ಸಾಫ್ಟ್‌ವೇರ್‌ಗೆ ಭವಿಷ್ಯವಿಲ್ಲವೇ?

ಗುರುವಾರ , ಜೂನ್ 20, 2019
27 °C
ನಿಮ್ಮ ಪ್ರಶ್ನೆಗೆ ನಮ್ಮ ಉತ್ತರ

ಸಾಫ್ಟ್‌ವೇರ್‌ಗೆ ಭವಿಷ್ಯವಿಲ್ಲವೇ?

Published:
Updated:
ಸಾಫ್ಟ್‌ವೇರ್‌ಗೆ ಭವಿಷ್ಯವಿಲ್ಲವೇ?

–ಅನ್ನಪೂರ್ಣ ಮೂರ್ತಿ

**

1. ಪದವಿಶಿಕ್ಷಣ, ತಾಂತ್ರಿಕಶಿಕ್ಷಣ, ವೃತ್ತಿಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿದ್ಯಾರ್ಥಿವೇತನಗಳ ಸಂಪೂರ್ಣ ಮಾಹಿತಿಯನ್ನು ತಿಳಿಸಿ. ‌ಈಗ ಸಾಫ್ಟ್‌ವೇರ್ ಭವಿಷ್ಯ ಚೆನ್ನಾಗಿಲ್ಲ; ಕಂಪನಿಗಳು ಅನೇಕರನ್ನು ಕೆಲಸದಿಂದ ತೆಗೆಯುತ್ತಿವೆ ಎನ್ನುವ ವಿಷಯ ಎಷ್ಟು ಸರಿ? ಹಾಗಿದ್ದರೆ ಅದನ್ನೇ ಓದುತ್ತಿರುವ ನಮ್ಮಂತಹ ವಿದ್ಯಾರ್ಥಿಗಳಿಗೆ ಇರುವ ಆಯ್ಕೆಗಳನ್ನು ತಿಳಿಸಿ. ಯುಪಿಎಸ್‌ಸಿ ಪರೀಕ್ಷೆಯ ಬಗ್ಗೆ ಸರಿಯಾದ, ಸಂಪೂರ್ಣವಾದ ಮಾಹಿತಿ ಮತ್ತು ಯಾವ ರೀತಿ ಪ್ರಶ್ನೆ ಪತ್ರಿಕೆಗಳಿರುತ್ತವೆ ಎನ್ನುವ ಮಾದರಿಯನ್ನು ತಿಳಿಸಿ.

–ಪವನ್ ರವೀಂದ್ರ ಭಟ್ಟ, ಊರು ಬೇಡ

ಜೀವನದಲ್ಲಿ ನಾವು ಹಲವಾರು ರಿಸ್ಕ್‌ಗಳನ್ನು ತೆಗೆದುಕೊಳ್ಳುತ್ತೇವೆ. ಯಾವ ವೃತ್ತಿಯಲ್ಲಿ ಆಗಲಿ ಇದಕ್ಕೆ ಸ್ಕೋಪ್ ಇಲ್ಲ ಎಂದೇನೂ ಇಲ್ಲ. ನೀವು ಆ ವೃತ್ತಿಗೆ ತಕ್ಕವರೇ? ನಿಮ್ಮಲ್ಲಿ ಬೇರೆಯವರಲ್ಲಿ ಇಲ್ಲದ ವಿಶೇಷತೆ ಇದೆಯೇ? ನಿಮ್ಮ ಜ್ಞಾನ ಎಷ್ಟು ಇದೆ? ಇವೆಲ್ಲಾ ವ್ಯಕ್ತಿಯ ಉನ್ನತಿಗೆ ಬೇಕಾಗುವ ಗುಣಗಳು. ಸಾಫ್ಟ್‌ವೇರ್‌ಗೆ ಭವಿಷ್ಯ ಇಲ್ಲ ಎಂದಲ್ಲ. ನೀವು ಒಂದು ಕಂಪನಿಯಲ್ಲಿ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡಿದಿದ್ದಲ್ಲಿ, ನಿಮ್ಮ ನಡವಳಿಕೆ – ನಿಮ್ಮ ಬಾಸ್ ಜೊತೆಯಲ್ಲಾಗಲಿ ಸಹೋದ್ಯೋಗಿಗಳ ಜೊತೆಯಾಗಲಿ ಸರಿ ಇಲ್ಲದಿದ್ದರೆ, ನಿಮಗಿಂತಲೂ ಉತ್ತಮವಾದವರು ಇದ್ದರೆ ಅಥವಾ ತಮ್ಮ ಕಡೆಯ ವ್ಯಕ್ತಿಯನ್ನು ತರುವ ಮನಸ್ಸು ಮಾಡಿದ್ದಲ್ಲಿ ನಿಮಗೆ ಕೆಲಸ ಹೋಗುವ ಸಂಭವವಿದೆ. ಹಾಗೆಂದ ಮಾತ್ರದಲ್ಲಿ ಸಾಫ್ಟ್‌ವೇರ್‌ಗೆ ಭವಿಷ್ಯ ಇಲ್ಲ ಎಂದಲ್ಲ.

ಇ‌ನ್ನು ನೀವು ವಿದ್ಯಾರ್ಥಿವೇತನದ ಸಂಪೂರ್ಣ ಮಾಹಿಗೆ ಕೇಳಿದ್ದೀರಿ.

ವಿದ್ಯಾರ್ಥಿವೇತನಗಳು ಹಲವಾರು; ಸರ್ಕಾರದಿಂದ ಕಂಪ್ಯೂಟರ್‌ಗಳಿಂದ ಇನ್ಸ್‌ಟಿಟ್ಯೂಟ್‌ಗಳಿಂದ, ಜಾತಿ ವೇತನಗಳ ಮೆರಿಟ್ ಸ್ಕಾಲರ್‌ಶಿಪ್‌, ಮೆರಿಟ್ ಕಮ್ ಮೀನ್ಸ್ ಸ್ಕಾಲರ್‌ಶಿಪ್‌, ಲೋನ್ ಸ್ಕಾಲರ್‌ಶಿಪ್‌ – ಹೀಗೆ ಅನೇಕ ತರಹದ ವಿದ್ಯಾರ್ಥಿವೇತನಗಳಿವೆ. ಇಂತಹ ಕೋರ್ಸ್ ಎಂದು ನಿರ್ದಿಷ್ಟವಾಗಿ ಹೇಳಿದರೆ ಅದಕ್ಕೆ ದೊರಕುವ ಸ್ಕಾಲರ್‌ಶಿಪ್‌ ಹೇಳಬಹುದು.

ಎಂಜಿನಿಯರಿಂಗ್ ನಂತರ ವಿದ್ಯಾರ್ಥಿಗಳು ಟೆಕ್ನಿಕಲ್ ಅಥವಾ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನು ಕೆಲವರು ಸರ್ಕಾರಿ ನೌಕರಿಯ ಕಡೆ ಒಲವು ಇದ್ದವರು ಸಿವಿಲ್ ಸರ್ವಿಸ್ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಎಂಟರ್‌ಪ್ರಿನರ್‌ಶಿಪ್‌ನಲ್ಲಿ ಪರಿಣತಿ ಪಡೆದು ನಿಮ್ಮದೇ ಬ್ಯುಸಿನೆಸ್ ಶುರು ಮಾಡಬಹುದು. ಕನ್‌ಸಲ್ಟಿಂಗ್ ಕ್ಷೇತ್ರವನ್ನು ಸಹ ಅನೇಕ ವಿದ್ಯಾರ್ಥಿಗಳು ಪರಿಗಣಿಸುತ್ತಾರೆ. 

ಚೆನ್ನಾಗಿ ಓದಿ ಮುಂದೆ ಬನ್ನಿ, ಕೆಲಸಕ್ಕೆ ಬಾರದ ಮಾತುಗಳನ್ನು ಗಮನಿಸದಿರಿ.

2. ನಾನು ಸದ್ಯ ದ್ವಿತೀಯ ಪಿಯುಸಿ ಸೈನ್ಸ್‌ನಲ್ಲಿ ಪಿಸಿಎಂಬಿ ಕಾಂಬಿನೇಷನ್ ಆಯ್ಕೆ ಮಾಡಿಕೊಂಡಿದ್ದೇನೆ. ನಾನು ವಾರ್ಷಿಕ (2017) ಪರೀಕ್ಷೆಯಲ್ಲಿ ಮ್ಯಾಥ್ಸ್‌ನಲ್ಲಿ ಬರಿ 35 ಅಂಕಗಳನ್ನು ಪಡೆದಿದ್ದೇನೆ. ನನಗೆ ಮುಂದೆ ಮೆಡಿಕಲ್ ಅಥವಾ ವೆಟರ್‌ನರಿ ಸೈನ್ಸ್ ಅಥವಾ ಬಿಎಸ್ಸಿ ಅಗ್ರಿಕಲ್ಚರ್ ಮಾಡುವ ಆಸೆ. ಅದಕ್ಕೆ ಈ ವಿಷಯದ ಅಂಕಗಳಿಂದ ನನಗೆ ಮುಂದೆ ಸಿಇಟಿ ಮತ್ತು (ರಿಸಲ್ಟ್‌) ನೀಟ್ ಪರೀಕ್ಷೆಯಲ್ಲಿ ಎನಾದರೂ ತೊಂದರೆಯಾಗುತ್ತದೆ‌ಯೇ? ದಯವಿಟ್ಟು ತಿಳಿಸಿ.

ರವಿ, ಊರು ಬೇಡ

ನೀವು ತಿಳಿಸಿರುವ ಎಲ್ಲಾ ಕೋರ್ಸ್‌ಗಳು ಬೇರೆ ಬೇರೆ. ಮುಂಚೆ ನೀವು ಏನಾಗ ಬಯಸುತ್ತೀರಿ ಅನ್ನುವುದನ್ನು ಮೊದಲು ನಿರ್ಧರಿಸಿ.

ಸಿಇಟಿಗೆ ಅರ್ಜಿ ಸಲ್ಲಿಸಲು, ನೀವು ಕರ್ನಾಟಕದಲ್ಲಿ 7 ವರ್ಷಗಳ ಕಾಲ ಓದಿರಬೇಕು, ಸಿಇಟಿ ಮೂಲಕ ಮೆಡಿಕಲ್/ಡೆಂಟಲ್‌ಗೆ ಅರ್ಹತೆ 2ನೇ ಪಿಯುಸಿ ಪಾಸ್‌, ಇಂಗ್ಲಿಷ್‌ ಒಂದು ಸಬ್ಜೆಕ್ಟ್‌ ಓದಿರಬೇಕು. ಪಿಸಿಎಂನಲ್ಲಿ ಮಿನಿಮಮ್‌ ಶೇ.50 ಅಂಕ ಗಳಿಸಿರಬೇಕು. ಸಿಇಟಿ ಮೂಲಕ ಎಂಜಿನಿಯರಿಂಗ್ ಸೀಟಿಗೆ ಪಿಸಿಎಂನಲ್ಲಿ ಶೇ.45 ಅಂಕ ಗಳಿಸಬೇಕು, 2ನೇ ಪಿಯುಸಿ ಶೇ.50 ಅಂಕ ಮತ್ತು ಸಿಇಟಿದು ಶೇ 50 ಅಂಕ ತೆಗೆದುಕೊಂಡು ರ‍್ಯಾಂಕಿಂಗ್ ಕೊಡುತ್ತಾರೆ. ಹೆಚ್ಚಿನ ವಿವರವನ್ನು www.kea.nic.ac.in ಇಂದ ಪಡೆಯಿರಿ.

ನೀಟ್‌ಗೆ ಅರ್ಹತೆ ಪಡೆಯಲು

1. 17 ವರ್ಷ ವಯೋಮಿತಿ. (ಗರಿಷ್ಠ 25 ವರ್ಷ)

1. 3 ಬಾರಿ ಪರೀಕ್ಷೆ ಬರೆಯಬಹುದು.

3. ಪಿಸಿಎಂನಲ್ಲಿ ಕನಿಷ್ಠ ಶೇ.50 ಅಂಕ

ಹೆಚ್ಚಿನ ವಿವರವನ್ನು www.cbscnet.nic.in ನಿಂದ ಪಡೆಯಿರಿ.

ನೀವು ಎಲಿಜಿಬಿಟಿ ಕ್ರೈಟಿರಿಯಾಗೆ ತಕ್ಕವರಾಗಿದ್ದೀರಾ – ಎಂದು ನೋಡಿಕೊಳ್ಳಿ. ಒಂದು ಕೋರ್ಸ್ ಖಚಿತ ಪಡಿಸಿಕೊಂಡರೆ, ಅದಕ್ಕೆ ಸಂಬಂಧಿಸಿ ಎಲಿಜಿಲಿಟಿ, ಎಲ್ಲೆಲ್ಲಿದೆ ಕೋರ್ಸ್ ಅನ್ನುವ ಮಾಹಿತಿಯನೆಲ್ಲಾ ಸಂಗ್ರಹಿಸಿ.

3. ನನ್ನ ಮಗಳು ಪಿಯುಸಿಯಲ್ಲಿ ಶೇ. 80ರಷ್ಟು ಮಾರ್ಕ್ಸ್ ಪಡೆದಿದ್ದು, ನೀಟ್ ಪರೀಕ್ಷೆಯಲ್ಲಿ 1035 ರ‍್ಯಾಂಕ್‌ ಪಡೆದಿದ್ದಾಳೆ. ಆದರೆ ಇಷ್ಟವಾದ ಆರ್ಕಿಟೆಕ್ಟ್‌ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ. ಆ ಕಾರಣಕ್ಕೆ ನಾವು ಬಿಎಸ್ಸಿಗೆ ಸೇರಿಕೊಳ್ಳುವಂತೆ ಎಷ್ಟು ಹೇಳಿದರೂ ಕೇಳದರೆ ಅವಳ ಸ್ನೇಹಿತೆಯ ಮಾತಿನಂತೆ ಬಿಬಿಎಗೆ ಸೇರಿದ್ದಾಳೆ. ಅದರಲ್ಲಿ ಅವಳಿಗೆ ಭವಿಷ್ಯವಿದೆಯೇ ತಿಳಿಸಿ. ನಮಗೆ ಇರುವ ಭಯವನ್ನು ದೂರ ಮಾಡಿ.

ಸೀತರಾಮ, ಊರು ಬೇಡ

ಇಷ್ಟವಾದ ಕಾಲೇಜು ಅಂದರೇನು? ಅವಳಿಗೆ ಆರ್ಕಿಟೆಕ್ಟ್‌ನಲ್ಲಿ ತೀವ್ರವಾದ ಆಸಕ್ತಿ ಇದ್ದಲ್ಲಿ ಅವಳು ಇದೇ ಕೋರ್ಸ್ ಅನ್ನು ಇಷ್ಟವಿಲ್ಲದ ಕಾಲೇಜಿನಲ್ಲೂ ಆಯ್ಕೆ ಮಾಡಬಹುದಿತ್ತು. ವ್ಯಕ್ತಿಯಲ್ಲಿ ಆರ್ಕಿಟೆಕ್ಟರ್‌ ಕೋರ್ಸ್‌ಗೆ ಬೇಕಾದ ಗುಣಗಳಿದ್ದಲ್ಲಿ, ಅವರು ಖಂಡಿತ ಯಾವುದೇ ಕಾಲೇಜಿನಿಂದ ಪಾಸ್ ಮಾಡಿದರೂ ಮುಂದೆ ಬರುತ್ತಾರೆ. ಡಿಗ್ರಿ, ಸ್ನಾತಕೋತ್ತರ, ಡಾಕ್ಟರೇಟ್‌ – ಹೀಗೆ ಹೆಚ್ಚು ಹೆಚ್ಚು ಓದಿ ಹೆಸರಾಂತ ಆರ್ಕಿಟೆಕ್ಟರ್‌ ಆಗುವ ಸಾಧ್ಯತೆ ಇದೆ.

ನಿಮ್ಮ ಉದ್ದೇಶ ಬಿಎಸ್ಸಿಗೆ ಹೋಗಬೇಕಿತ್ತು ಎಂದು. ಬಿಎಸ್ಸಿಗೆ ಸೇರಿದರೆ ಮುಂದೆ ಏನು ಮಾಡಬೇಕು ಎಂದು ನಿರ್ಧರಿಸಿದ್ದಿರಾ? ಈಗ ಬಿಬಿಎಗೆ ಸೇರಿದ್ದಾಳೆಂದು ತಿಳಿಸಿದ್ದೀರಿ. ಶೇ. 80ರಷ್ಟು  ಪಿಯುಸಿಯಲ್ಲಿ ಪಡೆದಿದ್ದಾಳೆ; ಅವಳಿಗೆ ಬಿಬಿಎ ಪಾಸ್ ಮಾಡಲು ಬಹಳ ಸುಲಭವಾಗುತ್ತದೆ. ಇದರ ನಂತರ ಏನು ಮಾಡಬೇಕು ಅನ್ನುವುದು ಬಹಳ ಮುಖ್ಯ.

ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಆಸಕ್ತಿ ಇದ್ದಲ್ಲಿ ಈಗಿನಿಂದಲೇ ಕ್ಯಾಟ್ ಪರೀಕ್ಷೆಯ ಕಡೆ ಗಮನ ಕೊಡಲಿ, ನಮ್ಮ ದೇಶದಲ್ಲಿ ಹಲವಾರು ಎಂಬಿಎ ಇನ್ಸ್‌ಟಿಟ್ಯೂಟ್‌ ಇವೆ. ಆದರೆ ಇವಳ ಗುರಿ ಉತ್ತಮವಾದ ಕಾಲೇಜ್ ಕಡೆ ಇರಲಿ. ಪ್ರವೇಶ–ಪರೀಕ್ಷೆಯಲ್ಲಿ ಏನು ಬರುತ್ತದೆ ಎನ್ನುವ ಸಿದ್ಧತೆಯ ಕಡೆ ಗಮನವಿರಲಿ. ಎಂಬಿಎ, ಸಿವಿಲ್ ಸೈನ್ಸ್ ಪರೀಕ್ಷೆಗಳು, ರಿಟೈಲ್ ಮ್ಯಾನೇಜ್‌ಮೆಂಟ್, ಪಬ್ಲಿಕ್ ರಿಲೇಶನ್‌ಷಿಪ್‌, ಅಡ್ವಟೈಸಿಂಗ್ ಇಂತಹ ಪರೀಕ್ಷೆಗಳು, ಕೋರ್ಸ್‌ಗಳ ಬಗ್ಗೆ ವಿಷಯ ಸಂಗ್ರಹಿಸಲಿ. ಮುಂದಿನ ಗುರಿಯ ಕಡೆ ಗಮನವಿದ್ದಲ್ಲಿ ಮುಂದೆ ಬರುತ್ತಾಳೆ. ನೀವು ಬಿಎಸ್ಸಿಗೆ ಹೋಗಲಿಲ್ಲ ಅಂತ ಕೊರಗುವ ಅಗತ್ಯವಿಲ್ಲ.

4. ನಾನು ಪಿಯುಸಿ ಮೊದಲನೇ ವರ್ಷ ಓದುತ್ತಿದ್ದೇನೆ. ಸಿಎ ಮಾಡಬೇಕೆಂದುಕೊಂಡಿದ್ದೇನೆ. ಅದನ್ನು ದ್ವಿತೀಯ ಪಿಯುಸಿ ನಂತರ ಮಾಡಿದರೆ ಒಳ್ಳೆಯದೋ ಅಥವಾ ಬಿಕಾಂ ನಂತರ ಮಾಡಿದರೆ ಒಳ್ಳೆಯದೋ? ದ್ವಿತೀಯ ಪಿಯುಸಿಯ ನಂತರ ಸಿಎ ಆಗುವ ವಿಧಾನ ದಯವಿಟ್ಟು ತಿಳಿಸಿ.

–ವಿಶಾಲ್, ಊರು ಬೇಡ

ಸಿಎ ಮಾಡಬೇಕು ಎನ್ನುವ ಹಂಬಲ ಮೆಚ್ಚತಕ್ಕದ್ದು. ನೀವು ಮ್ಯಾಥ್ಸ್‌ನಲ್ಲಿ ಎಷ್ಟು ಅಂಕಗಳನ್ನು ಪಡೆಯುತ್ತಿದ್ದೀರಾ ಅನ್ನುವ ವಿಷಯ ಗೊತ್ತಿಲ್ಲ. ಕಂಪ್ಯೂಟರ್ ಬೇಸಿಕ್ಸ್ ತಿಳಿದಿದೆಯಾ? ಲಾಜಿಕಲ್ ಥಿಕಿಂಗ್ ಇದೆಯಾ? ಇದನೆಲ್ಲಾ ಗಮನಿಸಿ, ಸಿಎ ಪರೀಕ್ಷೆಯಲ್ಲಿ ಪಾಸ್ ಆಗುವವರ ಸಂಖ್ಯೆ ಕಡಿಮೆ. ಎಷ್ಟೋ ಜನ ಸಿಎ ಕೋರ್ಸ್ ಅನ್ನು ಹಲವಾರು ವರ್ಷ ಪ್ರಯತ್ನಿಸಿ, ಪಾಸ್ ಆಗೊಲ್ಲ. ನಿಮಗೆ ನಾನು ವಿವರಗಳನ್ನು ಖಂಡಿತ ಕೊಡುತ್ತೇನೆ.

ಇದರಲ್ಲಿ 2 ಮಾರ್ಗಗಳಿವೆ.

1. ಫೌಂಡೇಶನ್ ಕೋರ್ಸ್ ರೂಟ್ ಆಫನ್ ಸೆಕೆಂಡ್ ಪಿಯುಸಿ.

2. ಡೈರೆಕ್ಟ್ ಎಂಟ್ರಿ ರೂಟ್ ( ಕಾಮರ್ಸ್ ಗ್ರ್ಯಾಜುಯೇಷನ್‌/ ಪಿಜಿ (ಶೇ.55) ಮಾರ್ಕ್ಸ್‌ ಅಥವಾ ಅದರ್ ಗ್ರ್ಯಾಜುಯೇಷನ್‌/ ಪಿಜಿ (ಶೇ.60) ಮಾರ್ಕ್ಸ್.

1. ಫೌಂಡೇಶನ್ ಕೋರ್ಸ್ ಮೂಲಕ ಮಾಡಿದರೆ

a) ಫೌಂಡೇಶನ್ ಕೋರ್ಸ್‌ಗೆ ದಾಖಲೆ ಮಾಡಿಕೊಳ್ಳಿ. ದ್ವಿತೀಯ ಪಿಯುಸಿ ನಂತರ.

b) 4 ತಿಂಗಳ ತಯಾರಿ ನಡೆಸಿ. ಜೂನ್ 30ರ ಒಳಗೆ ನವೆಂಬರ್ ಪರೀಕ್ಷೆಗೆ ಡಿಸೆಂಬರ್ 31ರ ಮೇ ಪರೀಕ್ಷೆಗೆ ದಾಖಲೆ ಮಾಡಿಕೊಳ್ಳಿ.

c) ಫೌಂಡೇಶನ್ ಪರೀಕ್ಷೆ ಬರೆಯಿರಿ.

d) ಫೌಂಡೇಶನ್ ಕೋರ್ಸ್ ಪಾಸು ಮಾಡಿದ ನಂತರ ಇಂಟರ್‌ಮಿಡಿಯೇಟ್ ಕೋರ್ಸ್‌ಗೆ ಸೇರಿ.

e) ಒಂದು ತಿಂಗಳು ಇಂಟಿಗ್ರೇಟೆಡ್ ಕೋರ್ಸ್ ಆನ್ ಇನ್‌ರ್ಫಾಮೇಶನ್ ಟೆಕ್ನಾಲಜಿ ಅಂಡ್ ಸಾಫ್ಟ್ ಸ್ಕಿಲ್ಸ್ (ಐಸಿಐಟಿಎಸ್‌ಎಸ್‌) ಆರ್ಟಿಕಲ್‌ಶಿಪ್ ಶುರುಮಾಡುವ ಮುನ್ನ ಈ ಕೋರ್ಸ್ ಅನ್ನು ಕಡ್ಡಾಯವಾಗಿ ಮುಗಿಸಬೇಕು.

f) ಇಂಟರ್‌ಮಿಡೀಯೆಟ್ ಎಕ್ಸಾಮಿನೇಷನ್ ಅನ್ನು 8 ತಿಂಗಳ ವ್ಯಾಸಂಗದ ನಂತರ ತೆಗೆದುಕೊಳ್ಳಿ.

g) ಮೇಲಿನ ಎಲ್ಲ ಪರೀಕ್ಷೆಗಳನ್ನು ಪೂರೈಸಿದ ನಂತರ ಆರ್ಟಿಕಲ್‌ ಟ್ರೈನಿಂಗ್‌ಗೆ ಸೇರಿ.

h) ಕೊನೆಯ ಪರೀಕ್ಷೆಗೆ ದಾಖಲಾಗಿ.

i) 3 ವರ್ಷ ಆರ್ಟಿಕಲ್ಡ್ ಟ್ರೈನಿಂಗ್ ಮುಗಿಸಿ.

j) ಪಾಸ್ ಫೈನಲ್ ಎಕ್ಸಾಂಮಿನೇಷನ್.

k) ಐಸಿಎಐಗೆ ಮೆಂಬರ್ ಆಗಿ ದಾಖಲೆ ಮಾಡಿಕೊಂಡರೆ ನೀವು ಚಾರ್ಟೆಡ್ ಅಕೌಂಟೆಂಟ್ ಆಗುತ್ತೀರ.

2. ಥ್ರೂ ಡೈರೆಕ್ಟ್ ಎಂಟ್ರಿ ರೂಟ್‌:

a) ಇಂಟರ್‌ಮಿಡಿಯೇಟ್‌ ಕೋರ್ಸ್‌ಗೆ ಬಿ.ಕಾಂ./ ಎಂ.ಕಾಂ. ಅಥವಾ ಬೇರೆ ಗ್ರ್ಯಾಜುಯೇಟ್ಸ್/ ಪಿಜಿ ದಾಖಲೆ ಮಾಡಿಕೊಳ್ಳಿ.

b) 4 ವಾರ ಐಸಿಐಟಿಎಸ್‌ಎಸ್ ಕೋರ್ಸ್ ಅನ್ನು 3 ವರ್ಷಕ್ಕೆ ದಾಖಲೆ.

c) ಪ್ರಾಕ್ಟಿಕಲ್ ಟ್ರೈನಿಂಗ್ 3 ವರ್ಷಕ್ಕೆ ದಾಖಲೆ.

d) ಇಂಟರ್‌ಮೀಡಿಯೇಟ್ ಪರೀಕ್ಷೆಗೆ 9 ತಿಂಗಳ ಪ್ರಾಕ್ಟಿಕಲ್ ಟ್ರೈನಿಂಗ್ ನಂತರ ಬರೆಯಿರಿ.

e) ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಸಿಎ ಕೊನೆಯ ಪರೀಕ್ಷೆಗೆ ದಾಖಲು ಆಗಬೇಕು.

f) ಸಿಎ ಕೊನೆಯ ಪರೀಕ್ಷೆಗೆ ಬರೆಯವ ಮೊದಲು, ಮೇಲ್ಕಂಡ ಎಲ್ಲ ಟ್ರೈನಿಂಗ್ ಅನ್ನೂ ಪೂರ್ತಿಗೊಳಿಸಬೇಕು.

g) ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಐಸಿಎಐ ಮೆಂಬರ್‌ಶಿಪ್‌ಗೆ ಇನ್‌ರೋಲ್ ಮಾಡಿಕೊಂಡರೆ ನೀವು ಚಾರ್ಟೆಡ್ ಅಕೌಂಟೆಂಟ್ ಆಗುತ್ತೀರ.

ಇನ್ನೂ ಹೆಚ್ಚಿನ ವಿವರವನ್ನು www.icai.org ನಿಂದ ಪಡೆಯಬಹುದು.

ಈಗ ನೀವೇ ನಿರ್ಧರಿಸಿ ದ್ವಿತಿಯ ಪಿಯುಸಿ ನಂತರ ಸಿಎ ಮಾಡುತ್ತೀರೋ, ಬಿಕಾಂ ನಂತರ ಮಾಡುತ್ತೀರೋ ಎಂದು

5. ನನ್ನ ಗುರಿ ಐಪಿಎಸ್ ಮಾಡುವುದು. ನಾನು ಅದಕ್ಕೆ ಹೇಗೆ ತಯಾರಿ ನಡೆಸಬೇಕು ಮತ್ತೆ ಯಾವ ಯಾವ ಪುಸ್ತಕಗಳನ್ನು ಓದಬೇಕು.

ಸೂರ್ಯ, ಊರು ಬೇಡ

ಪ್ರಪಂಚದಾದ್ಯಂತ ಹೆಚ್ಚುತ್ತಿರುವ ಕ್ರೌರ್ಯ, ಸೇಡು ಇನ್ನೂ ಅನೇಕ ವಿಷಾದ ಘಟನೆಗಳನ್ನು ತಡೆಯಲು ತ್ಯಾಗಶೀಲ ಗುಣವುಳ್ಳ ಉತ್ತಮವಾದ ಪೊಲೀಸ್ ಅಧಿಕಾರಿಗಳ ಅಗತ್ಯವಿದೆ. ಈ ಇಲಾಖೆಯಲ್ಲಿ ಜನಸಹಾಯ ಕಡಿಮೆ ಇರುವ ಕೊರತೆಯೂ ಇದೆ. ನೀವು ಏನು ಓದುತ್ತಿದ್ದೀರಾ ಅಂತ ತಿಳಿಸಿಲ್ಲ. ಒಂದು ಪ್ರಶ್ನೆಗೆ ಸರಿಯಾದ ಉತ್ತರ ಬೇಕಾದರೆ ಸಂಪೂರ್ಣ ವಿವರವನ್ನು ಕೊಡಬೇಕು. ಭಾರತ ಸಂವಿಧಾನದ ಪರಿಚ್ಛೇದ 3/2 ಒಳಗೆ ಆಲ್ ಇಂಡಿಯಾ ಸರ್ವಿಸ್‌ನಲ್ಲಿ ಐಪಿಎಸ್ ಒಂದು. ಹಿರಿಯ ಪೊಲೀಸ್ ಅಧಿಕಾರಿಯ ಹುದ್ದೆಗೆ ಐಪಿಎಸ್ ಪರೀಕ್ಷೆಯಲ್ಲಿ ತೇಗರ್ಡೆ ಆಗಬೇಕು. ಸಿವಿಲ್ ಸರ್ವಿಸ್ ಎಕ್ಸಾಮಿನೇಷನ್ ಇದು ಆಲ್ ಇಂಡಿಯಾ ಕಾಂಪಿಟೇಟಿವ್ ಪರೀಕ್ಷೆ. ಈ ಪರೀಕ್ಷೆಯನ್ನು 3 ಹಂತದಲ್ಲಿ ನಡೆಸುತ್ತಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್, ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಪರೀಕ್ಷೆಗಳನ್ನು ಆಲ್ ಇಂಡಿಯಾ ಲೆವೆಲ್‌ನಲ್ಲಿ ನಡೆಸುತ್ತಾರೆ. ಮೊದಲಿಗೆ ಪ್ರಿಲಿಮಿನರಿ ಎಕ್ಸಾಮಿನೇಷನ್‌, 2 ಆಬ್ಜೆಕ್ಟಿವ್ ಟೈಪ್ ಪೇಪರ್ಸ್ ( ಜನರಲ್ ಸ್ಟಡೀಸ್‌ ಮತ್ತು ಆ್ಯಪ್ಟಿಟ್ಯೂಡ್ ಟೆಸ್ಟ್‌).

ಎರಡನೇ ಹಂತ: ಮೈನ್ ಏಕ್ಸಾಮಿನೇಷನ್ 9ಪೇಪರ್ ಎಸ್ಸೆ ಟೈಪ್‌.

ಮೂರನೇ ಹಂತ: ಇಂಟರ್ವ್ಯೂವ್ (ಪಸರ್ನಾಲಿಟಿ ಟೆಸ್ಟ್‌) ಪ್ರಿಲಿಮಿನರಿ ಏಕ್ಸಾಮಿನೇಷನ್‌ ಪ್ರಕಟಣೆ ಫೆಬ್ರುವರಿ–ಮಾರ್ಚ್‌ನಲ್ಲಿ ಬರುತ್ತದೆ. ಪರೀಕ್ಷೆಯನ್ನು ಜೂನ್‌–ಜುಲೈನಲ್ಲಿ ನಡೆಸುತ್ತಾರೆ. ರಿಸಲ್ಟ್ ಆಗಸ್ಟ್‌ನಲ್ಲಿ ಮೈನ್ ಏಕ್ಸಾಮಿನೇಷನ್ ಅಕ್ಟೋಬರ್‌ನಲ್ಲಿ ಫಲಿತಾಂಶ ಮಾರ್ಚ್‌.

ಪಸರ್ನಾಲಿಟಿ ಟೆಸ್ಟ್‌–ಡಿಸೆಂಬರ್ ಫೈನಲ್ ಫಲಿತಾಂಶ ಮೇ.

ತರಬೇತಿಯನ್ನು ಸೆಪ್ಟೆಂಬರ್‌ನಲ್ಲಿ ಶುರು ಮಾಡುತ್ತಾರೆ.

ಎಲಿಜಿಬಿಲಿಟಿ: ಪದವಿ, ಮಾನ್ಯತೆ ಪಡೆದ ವಿಶ್ವಿದ್ಯಾಲಯದಿಂದ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry