ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಪ್ರಪಂಚದಲ್ಲಿ...

Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

1. ಹುಣ್ಣಿಮೆಯ ಚಂದ್ರೋದಯದ ಒಂದು ಸುಂದರ ದೃಶ್ಯ ಚಿತ್ರ-1ರಲ್ಲಿದೆ. ಸೂರ್ಯನಿಂದ ಭೂಮಿಗೂ, ಚಂದ್ರನಿಗೂ ಸರಿ ಸುಮಾರು ಒಂದೇ ದೂರ ಇದ್ದರೂ ಧರೆಯಂತಲ್ಲದೆ ಚಂದ್ರ ಹಗಲಲ್ಲಿ ‘ಕಾದ ಕೆಂಡ’ದಂತಿದ್ದು ಇರುಳಲ್ಲಿ ಅತ್ಯಂತ ಶೀತಲ ಚೆಂಡಿನಂತಾಗುತ್ತದೆ. ಚಂದ್ರನ ಈ ಅತಿರೇಕದ ತಾಪಾಂತರಕ್ಕೆ ಪ್ರಮುಖ ಕಾರಣ ಇವುಗಳಲ್ಲಿ ಯಾವುದು?

ಅ. ಚಂದ್ರನ ಮೇಲ್ಮೈಯಲ್ಲಿ ದ್ರವ ನೀರಿನ ಕಡಲುಗಳಿಲ್ಲ
ಬ. ಚಂದ್ರನಿಗೆ ವಾಯುಮಂಡಲ ಕವಚವಿಲ್ಲ
ಕ. ಚಂದ್ರ ಮಣ್ಣಿನ ಪದರ ಪಡೆದಿಲ್ಲ
ಡ. ಚಂದ್ರನನ್ನು ಕಾಂತಗೋಳ ಆವರಿಸಿಲ್ಲ

2. ಪಾರಿಸರಿಕ ವಿದ್ಯಮಾನವೊಂದರ ಪರಿಣಾಮವಾಗಿ ಹಾನಿಗೊಳಗಾಗಿ ಬೋಳಾಗಿ ನಿಂತಿರುವ ಅಡವಿ ಪ್ರದೇಶವೊಂದರ ದೃಶ್ಯ ಚಿತ್ರ-2ರಲ್ಲಿದೆ. ಯಾವುದು ಆ ವಿದ್ಯಮಾನ?

ಅ. ಕಾಡುಕಿಚ್ಚು
ಬ. ಬರಗಾಲ
ಕ. ಭೂ ತಾಪ ಏರಿಕೆ
ಡ. ವಿಪರೀತ ಹಿಮಪಾತ
ಇ. ಆಮ್ಲ ಮಳೆ

3. ಸುಪ್ರಸಿದ್ಧ ‘ಕಾರಕೋರಂ’ ಪರ್ವತ ಪಂಕ್ತಿಯ ಒಂದು ದೃಶ್ಯ ಚಿತ್ರ-3ರಲ್ಲಿದೆ. ಈ ಪರ್ವತ ಪಂಕ್ತಿ ಯಾವ ಭೂ ಖಂಡದಲ್ಲಿದೆ?
ಅ. ಉತ್ತರ ಅಮೆರಿಕ
ಬ. ಏಷ್ಯಾ
ಕ. ಯೂರೋಪ್
ಡ. ಆಸ್ಟ್ರೇಲಿಯಾ

4. ಸಸ್ಯ ಸಾಮ್ರಾಜ್ಯದ ‘ಅತ್ಯಂತ ಬೃಹದ್ಗಾತ್ರದ ಕುಸುಮ’ ಎಂಬ ವಿಶ್ವದಾಖಲೆಯ ‘ರಾಫ್ಲೀಸಿಯಾ ಆರ್ನಾಲ್ಡಿ’ ಚಿತ್ರ-4ರಲ್ಲಿದೆ. ಈ ಹೂವನ್ನು ಅರಳಿಸುವ ಸಸ್ಯ ಈ ಕೆಳಗಿನ ಯಾವ ಗುಂಪಿಗೆ ಸೇರಿದೆ?

ಅ. ಅಪ್ಪು ಗಿಡ
ಬ. ಪರಾವಲಂಬಿ ಸಸ್ಯ
ಕ. ಪೊದೆ ಗಿಡ
ಡ. ವೃಕ್ಷ

5. ಕೀಟಾಹಾರಿ ಸಸ್ಯವೊಂದರ ‘ಬೇಟೆಯಾಡುವ ಅಂಗ’ದ ಚಿತ್ರ ಇಲ್ಲಿದೆ (ಚಿತ್ರ-5). ಅದನ್ನು ಗಮನಿಸಿ ಈ ಸಸ್ಯ ಯಾವುದು ಎಂಬುದನ್ನು ಗುರುತಿಸಬಲ್ಲಿರಾ?

ಅ. ಇಬ್ಬನಿ ಗಿಡ
ಬ. ಬಟರ್ ವರ್ಟ್
ಕ. ವೀನಸ್ ಫ್ಲೈ ಟ್ರಾಪ್
ಡ. ಹೂಜಿ ಗಿಡ

6. ಕಾರ್ಖಾನೆಯೊಂದರ ಕುಲುಮೆಯ ಚಿಮನಿಯಿಂದ ಹೊಮ್ಮುತ್ತಿರುವ ಕಲ್ಲಿದ್ದಿಲಿನ ಹೊಗೆಯ ದೃಶ್ಯ ಚಿತ್ರ-6ರಲ್ಲಿದೆ. ಪರಿಸರಕ್ಕೂ, ಜೀವಿಗಳಿಗೂ ಅತ್ಯಂತ ಹಾನಿಕಾರಕವಾಗಿರುವ ಕಲ್ಲಿದ್ದಿಲಿನ ಹೊಗೆಯಲ್ಲಿರುವ ಕೆಲ ಅಪಾಯಕಾರೀ ವಸ್ತುಗಳ ಈ ಪಟ್ಟಿಯಲ್ಲಿ ಯಾವುದು ಗುಂಪಿಗೆ ಸೇರಿಲ್ಲ?

ಅ. ಗಂಧಕದ ಡೈ ಆಕ್ಸೈಡ್
ಬ. ರಂಜಕದ ಪೆಂಟಾಕ್ಸೈಡ್
ಕ. ನೈಟ್ರೋಜನ್ ಆಕ್ಸೈಡ್
ಡ. ಪಾದರಸ
ಇ. ಸೀಸ ಮತ್ತಿತರ ಕೆಲ ಭಾರ ಲೋಹಗಳು
ಈ. ಬೂದಿಯ ಕಣಗಳು

7. ಧರೆಯ ಬಹು ದೀರ್ಘಾಯುಷೀ ವೃಕ್ಷಗಳ ಗುಂಪಿಗೆ ಸೇರಿದ ಒಂದು ಪ್ರಸಿದ್ಧ ವೃಕ್ಷ ಚಿತ್ರ-7ರಲ್ಲಿದೆ. ಇದೇ ಗುಂಪಿನ 9550 ವರ್ಷ ವಯಸ್ಸಿನ ವೃಕ್ಷವೊಂದು ‘ಪೃಥ್ವಿಯ ಅತ್ಯಂತ ಹಿರಿಯ ವೃಕ್ಷ’ಎಂಬ ವಿಶ್ವ ದಾಖಲೆಯನ್ನೂ ಸ್ಥಾಪಿಸಿದೆ! ಈ ವೃಕ್ಷ ಈ ಕೆಳಗೆ ಹೆಸರಿಸಿರುವ ಯಾವ ಗುಂಪಿಗೆ ಸೇರಿದೆ?

ಅ. ಸೆಕ್ವೋಯಾ
ಬ. ಆಸ್ಪೆನ್
ಕ. ಆಲ
ಡ. ಪೈನ್
ಇ. ಸಿಡಾರ್
ಈ. ಮಹಾಘನಿ

8. ಚಹಾ ತೋಟವೊಂದರ ದೃಶ್ಯ ಚಿತ್ರ-8ರಲ್ಲಿದೆ. ಇಡೀ ಜಗತ್ತಿನಲ್ಲಿ ಚಹಾವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸುವ - ಸೇವಿಸುವ ರಾಷ್ಟ್ರ ಇವುಗಳಲ್ಲಿ ಯಾವುದು?

ಅ. ಜಪಾನ್
ಬ. ಭಾರತ
ಕ. ಶ್ರೀ ಲಂಕಾ
ಡ. ಚೀನಾ
ಇ. ಬ್ರೆಜ಼ಿಲ್

9. ಚಿತ್ರ-9ರಲ್ಲಿರುವ ಆಹಾರ ಧಾನ್ಯವನ್ನು ಗಮನಿಸಿ:

ಅ. ಈ ಆಹಾರ ಧಾನ್ಯ ಯಾವುದು ?
ಬ. ಈ ಧಾನ್ಯವನ್ನು ಪ್ರತಿ ವರ್ಷ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ನಮ್ಮ ದೇಶದ ರಾಜ್ಯ ಯಾವುದು?

10. ನಯವಾಗಿ ಉಜ್ಜಿ ಹೊಳಪು ನೀಡಿರುವ ಬಂಡೆ ಚೂರೊಂದರಲ್ಲಿ ಮೂಡಿರುವ ವಿಸ್ಮಯಕರ ನೈಸರ್ಗಿಕ ವರ್ಣ ಚಿತ್ತಾರವನ್ನು ಚಿತ್ರ-10ರಲ್ಲಿ ಗಮನಿಸಿ. ಶಿಲೆಗಳಲ್ಲಿ ಮೂಡುವ ಕೆಂಪು ಬಣ್ಣಕ್ಕೆ ಅವುಗಳಲ್ಲಿ ಬೆರೆತ ಯಾವ ಖನಿಜಾಂಶ ಕಾರಣ?

ಅ. ಕ್ಯಾಲ್ಸಿಯಂ
ಬ. ಫೆಲ್ಡ್ ಸ್ಪಾರ್
ಕ. ಕ್ವಾರ್ಟ್ಜ್
ಡ. ಕಬ್ಬಿಣ
ಇ. ತಾಮ್ರ

11. ಆಕಾಶದಲ್ಲಿ, ಧರೆಯ ವಾಯುಮಂಡಲದಲ್ಲಿ ಮೈದಳೆದಿರುವ ಒಂದು ಹವಾ ವಿದ್ಯಮಾನ ‘ಇರಿಡಿಸೆನ್ಸ್’ನ ದೃಶ್ಯ ಚಿತ್ರ-11ರಲ್ಲಿದೆ. ಇಲ್ಲಿ ಹೆಸರಿಸಿರುವ ಆಕಾಶ ದೃಶ್ಯಗಳಲ್ಲಿ ಯಾವುದು ಹವಾ ವಿದ್ಯಮಾನಗಳ ಗುಂಪಿಗೆ ಸೇರಿಲ್ಲ?

ಅ. ಕರೋನಾ
ಬ. ಅಣಕು ಸೂರ್ಯ
ಕ. ಧ್ರುವ ಪ್ರಭೆ
ಡ. ಹೇಲೋ
ಇ. ಮರೀಚಿಕೆ

12. ಬಹಳ ಪುರಾತನವಾದ, ವಿಶ್ವ ವಿಖ್ಯಾತವೂ ಆದ, ಬಹು ಪರಿಚಿತವೂ ಆದ, ಬೃಹದಾಕಾರದ ಅದ್ಭುತ ಶಿಲಾ ಶಿಲ್ಪವೊಂದು ಚಿತ್ರ-12ರಲ್ಲಿದೆ:

ಅ. ಈ ಶಿಲ್ಪದ ಹೆಸರೇನು?
ಬ. ಈ ಶಿಲ್ಪದ ಪ್ರತ್ಯಕ್ಷದರ್ಶನ ಯಾವ ರಾಷ್ಟ್ರದಲ್ಲಿ ಸಾಧ್ಯ?

13. ಸಂಚಿ ಸ್ತನಿ (ಮಾರ್ಸುಪಿಯಲ್)ಗಳದು ಆಸ್ಟ್ರೇಲಿಯಾದಲ್ಲೇ ಗರಿಷ್ಠ ಸಂಖ್ಯೆ, ಗರಿಷ್ಠ ವೈವಿಧ್ಯ - ಹೌದಲ್ಲ? ಆ ದೇಶದ್ದೇ ಒಂದು ಸಂಚಿ ಸ್ತನಿ ಪ್ರಾಣಿ ಚಿತ್ರ-13ರಲ್ಲಿದೆ. ಯಾವುದು ಈ ಪ್ರಾಣಿ - ಗುರುತಿಸಬಲ್ಲಿರಾ?

ಅ. ಕ್ವೊಕ್ಕಾ
ಬ. ವಲ್ಲಭೀ
ಕ. ಕೂವಾಲೇ
ಡ. ವೂಂಬ್ಯಾಟ್

14. ಸ್ಫೋಟಗೊಂಡ ಪರಮಾಣು ಬಾಂಬ್‌ವೊಂದರ ಭಯಾನಕ ದೃಶ್ಯವೊಂದು ಚಿತ್ರ- 14ರಲ್ಲಿದೆ. ಪರಮಾಣು ಬಾಂಬ್‌ಗಳಲ್ಲಿ ಕೆಲವು ವಿಧಗಳಿವೆ. ಅಂತಹ ಬಾಂಬ್‌ಗಳ ಈ ಪಟ್ಟಿಯಲ್ಲಿ ಯಾವುದು ಗುಂಪಿಗೆ ಸೇರಿಲ್ಲ?

ಅ. ನ್ಯೂಟ್ರಾನ್ ಬಾಂಬ್
ಬ. ಜಲಜನಕ ಬಾಂಬ್
ಕ. ಹೀಲಿಯಂ ಬಾಂಬ್
ಡ. ಥರ್ಮಲ್ ಬಾಂಬ್
ಇ. ಡರ್ಟೀ ಬಾಂಬ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT