ಗಾಯಾಳುವಿಗೆ ನೆರವು– ಧೋರಣೆ ಬದಲಾಗಲಿ

ಬುಧವಾರ, ಜೂನ್ 26, 2019
25 °C

ಗಾಯಾಳುವಿಗೆ ನೆರವು– ಧೋರಣೆ ಬದಲಾಗಲಿ

Published:
Updated:

ಕನಕಪುರ: ಅಪಘಾತ ಇನ್ನಿತರೆ ವಿಪತ್ತುಗಳು ಸಂಭವಿಸಿದಾಗ ಅವರ ನೆರವಿಗೆ ತಾಲ್ಲೂಕು ವಿಪತ್ತು ನಿರ್ವಹಣಾ ಸಮಿತಿಯ ತಂಡ ಧಾವಿಸಲಿದೆ ಎಂದು ತಹಶೀಲ್ದಾರ್‌ ಆರ್‌.ಯೋಗಾನಂದ ತಿಳಿಸಿದರು.

ನಗರದ ಮುನಿಸಿಪಲ್‌ ಮೈದಾನದ ಆವರಣದಲ್ಲಿ ತಾಲ್ಲೂಕು ಜಾಗೃತಿ ಸಮಿತಿ ಸಹಭಾಗಿತ್ವದಲ್ಲಿ ಡಿ.ಎಂ.ಟಿ. ಟೀಂ, ಪೊಲೀಸ್‌ ಇಲಾಖೆ, ಅಗ್ನಿಶಾಮಕದಳ, ವಿಪತ್ತು ನಿರ್ವಹಣಾ ಸಮಿತಿ ನಡೆದ ಅಪಘಾತ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅಪಘಾತ ಮತ್ತು ಪ್ರಕೃತಿ ವಿಕೋಪಗಳಲ್ಲಿ ವಿಪತ್ತಿಗೆ ಸಿಲುಕಿಕೊಂಡವರ ನೆರವಿಗೆ ಎಲ್ಲರೂ ಬರಬೇಕು. ಆದರೆ ಇಂದು ಹಾಗಾಗುತ್ತಿಲ್ಲ, ವ್ಯಕ್ತಿಯ ಅಪಘಾತದಲ್ಲಿ ಬಿದ್ದು ನರಳುತ್ತಿದ್ದರೂ ನಮಗೇಕೆ ಎಂದು ಜನ ಸುಮ್ಮನಾಗುತ್ತಾರೆ’ ಎಂದರು.

ರಾಷ್ಟ್ರಮಟ್ಟದಲ್ಲಿ ನೈಸರ್ಗಿಕ ವಿಕೋಪ, ಅಪಘಾತ, ವಿಪತ್ತುಗಳು ಸಂಭವಿಸಿದಾಗ ಅವರ ನೆರವಿಗೆ ಬರಲು ವಿಪತ್ತು ನಿರ್ವಹಣಾ ಸಮಿತಿ ರಚಿಸಲಾಗಿದೆ. ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು, ಅಗ್ನಿಶಾಮಕ ದಳ, ಕೈಗಾರಿಕಾ ವಲಯ ಎಲ್ಲರನ್ನು ಜೋಡಿಸಿಕೊಂಡು ವಿಪತ್ತು ನಿರ್ವಹಣಾ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಸ್ವಯಂಸೇವಕರು, ಎನ್‌.ಸಿ.ಸಿ. ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು, ಆರೋಗ್ಯ ಇಲಾಖೆಯವರು, ಶಿಕ್ಷಣ ಇಲಾಖೆ ಒಳಗೊಂಡ 204 ಮಂದಿಗೆ ವಿಪತ್ತು ನಿರ್ವಹಣೆಯ ಬಗ್ಗೆ ತರಬೇತಿ ನೀಡಲಾಗಿದೆ. ಎನ್‌.ಸಿ.ಸಿ.ಯ 34 ಮಂದಿ ಈ ತಂಡದಲ್ಲಿ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದರು.

ಅಪಘಾತಗೊಂಡ ಜಾಗ ಅಥವಾ ಯಾರಾದರೂ ಆಪತ್ತಿನಲ್ಲಿ ಸಿಲುಕಿದಾಗ ತಾಲ್ಲೂಕು ಆಡಳಿತದ 080–27522442 ನಂಬರಿಗೆ ಕರೆ ಮಾಡಿದರೆ ಕೂಡಲೇ ವಿಪತ್ತು ನಿರ್ವಹಣಾ ಸಮಿತಿಯ ತಂಡವು ಆಂಬುಲೆನ್ಸ್‌ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಜತೆ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯ ಮಾಡಲಿದ್ದಾರೆ ಎಂದರು.

ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು, ಆರೋಗ್ಯ ಇಲಾಖೆ, ಎನ್‌.ಸಿ.ಸಿ.ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆಯವರು, ಕೇಂದ್ರ ವಿಪತ್ತು ನಿರ್ವಹಣಾ ತರಬೇತುದಾರರು ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry