ಕಾರ್ಯಕ್ರಮದ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು.

ತಾಲ್ಲೂಕು ಕಚೇರಿ ಮುಂಭಾಗದ ಚನ್ನಬಸಪ್ಪ ವೃತ್ತದಿಂದ ಸಾಲಾಗಿ ಮೆರವಣಿಗೆಯಲ್ಲಿ ಹೊರಟ ಕಲಾ ತಂಡಗಳು, ಪಲ್ಲಕ್ಕಿ ಉತ್ಸವಗಳು, ಶಕ್ತಿ ದೇವತೆಗಳು ಪಟ್ಟಣದ ಎಂ.ಜಿ.ರಸ್ತೆ ಮೂಲಕ ಅರ್ಕಾವತಿ ರಸ್ತೆ, ಕೋಟೆ, ಸಂಗಮ ರಸ್ತೆ, ವಾಣಿಟಾಕೀಸ್‌ ರಸ್ತೆ ಬಳಸಿಕೊಂಡು ಮೈಸೂರು ರಸ್ತೆಯ ಮೂಲಕ ಎಂ.ಜಿ.ರಸ್ತೆ ಮಾರ್ಗವಾಗಿ ರಾಮನಗರ ರಸ್ತೆಯಲ್ಲಿ ಮೆರವಣಿಗೆ ನಡೆಸಿದವು

ಸಾವಿರಾರು ವೀಕ್ಷಕರು: ತಾಲ್ಲೂಕಿನ ಮೂಲೆ ಮೂಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಬಂದಿದ್ದ ದಸರಾ ವೀಕ್ಷಕರು ರಸ್ತೆಯುದ್ದಕ್ಕೂ ನಿಂತು ದಸರಾ ವೀಕ್ಷಣೆ ಮಾಡಿದರು.
ಮಧ್ಯಾಹ್ನ ಒಂದೂವರೆ ಗಂಟೆಗೆ ಪ್ರಾರಂಭಗೊಂಡ ದಸರಾ ಉತ್ಸವದ ಮೆರವಣಿಗೆಯು ಸಂಜೆ 6 ಗಂಟೆ ವೇಳೆಗೆ ಮುಕ್ತಾಯಗೊಂಡಿತು.

ಆನೆ ಅಂಬಾರಿ: ದಸರಾ ಉತ್ಸವದ ಮುಖ್ಯ ಕೇಂದ್ರಬಿಂದು ಅನೆ ಅಂಬಾರಿ ಈ ಬಾರಿಯು ನೆರವೇರಿಲ್ಲ. ಉತ್ಸವ ಸಮಿತಿಯವರು ಆನೆ ಕರೆಸಬೇಕೆಂದು ಪ್ರಯತ್ನಕ್ಕೆ ಅರಣ್ಯ ಇಲಾಖೆಯ ಅನುಮತಿ ದೊರೆಯದ ಕಾರಣ ಆನೆ ಕರೆಸಲಾಗದೆ ಕಾಳಿಕಾಂಬಾ ದೇವಿ ಬೆಳ್ಳಿರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ತಾಂತ್ರಿಕ ಕಾರಣಗಳಿಂದ ಆನೆಯನ್ನು ತರಲು ಅರಣ್ಯ ಇಲಾಖೆಅನುಮತಿ ನೀಡಿಲ್ಲ, ಮುಂದಿನ ವರ್ಷ ಖಂಡಿತವಾಗಿಯೂ ಆನೆ ತಂದು ಅಂಬಾರಿಯಲ್ಲಿಮೆರವಣಿಗೆ ಮಾಡುವ ಮೂಲಕ ಜನತೆಯ ಕೋರಿ
ಯನ್ನು ಈಡೇರಿಸುವುದಾಗಿ ಉತ್ಸವ ಸಮಿತಿಯವರು ತಿಳಿಸಿದ್ದಾರೆ.

ಮಿಂಚಿದ ಜೋಡಿ ಎತ್ತುಗಳು: ದಸರ ಉತ್ಸವದಲ್ಲಿ 10 ಕ್ಕೂ ಜೋಡಿ ಎತ್ತುಗಳುಪಾಲ್ಗೊಂಡಿದ್ದವು. ₹ 1 ಲಕ್ಷದಿಂದ ₹3 ಲಕ್ಷ ಬೆಲೆ ಬಾಳುವ ಜೋಡಿ ಎತ್ತುಗಳನ್ನು
ಮಾಲೀಕರು ಅಲಂಕಾರಗೊಳಿಸಿ ಮೆರವಣಿಗೆಗೆ ಕರೆತಂದಿದ್ದರು. ಉತ್ಸವದಲ್ಲಿ ಗಾಂಭೀರ್ಯದಿಂದಹೆಜ್ಜೆ ಹಾಕುವ ಮೂಲಕ ಜೋಡಿ ಎತ್ತುಗಳು ದಸರ ವೀಕ್ಷಕರನ್ನು ಆಕರ್ಷಿಸಿದವು. ಕೆಲವರು ಜೋಡಿ ಎತ್ತುಗಳ ಜತೆಯಲ್ಲಿ ನಿಂತು ಪೋಟೋ ತೆಗೆಸಿಕೊಂಡಿದ್ದು ವಿಶೇಷವಾಗಿತ್ತು.

ಅರವಟಿಗೆ: ಉತ್ಸವ ಸಾಗುವ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ದಸರಾಭಿಮಾನಿಗಳು ಸ್ವಯಂ ಪ್ರೇರಣೆಯಿಂದ ಅರವಟಿಗೆಗಳನ್ನು ತೆರೆದು, ನೀರು ಮಜ್ಜಿಗೆ, ಕೋಸಂಬರಿ, ಪಾನಕ, ಅನ್ನ ದಾಸೋಹವನ್ನು ವಿತರಿಸಿ ದಸರ ವೀಕ್ಷಕ್ಷರ ಬಯಾರಿಕೆ, ಹಸಿವನ್ನು ತಣಿಸಿ ಸಂತೃಪ್ತಿ ಪಡಿಸಿದರು.

ಸಹಕಾರ: ಕಳೆದ ಒಂದು ವಾರದಿಂದ ಹಗಲಿನ ವೇಳೆಯಲ್ಲಿ ಬೀಳುತ್ತಿದ್ದ ಮಳೆಯು ಶುಕ್ರವಾರ ಪ್ರಶಾಂತವಾಗಿದ್ದು ಸಂಜೆವರೆಗೂ ಒಂದು ಹನಿ ಮಳೆಯಾಗದೆ ದಸರಾ ಉತ್ಸವದ ಮೆರವಣಿಗೆ ಯಶಸ್ವಿಯಾಗುವಂತೆ ಸಹಕಾರ ನೀಡಿತ್ತು. ಶುಕ್ರವಾರ ಬೆಳಿಗ್ಗೆಯೇ ಮಳೆಬಂದರೆ ಏನು ಮಾಡುವುದು ಎಂಬ ಚಿಂತೆ ದಸರಾ ಉತ್ಸವ ಸಮಿತಿಯನ್ನು ಮತ್ತು ದಸರಾ ನೋಡುಗರನ್ನು ಕಾಡಿದ್ದು ಮಳೆಯಿಲ್ಲದೆ ಯಶಸ್ವಿಯಾಗಿ ನಡೆದಿದ್ದಕ್ಕೆ ಜನತೆ ದೇವರನ್ನು ಸ್ಮರಿಸಿದರು.

ಉತ್ತಮ ಆಯೋಜನೆ: 15 ವರ್ಷಗಳಿಂದ ಆಚರಣೆ ಮಾಡಿಕೊಂಡು ಬಂದಿರು ದಸರಾ ಉತ್ಸವ ಸಮಿತಿಯುವರು ಈ ಬಾರಿಯೂ ಉತ್ತಮವಾಗಿ ಆಯೋಜಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಒಂದು ತಿಂಗಳಿಂದ ದಸರಾ ಕಾರ್ಯಕ್ರಮ ಆಚರಣೆಗಾಗಿ ದಸರಾ ಸಮಿತಿಯ ಕಾರ್ಯಕರ್ತರು ದುಡಿದಿದ್ದಾರೆ. ಅದಕ್ಕೆ ತಾಲ್ಲೂಕಿನ ಜನತೆ ಬೆಂಬಲಿಸಿ ಸಹಕಾರ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT