ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ನಾಡಿನಲ್ಲಿ ಬಿರುಸಿನ ಕಾಯಕ

Last Updated 15 ಅಕ್ಟೋಬರ್ 2017, 6:58 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಅಡಿಕೆ ನಾಡು ಎಂದೇ ಪ್ರಸಿದ್ಧವಾಗಿರುವ ತಾಲ್ಲೂಕಿನಲ್ಲಿ ಅಡಿಕೆ ಕೊಯ್ಲು ಭರದಿಂದ ಸಾಗಿದೆ. ಸುಲಿಯುವ, ಬೇಯಿಸುವ ಒಣಗಿಸುವ ವಿವಿಧ ಹಂತಗಳಲ್ಲಿ ಕಾಯಕನಿರತ ರೈತರ ಚಿತ್ರಣ ಎಲ್ಲೆಡೆ ಕಾಣಿಸುತ್ತಿದೆ.

ಆಗಸ್ಟ್ ಮೊದಲ ವಾರದಲ್ಲಿ ಆರಂಭಗೊಳ್ಳುವ ಅಡಿಕೆ ಕೊಯ್ಲು ನವೆಂಬರ್ ತಿಂಗಳವರೆಗೆ ನಾಲ್ಕು ಹಂತಗಳಲ್ಲಿ ನಡೆಯುತ್ತದೆ. ಈಗಾಗಲೇ ಎರಡನೇ ಕೊಯ್ಲು ಮುಗಿದು ಮೂರನೇ ಕೊಯ್ಲು ಆರಂಭಗೊಂಡಿದೆ. ಪ್ರತಿ ಕೊಯ್ಲಿನ ಬೆನ್ನಲ್ಲೇ ಸುಲಿಯುವ, ಬೇಯಿಸುವ ಹಾಗೂ ಒಣಗಿಸುವ ಪ್ರಕ್ರಿಯೆ ತಡೆರಹಿತ.

ಅಡಿಕೆ ಸುಲಿಯುವ ಕೆಲಸ ಬಹುಪಾಲು ಮಹಿಳೆಯರಿಗೇ ಮೀಸಲು. ಪ್ರತಿ ದಿನ ಒಂದೆರಡು ಡಬ್ಬಗಳಷ್ಟು ಅಡಿಕೆ ಸುಲಿಯುವ ಮಹಿಳೆಯರಿಗೆ ಈಗ ಬೇಡಿಕೆ ಹೆಚ್ಚು. ಬೃಹತ್ ಹಂಡೆಗಳಲ್ಲಿ ಅಡಿಕೆ ಬೇಯಿಸಲಾಗುವುದು. ಬೆಂದ ಅಡಿಕೆ ಒಣಗಿಸಲಾಗುವುದು. ಬಿಸಿಲು ಸಮಪರ್ಕವಾಗಿದ್ದರೆ ಒಂದು ವಾರ ಒಣಗಿದರೆ ಮಾರಾಟಕ್ಕೆ ಸಿದ್ಧವಾಗಲಿದೆ.
ಕಳೆದ ತಿಂಗಳಿನಿಂದ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಡಿಕೆ ಒಣಗಿಸುವುದು ದುಸ್ತರವಾಗಿದೆ.

ಕಷ್ಟವಾದರೂ ಮಳೆ ಬೀಳುತ್ತಿರುವುದು ಭರವಸೆ ಮೂಡಿಸಿದೆ. ಕಳೆದ ಬೇಸಿಗೆಯಲ್ಲಿ ಶೇ 20 ರಷ್ಟು ತೋಟಗಳು ಒಣಗಿವೆ ಎನ್ನುತ್ತಾರೆ ಅಡಿಕೆ ಬೆಳೆಗಾರರು. ತಾಲ್ಲೂಕಿನಲ್ಲಿ 21 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆ ಇದೆ. ಒಂದೆರಡು ಎಕರೆ ಸಣ್ಣ ಬೆಳೆಗಾರನಿಂದ 50 ಎಕರೆಗಿಂತ ಹೆಚ್ಚು ಅಡಿಕೆ ತೋಟ ಇರುವ ಜಮೀನ್ದಾರರು ಇದ್ದಾರೆ.

ಇಳುವರಿ ಕುಸಿತ: ಕಳೆದ ಬಾರಿ ಮಳೆ ಕೊರತೆ, ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ಅಡಿಕೆ ಇಳುವರಿ ಕುಸಿದಿದೆ. ಒಂದು ಎಕರೆಗೆ 5ರಿಂದ 6 ಕ್ವಿಂಟಲ್ ಅಡಿಕೆ ಸಿಗಬಹುದು. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹ 38 ಸಾವಿರದ ಆಜುಬಾಜಿನಲ್ಲಿದೆ. ಹೆಚ್ಚಿನ ಧಾರಣೆ ನಿರೀಕ್ಷೆಯಲ್ಲಿ ದಾಸ್ತಾನು ಮಾಡುತ್ತಿದ್ದೇವೆ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT