ಶನಿವಾರ, ಸೆಪ್ಟೆಂಬರ್ 21, 2019
24 °C

ಕಳಚಿ ಬಿದ್ದ ಮೆಟ್ರೊ ನಿಲ್ದಾಣದ ಮೇಲ್ಚಾವಣಿಯ ಶೀಟ್‌

Published:
Updated:
ಕಳಚಿ ಬಿದ್ದ ಮೆಟ್ರೊ ನಿಲ್ದಾಣದ ಮೇಲ್ಚಾವಣಿಯ ಶೀಟ್‌

ಬೆಂಗಳೂರು: ಕೆ.ಆರ್.ಮಾರುಕಟ್ಟೆ ಸುರಂಗ ಮಾರ್ಗದ ಮೆಟ್ರೊ ನಿಲ್ದಾಣದ ಮೇಲ್ಚಾವಣಿಯ ಎಂಟು ಶೀಟ್‌ಗಳು ರಾತ್ರಿ 10.30ರ ಸುಮಾರಿಗೆ ಕಳಚಿ ಬಿದ್ದಿವೆ.

ಪ್ರಯಾಣಿಕರ ಓಡಾಟ ಕಡಿಮೆ ಇದ್ದ ವೇಳೆ ಈ ಅವಘಡ ಸಂಭವಿಸಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಫ್ಲಾಟ್‌ಫಾರಂಗೆ ಹೋಗುವ ಮಾರ್ಗದ ಮೆಟ್ಟಿಲುಗಳು ಹಾಗೂ ಎಸ್ಕಲೇಟರ್ ಮೇಲೆ ಶೀಟ್‌ಗಳು ಬಿದ್ದಿವೆ.

ಮುನ್ನೆಚ್ಚರಿಕಾ ಕ್ರಮವಾಗಿ ನಿಲ್ದಾಣ ಪ್ರವೇಶವನ್ನು ಸಿಬ್ಬಂದಿ ಬಂದ್ ಮಾಡಿದ್ದಾರೆ ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

Post Comments (+)