ಹಸಿವು ನಿವಾರಣೆ ಮಾಡುವಲ್ಲಿ ನೇಪಾಳ ಮತ್ತು ಬಾಂಗ್ಲಾದೇಶದಿಂದಲೂ ಹಿಂದೆ ಇದೆ ಭಾರತ

ಶುಕ್ರವಾರ, ಮೇ 24, 2019
26 °C

ಹಸಿವು ನಿವಾರಣೆ ಮಾಡುವಲ್ಲಿ ನೇಪಾಳ ಮತ್ತು ಬಾಂಗ್ಲಾದೇಶದಿಂದಲೂ ಹಿಂದೆ ಇದೆ ಭಾರತ

Published:
Updated:
ಹಸಿವು ನಿವಾರಣೆ ಮಾಡುವಲ್ಲಿ ನೇಪಾಳ ಮತ್ತು ಬಾಂಗ್ಲಾದೇಶದಿಂದಲೂ ಹಿಂದೆ ಇದೆ ಭಾರತ

ನವದೆಹಲಿ: 2017ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 119 ದೇಶಗಳ ಪೈಕಿ ಭಾರತ 100ನೇ ಸ್ಥಾನದಲ್ಲಿದೆ .ಕಳೆದ ವರ್ಷ ಭಾರತ 97ನೇ ಸ್ಥಾನದಲ್ಲಿತ್ತು.

ಭಾರತದಲ್ಲಿ ಶೇ.21ರಷ್ಟು ಮಕ್ತಳು ಎತ್ತರಕ್ಕೆ ತಕ್ಕ ತೂಕ ಹೊಂದಿಲ್ಲ ಎಂದು ಈ ಅಂತರರಾಷ್ಟ್ರೀಯ ಆಹಾರ ನಿಗಮ ಸಂಶೋಧನೆ ಸಂಸ್ಥೆ ಪ್ರಕಟಿಸಿದ ವರದಿಯಲ್ಲಿ ಹೇಳಲಾಗಿದೆ. 

 ಡಿಜಿಬೌಟಿ, ಶ್ರೀಲಂಕಾ ಮತ್ತು ದಕ್ಷಿಣ ಸುಡಾನ್ ಈ ಮೂರು ದೇಶಗಳಲ್ಲಿ ಶೇ.20ಕ್ಕಿಂತ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ. 

ಭಾರತದೊಂದಿಗೆ ಡಿಜಿಬೌಟಿ ಮತ್ತು ರವಾಂಡ ಜತೆಗೆ 100ರಲ್ಲಿ  31.4 ಅಂಕಗಳನ್ನು ಗಳಿಸಿ 100ನೇ ಸ್ಥಾನವನ್ನು ಹಂಚಿಕೊಂಡಿದೆ. ಜಾಗತಿಕ ಹಸಿವು  ಸೂಚ್ಯಂಕದಲ್ಲಿ ಭಾರತ 100ನೇ ಸ್ಥಾನಕ್ಕೆ ತಲುಪಿರುವುದು ಗಂಭೀರ ವಿಷಯವಾಗಿದೆ.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮತ್ತು ರಾಷ್ಟ್ರೀಯ ಆರೋಗ ಮಿಷನ್ ಎಂಬೀ ಯೋಜನೆಗಳನ್ನು ಭಾರತ ಹಮ್ಮಿಕೊಂಡಿದ್ದರೂ ಈ ಯೋಜನೆ ಜನರಿಗೆ ತಲುಪಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವದಲ್ಲಿ ಅಪೌಷ್ಟಿಕತೆ ಹೊಂದಿರುವ 19.2 ಕೋಟಿ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ಭಾರತದಲ್ಲೇ ಇದ್ದಾರೆ. ಈ ಸಂಖ್ಯೆ ವಿಶ್ವದಲ್ಲೇ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಲಂಡನ್‌ನ ಇಂಪೀರಿಯಲ್‌ ಕಾಲೇಜಿನ ಅಧ್ಯಯನ ತಿಳಿಸಿದೆ.

ಲ್ಯಾನ್ಸೆಟ್‌ ನಿಯತಕಾಲಿಕ ಪ್ರಕಟಿಸಿರುವ ಅಧ್ಯಯನದ ವಿವರಗಳು ನಮ್ಮ ಅಭಿವೃದ್ಧಿ ಮಾಪಕಗಳ ಬಗ್ಗೆ ತೀವ್ರ ಗುಮಾನಿ ಹುಟ್ಟಿಸುವಂತಿವೆ. ಬಾಲಕಿಯರಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಪ್ರಮಾಣ ಶೇ 22.7ರಷ್ಟು ಇದ್ದರೆ, ಬಾಲಕರಲ್ಲಿ ಇದು ಶೇ 30.7ರಷ್ಟಿದೆ. 1975ರಲ್ಲಿ ಈ ಪ್ರಮಾಣ ಕ್ರಮವಾಗಿ ಶೇ 24.4 ಹಾಗೂ ಶೇ 39.3ರಷ್ಟಿತ್ತು.

ಕಡಿಮೆ ತೂಕದ ಮಕ್ಕಳ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಬೊಜ್ಜಿನಿಂದ ಬಳಲುತ್ತಿರುವ ಮಕ್ಕಳು ಮತ್ತು ಹದಿಹರೆಯದವರ ಸಮಸ್ಯೆಯನ್ನೂ ಜಗತ್ತು ಎದುರಿಸುತ್ತಿದೆ. 1975ರಲ್ಲಿ, 5ರಿಂದ 19 ವರ್ಷದೊಳಗಿನ ಸುಮಾರು 1.1 ಕೋಟಿ ಮಂದಿ ಬೊಜ್ಜಿನ ಸಮಸ್ಯೆ ಎದುರಿಸುತ್ತಿದ್ದರು. 2016ರಲ್ಲಿ ಈ ಪ್ರಮಾಣ 12.4 ಕೋಟಿಗೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry