ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖಿಲ್ ಕುಮಾರಸ್ವಾಮಿ ರಾಜಕೀಯ ಪ್ರವೇಶಿಸಿದರೆ ತಪ್ಪಿಲ್ಲ: ದೇವೇಗೌಡ

ಬಂಜಾರ ಸಮುದಾಯದ ಸಮಾವೇಶ
Last Updated 15 ಅಕ್ಟೋಬರ್ 2017, 7:51 IST
ಅಕ್ಷರ ಗಾತ್ರ

ಶಿರಸಿ: ನಿಖಿಲ್ ಕುಮಾರಸ್ವಾಮಿ ಚಿತ್ರರಂಗ ಬಿಟ್ಟು ಬರುವುದಿಲ್ಲ. ಅಪ್ಪನ ಬಗ್ಗೆ ಕಾಳಜಿಯಿಂದ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಹೋಗಬಹುದು ಅಷ್ಟೆ. ರಾಜಕೀಯಕ್ಕೆ ಬಂದರೆ ತಪ್ಪೇನು ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸಮರ್ಥಿಸಿಕೊಂಡರು.

ಇಲ್ಲಿ ನಡೆಯಲಿರುವ ಬಂಜಾರ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕ ಸಿ.ಪಿ ಯೋಗೇಶ್ವರ ಜೆಡಿಎಸ್‌ಗೆ ಬರುವರಾ ಎಂದು ಕೇಳಿದ್ದಕ್ಕೆ, ಅವರಿಗೆ ಪ್ರಬುದ್ಧತೆ ಇದೆ ಅವರೇ ತೀರ್ಮಾನಿಸುತ್ತಾರೆ ಎಂದರು.

ಜಹೀರ್ ಅಹಮ್ಮದ್ ಅವರು ದೇವೇಗೌಡರ ನಂತರ ಜೆಡಿಎಸ್ ಉಳಿಯುವುದಿಲ್ಲ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಥೂ ಅವರ ಬಗ್ಗೆ ಮಾತನಾಡಬಾರದು. ಅನೇಕರ ಮನಸ್ಸಿನಲ್ಲಿ ಪ್ರಾದೇಶಿಕ ಪಕ್ಷದ ಉಳಿಕೆ ಕಷ್ಟ ಎಂಬ ಅಭಿಪ್ರಾಯವಿದೆ. ಆದರೆ ಪಕ್ಕ ತೆಲಂಗಾಣ ಮತ್ತಿತರ ರಾಜ್ಯ ನೋಡಿದಾಗ ಪ್ರಾದೇಶಿಕ ಪಕ್ಷದ ಸಾಮರ್ಥ್ಯ ಗೊತ್ತಾಗುತ್ತದೆ’ ಎಂದರು.

ಎಚ್.ಡಿ. ದೇವೇಗೌಡ ಅವರು ಬಂಜಾರ ಸಮಾವೇಶವನ್ನು ಉದ್ಘಾಟಿಸಿದರು. ಬಂಜಾರ ಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್, ಶಾಸಕರಾದ ಮಧು ಬಂಗಾರಪ್ಪ, ಶಾರದಾ ನಾಯ್ಕ ಉಪಸ್ಥಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT