ಕಾಫಿತೋಟದಲ್ಲಿ ವೀರಗಲ್ಲು ಪತ್ತೆ

ಭಾನುವಾರ, ಜೂನ್ 16, 2019
32 °C

ಕಾಫಿತೋಟದಲ್ಲಿ ವೀರಗಲ್ಲು ಪತ್ತೆ

Published:
Updated:

ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕು ತ್ರಿಪುರದ ರಾಧಾಕೃಷ್ಣ ಅವರ ಕಾಫಿತೋಟದಲ್ಲಿ ಹಳೆಗನ್ನಡ ಹೊಯ್ಸಳ ಲಿಪಿ ಹೊಂದಿರುವ ವೀರಗಲ್ಲು ಈಚೆಗೆ ಪತ್ತೆಯಾಗಿದೆ.

ಈ ವೀರಗಲ್ಲನ್ನು ಬಳಪದ ಕಲ್ಲಿನಲ್ಲಿ ನಿರ್ಮಿಸಲಾಗಿದೆ. 4.5 ಅಡಿ ಎತ್ತರ ಮತ್ತು 1.75 ಅಡಿ ಅಗಲ ಇದೆ.

ವೀರಗಲ್ಲಿನ ಮೇಲೆ ಮೂರು ಭಾಗಗಳಾಗಿ ವಿಂಗಡಿಸಿ ಚಿತ್ರಣ ಕೆತ್ತಲಾಗಿದೆ. ಮೊದಲನೆ ಭಾಗದಲ್ಲಿ ಅಪ್ಸರೆಯೊಂದಿಗೆ ವೀರನೊಬ್ಬ ಸಂಗೀತ ಕೇಳುತ್ತಿರುವ ಚಿತ್ರಣವಿದೆ. ಎರಡನೇ ಭಾಗದಲ್ಲಿ ವೀರ ಖಡ್ಗದಿಂದ ಮೃತಪಟ್ಟಿರುವ ಚಿತ್ರಣವಿದೆ.

ಮೂರನೇ ಭಾಗದಲ್ಲಿ ಕೋಟೆ ಕಾಳಗ ಹಾಗೂ ಅಶ್ವಾರೂಢ ವೀರನ ಚಿತ್ರಣವಿದೆ. ಕಳಸದ ಕೃಷಿ ಅಧಿಕಾರಿ ಎಚ್.ಆರ್.ಪಾಂಡುರಂಗ ಅವರು ಈ ವೀರಗಲ್ಲನ್ನು ಪತ್ತೆ ಹಚ್ಚಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry