ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಡಸೂರ: ₹1.96 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ

Last Updated 15 ಅಕ್ಟೋಬರ್ 2017, 7:38 IST
ಅಕ್ಷರ ಗಾತ್ರ

ಕಾಳಗಿ: ಸಮೀಪದ ಬೆಡಸೂರ ಗ್ರಾಮದ ಅಭಿವೃದ್ಧಿಗೆ ಶಾಸಕ ಡಾ.ಉಮೇಶ ಜಾಧವ್ ಅವರು ಅಂದಾಜು ₹1.96 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಈಚೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಗ್ರಾಮ ವಿಕಾಸ ಯೋಜನೆಯ ಅಭಿವೃದ್ಧಿಗೆ ₹75 ಲಕ್ಷ, ಎಂ.ವೈ.ಘೋರ್ಪಡೆ ಗ್ರಾಮ ಪಂಚಾಯಿತಿ ಸೌಧ ಕಟ್ಟಡ ನಿರ್ಮಾಣಕ್ಕೆ ₹50 ಲಕ್ಷ, ಕಿರು ನೀರು ಸರಬರಾಜು ಯೋಜನೆಗೆ ₹39 ಲಕ್ಷ, ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ₹12 ಲಕ್ಷ, ಎಸ್‌ಸಿಪಿ ಸಿಸಿ ರಸ್ತೆ ನಿರ್ಮಾಣಕ್ಕೆ ₹10 ಲಕ್ಷ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ₹10 ಲಕ್ಷ ಹೀಗೆ ಬೆಡಸೂರ ಗ್ರಾಮದ ಅಭಿವೃದ್ಧಿಗೆ ವಿವಿಧ ಯೋಜನೆಗಳಡಿ ಒಟ್ಟು ₹1.96 ಕೋಟಿ ಮಂಜೂರು ಮಾಡಲಾಗಿದೆ’ ಎಂದರು.

‘ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಗಿದೆ. ಇನ್ನುಳಿದ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳಲಿದ್ದು, ಸ್ಥಳೀಯರು ಕಾಮಗಾರಿಗಳ ಗುಣಮಟ್ಟದ ನಿರ್ವಹಣೆಯ ಮೇಲ್ವಿಚಾರಣೆಯನ್ನು ಮಾಡಿ ಸರ್ಕಾರದ ಯೋಜನೆಗಳನ್ನು ಸಾರ್ಥಕಗೊಳಿಸಬೇಕು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಷ್ಪಾ ಜೀತೇಂದ್ರ, ಮುಖಂಡ ಬಸವರಾಜ ಪಾಟೀಲ, ಶಿವರಾಜ ಪಾಟೀಲ ಗೊಣಗಿ, ನಿಂಬೆಣ್ಣಪ್ಪ ಕೋರವಾರ, ರಾಜು ಜಾಧವ್, ರೇವಣಸಿದ್ದಪ್ಪ ಸಾತನೂರ, ಶಿವಶರಣಪ್ಪ ಚನ್ನೂರ, ಸಿದ್ದು ಮಾನಕರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ವಿಶೇಷ ತಹಶೀಲ್ದಾರ್ ಶಾಂತಗೌಡ ಬಿರಾದಾರ ಇದ್ದರು. ಕಾರ್ಯಕ್ರಮದ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶಾಸಕರ ಮೆರವಣಿಗೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT