ಸೋಮವಾರ, ಸೆಪ್ಟೆಂಬರ್ 16, 2019
26 °C

ಕೈ ಹಿಡಿಯದ ಜನರಕ್ಷಾ ಯಾತ್ರೆ; ವೆಂಙರದಲ್ಲಿ ಬಿಜೆಪಿಯನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದ ಎಸ್‌ಡಿಪಿಐ

Published:
Updated:
ಕೈ ಹಿಡಿಯದ ಜನರಕ್ಷಾ ಯಾತ್ರೆ; ವೆಂಙರದಲ್ಲಿ ಬಿಜೆಪಿಯನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದ ಎಸ್‌ಡಿಪಿಐ

ವೆಂಙರ (ಮಲಪ್ಪುರಂ): ಕೇರಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಜನರಕ್ಷಾ ಯಾತ್ರೆ ಸಾಗಬೇಕಾದ ದಿಶೆ ಬದಲಿಸಿ ವೆಂಙರಕ್ಕೆ ಬಂದಿದ್ದರೂ ಅಲ್ಲಿನ ಜನ ಉಪಚುನಾವಣೆಯಲ್ಲಿ ಬಿಜೆಪಿ ಕೈ ಹಿಡಿಯಲಿಲ್ಲ. ಈ ವಿಧಾನಸಭಾ ಕ್ಷೇತ್ರದಲ್ಲಿ ಎಲ್‍ಡಿಎಫ್ ಮತ್ತು ಯುಡಿಎಫ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದರೂ ಬಿಜೆಪಿಗೆ ಮೂರನೇ ಸ್ಥಾನವೂ ಸಿಗಲಿಲ್ಲ. ಬಿಜೆಪಿಯನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿ ಎಸ್‍ಡಿಪಿಐ ಮೂರನೇ ಸ್ಥಾನಕ್ಕೇರಿದೆ.

ವೆಂಙರ ಉಪಚುನಾವಣೆಯಲ್ಲಿ ಬಿಜೆಪಿಗೆ 2016ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಲಭಿಸಿದ್ದ ಮತಗಳಿಗಿಂತ 1327 ಕಡಿಮೆ ಮತಗಳು ಲಭಿಸಿದೆ. 2016ರಲ್ಲಿ ಬಿಜೆಪಿಯ ಪಿ.ಟಿ. ಅಲಿಹಾಜಿ 7055 ಮತಗಳನ್ನು ಗಳಿಸಿದ್ದರು. ಆದರೆ ಈ ಬಾರಿ  ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಜನಚಂದ್ರನ್ ಅವರಿಗೆ ಸಿಕ್ಕಿದ್ದು 5728 ಮತಗಳು ಮಾತ್ರ.

ಈ ನಡುವೆ ಎಸ್‌‍ಡಿಪಿಐ ಇಲ್ಲಿ ಉತ್ತಮ ಬೆಂಬಲ ಗಿಟ್ಟಿಸಿಕೊಂಡಿದೆ,.ಕಳೆದ  ಬಾರಿ ವಿಧಾನಸಭಾ  ಚುನಾವಣೆಯಲ್ಲಿ 30 49 ಮತಗಳನ್ನು ಮಾತ್ರ ಗಳಿಸಿದ್ದ  ಎಸ್‍ಡಿಪಿಐ ಈ ಬಾರಿ 8648 ಮತಗಳನ್ನು ಗಳಿಸಿದೆ. 2016ರಲ್ಲಿ ಕಲ್ಲನ್ ಅಬೂಬಕರ್ ಮಾಸ್ಟರ್ ಎಸ್‍ಡಿಪಿಐ ಅಭ್ಯರ್ಥಿಯಾಗಿದ್ದರು. ಈ ಬಾರಿ ಕೆ.ಸಿ ನಸೀರ್ ಚುನಾವಣಾ ಕಣಕ್ಕಿಳಿದಿದ್ದರು.

2017ರಲ್ಲಿನ ಲೋಕಸಭಾ ಉಪಚುನಾವಣೆಗಳ ಬಗ್ಗೆ ಹೇಳುವುದಾದರೆ ಈ ಬಾರಿ ಬಿಜೆಪಿಗೆ ಮತ ಕಡಿಮೆಯಾಗಿದೆ. ಲೋಕಸಭಾ ಉಪಚುನಾವಣೆಯಲ್ಲಿ ವೆಂಙರದಿಂದ 5952 ಮತಗಳು ಬಿಜೆಪಿಗೆ ಸಿಕ್ಕಿದ್ದವು. ಅದಕ್ಕೆ ಹೋಲಿಸಿ ನೋಡಿದರೆ ಈ ಬಾರಿ 224 ಮತಗಳು ಕಡಿಮೆಯಾಗಿವೆ. ಲೋಕಸಭಾ ಉಪಚುನಾವಣೆಯಲ್ಲಿ ಎಸ್‍ಡಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.

Post Comments (+)