ಕರ್ನಾಟಕ ತಂಡ ಚಾಂಪಿಯನ್‌

ಮಂಗಳವಾರ, ಜೂನ್ 25, 2019
30 °C
19 ವರ್ಷದೊಳಗಿನವರ ಕ್ರಿಕೆಟ್‌

ಕರ್ನಾಟಕ ತಂಡ ಚಾಂಪಿಯನ್‌

Published:
Updated:
ಕರ್ನಾಟಕ ತಂಡ ಚಾಂಪಿಯನ್‌

ಬೆಂಗಳೂರು: ಕರ್ನಾಟಕ ತಂಡದವರು ವಿನೂ ಮಂಕಡ್‌ ಟ್ರೋಫಿ ದಕ್ಷಿಣ ವಲಯ 19 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.

ರಾಜ್ಯ ತಂಡದವರು ಆಡಿದ  ಐದು ಪಂದ್ಯಗಳಿಂದ 14 ಪಾಯಿಂಟ್ಸ್‌ ಸಂಗ್ರಹಿಸಿ ಪ್ರಶಸ್ತಿಯ ಸಾಧನೆ ಮಾಡಿದರು. ಈ ಪೈಕಿ 3 ಪಂದ್ಯಗಳಲ್ಲಿ ಗೆದ್ದಿದ್ದ ನಿಕಿನ್‌ ಜೋಸ್ ಬಳಗ ಒಂದರಲ್ಲಿ ಸೋತಿತ್ತು.

ಕರ್ನಾಟಕ ತಂಡ ಶನಿವಾರ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಕೇರಳ ವಿರುದ್ಧ ಆಡಬೇಕಿತ್ತು. ಆಲೂರಿನ ಎರಡನೇ ಮೈದಾನದಲ್ಲಿ ನಿಗದಿಯಾಗಿದ್ದ ಈ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಗೋವಾ ಮತ್ತು ಆಂಧ್ರ ಹಾಗೂ ಹೈದರಾಬಾದ್‌ ಮತ್ತು ತಮಿಳುನಾಡು ನಡುವಣ ಪಂದ್ಯಗಳೂ ಮಳೆಗೆ ಆಹುತಿಯಾದವು.

ಆಂಧ್ರ ತಂಡ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಸಾಧನೆ ಮಾಡಿತು. ಈ ತಂಡ ಕೂಡ 5 ಪಂದ್ಯಗಳಿಂದ 14 ಪಾಯಿಂಟ್ಸ್‌ ಕಲೆಹಾಕಿತ್ತು. ಆದರೆ ಒಟ್ಟಾರೆ ರನ್‌ ಗಳಿಕೆಯ ಆಧಾರದಲ್ಲಿ ಕರ್ನಾಟಕ (625) ಆಂಧ್ರ (508) ತಂಡವನ್ನು ಹಿಂದಿಕ್ಕಿತು.

ಹೈದರಾಬಾದ್‌, ಕೇರಳ, ತಮಿಳುನಾಡು ಮತ್ತು ಗೋವಾ ತಂಡಗಳು ಕ್ರಮವಾಗಿ ಮೂರರಿಂದ ಆರನೇ ಸ್ಥಾನಗಳಲ್ಲಿ ಕಾಣಿಸಿಕೊಂಡವು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry