ಬದುಕು ಅರಸಿ ದೇಶ ಸುತ್ತಿ...

ಸೋಮವಾರ, ಜೂನ್ 24, 2019
26 °C

ಬದುಕು ಅರಸಿ ದೇಶ ಸುತ್ತಿ...

Published:
Updated:
ಬದುಕು ಅರಸಿ ದೇಶ ಸುತ್ತಿ...

ಕೈಕಸುಬಿನಲ್ಲಿ ಪರಿಣಿತರಾದ ಮಹಾರಾಷ್ಟ್ರದ ಕೆಲ ಕುಟುಂಬಗಳು ಪ್ರತಿವರ್ಷ ಬೆಂಗಳೂರಿಗೆ ಬರುತ್ತವೆ. ತಮ್ಮೂರಿನ ಹೊರಗೆ ಏಳೆಂಟು ತಿಂಗಳು ಉಳಿದು, ದುಡಿಮೆ ಮಾಡುವ ಈ ಕುಟುಂಬಗಳು ಉಳಿಸಿದ ಹಣದೊಂದಿಗೆ ಮತ್ತೆ ತಮ್ಮ ಸ್ವಂತ ಊರಿಗೆ ಮರಳುತ್ತವೆ.

ಇಂಥ ಕುಟುಂಬಗಳಿಗೆ ಬೆಂಗಳೂರಿನ ವ್ಯವಸಾಯ ಪ್ರದೇಶದಲ್ಲಿ ಕೈತುಂಬಾ ಕೆಲಸ. ಇಂಥ ಕುಟುಂಬಕ್ಕೆ ಸೇರಿದ ತಾಯಿ- ಮಗಳ ಜೋಡಿಯನ್ನು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದವರು ಶಿವಾನಂದ ಸಿಂದಗಿ. ಇವರು ನಗರದ ಪೂರ್ಣಪ್ರಜ್ಞ ಲೇಔಟ್ ನಿವಾಸಿ. ಹೆಗ್ಗೋಡಿನ ನೀನಾಸಮ್ ರಂಗ ಶಿಕ್ಷಣ ಕೇಂದ್ರದಲ್ಲಿ ಪದವಿ ಪಡೆದಿರುವ ಶಿವಾನಂದ ಅವರು ರಂಗಕರ್ಮಿಯೂ ಹೌದು. ಕಳೆದ ಎರಡು ವರ್ಷಗಳಿಂದ ಛಾಯಾಗ್ರಹಣ ಹವ್ಯಾಸವನ್ನು ಗಂಭೀರವಾಗಿಯೇ ರೂಢಿಸಿಕೊಂಡಿದ್ದಾರೆ. ಈ ಚಿತ್ರ ತೆಗೆಯಲು ಅವರು ಕೆನಾನ್ ಇಒಎಸ್ 1200 ಡಿ ಕ್ಯಾಮೆರಾ, 55– 250 ಎಂ.ಎಂ. ಪೋಕಲ್ ಲೆಂಗ್ತ್ ಇರುವ ಝೂಂ ಲೆನ್ಸ್ ಬಳಸಿದ್ದಾರೆ. ಅಪರ್ಚರ್ f/7.1, ಷಟರ್ ವೇಗ 1/400 ಸೆಕೆಂಡ್, ಐ.ಎಸ್.ಒ 160. ಈ ಚಿತ್ರದ ತಾಂತ್ರಿಕ ಹಾಗೂ ಕಲಾತ್ಮಕ ಅನುಸಂಧಾನವನ್ನು ಹೀಗೆ ಮಾಡಬಹುದು.

ಕಾಯಕದಲ್ಲಿ ಪರಿಣಿತ ತಾಯಿಯ ಹಿಂಬಾಲಕಿಯಾಗಿ ಮುಂದೆ ಸಾಗುತ್ತಿರುವ ಮಗಳು ಮೇಲೆ ಫೋಕಸ್ ಸ್ಪಷ್ಟವಾಗಿದೆ. ತಾಯಿ ಮತ್ತು ರೈಲ್ವೆ ನಿಲ್ದಾಣದ ಇತರೆ ದೃಶ್ಯಗಳು ಕೊಂಚ ಕಡಿಮೆ ಫೋಕಸ್ ಆಗಿವೆ. ಇದು ಚಿತ್ರದ ಸೌಂದರ್ಯವನ್ನು ಹೆಚ್ಚಿಸಿದೆ.

(ಶಿವಾನಂದ ಸಿಂದಗಿ, ಛಾಯಾಗ್ರಾಹಕ)

ಭಿನ್ನ ಸಂಗಮ (ಡಿಫರೆನ್ಶಿಯಲ್ ಫೋಕಸಿಂಗ್) ತಂತ್ರವೂ ಈ ಚಿತ್ರಕ್ಕೆ ಪೂರಕವಾಗಿದೆ. 235 ಎಂ.ಎಂ. ಸಂಗಮ ವ್ಯಾಪ್ತಿಯ (ಫೋಕಲ್ ಲೆಂಗ್ತ್) ಝೂಂಲೆನ್ಸ್‌ಗೆ ಮಧ್ಯಮ ಅಳತೆಯ ಅಪರ್ಚರ್ (f 7.1) ಅಳವಡಿಸಿರುವುದು ಔಚಿತ್ಯಪೂರ್ಣವಾಗಿದೆ. ಹೀಗೆ ಮಾಡಿರುವ ಕಾರಣ ಫೋಕಸ್ ಸಂಗಮವಲಯ (ಡೆಪ್ತ್ ಆಫ್ ಫೀಲ್ಡ್) ಸಂಕುಚಿತವಾಗಿ, ಆ ಮಗಳು ಮಾತ್ರ ಹೆಚ್ಚಿನ ಫೋಕಸ್ ಆಗಿ ಇತರೆ ಭಾಗಗಳು ಮಂದವಾಗಿರುವುದು ಒಂದು ವಿಶೇಷ.

ಷಟರ್ ವೇಗ ಹೆಚ್ಚಾಗಿರುವುದರಿಂದ ತಾಯಿ- ಮಗಳ ಕಾಲು ನಡಿಗೆಯ ರಭಸದ ಕ್ಷಣವನ್ನು ಫ್ರೀಜ್ ಮಾಡಿ ಸೆರೆಹಿಡಿಯಲು ಸಾಧ್ಯವಾಗಿದೆ. ತಿಳಿಬಿಸಿಲಿನ ಸಂದರ್ಭವಾಗಿರುವುದರಿಂದ ಕಡಿಮೆ ಐಎಸ್ಒ ಅಳವಡಿಸಲು ಸಾದ್ಯವಾಗಿದೆ. ಅದರಿಂದ ಚಿತ್ರದ ರೆಸೊಲ್ಯೂಶನ್ ಹೆಚ್ಚಿಸಲು ಸಾಧ್ಯವಾಗಿದೆ. ತಾಂತ್ರಿಕವಾಗಿ ಇಲ್ಲಿನ ಸೆಟ್ಟಿಂಗ್‌ಗಳೆಲ್ಲವೂ ಸಮರ್ಪಕವಾಗಿವೆ. ಅವರಿಬ್ಬರ ನಡಿಗೆ ಮುನ್ನೆಲೆಗೆ ಸಾಕಷ್ಟು ಜಾಗವನ್ನು ಬಿಟ್ಟಿರುವ ಮಾದರಿಯು ಈ ಚಿತ್ರಿಕೆಯು ಕಲಾತ್ಮಕ ಮೆರುಗನ್ನು ಹೆಚ್ಚಿಸಿದೆ. ಇಲ್ಲಿ ರೂಪಿತವಾಗಿರುವ ವರ್ಣಪ್ರಸರಣ (ಡಿಸ್ಟ್ರಿಬ್ಯೂಶನ್ ಆಫ್ ಟೋನ್ಸ್) ಮತ್ತು ವರ್ಣ ಛಾಯಾಂತರದ (ಟೋನಲ್  ಗ್ರೆಡೇಶನ್) ಗುಣಗಳು ಚೈತನ್ಯಶೀಲತೆಯನ್ನು (ವೈಟಾಲಿಟಿ) ಹೆಚ್ಚಿಸಿವೆ. ನೋಡುಗನ ಕಣ್ಣು ಮತ್ತು ಮನಸನ್ನು ಆಕರ್ಷಿಸುತ್ತವೆ.

ದೃಶ್ಯವನ್ನು ಸೆರೆಹಿಡಿಯುವಾಗ, ಕೆಳಕೋನ (ಲೋ ಯಾಂಗಲ್) ಹಾಗೂ ಲಂಬ ಚೌಕಟ್ಟು (ವರ್ಟಿಕಲ್ ಫ್ರೇಂ) ಬಳಕೆಯಾಗಿರುವುದು ಎದ್ದು ಕಾಣುತ್ತದೆ. ಅವರಿಬ್ಬರ ತ್ವರಿತ ಗತಿಯ ನಡಿಗೆಯ ಮುಂಭಾಗದಲ್ಲಿ ಸಾಕಷ್ಟು ಜಾಗ (ರಿಲೀಫ್) ಇರುವುದು ಛಾಯಾಗ್ರಾಹಕರ ಸಂಯೋಜನಾ ಕೌಶಲವನ್ನು ಮನಗಾಣಿಸುತ್ತದೆ.

**

ನಿಮ್ಮ ಫೋಟೊಗೂ ಚೌಕಟ್ಟು ಬೇಕೆ?

ಬೆಂಗಳೂರಿನ ಬದುಕು ಬಿಂಬಿಸುವ ಛಾಯಾಚಿತ್ರಗಳನ್ನು ‘ಚೌಕಟ್ಟು’ ಅಂಕಣಕ್ಕೆ ನೀವೂ ಕಳುಹಿಸಬಹುದು.

ಇಮೇಲ್- metropv@prajavani.co.in, ದೂರವಾಣಿ- 080 25880636

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry