ತಿಕ್ಕಲರು ಹಾಗೂ ಪುಕ್ಕಲರ ಕಥೆ!

ಗುರುವಾರ , ಜೂನ್ 20, 2019
24 °C

ತಿಕ್ಕಲರು ಹಾಗೂ ಪುಕ್ಕಲರ ಕಥೆ!

Published:
Updated:
ತಿಕ್ಕಲರು ಹಾಗೂ ಪುಕ್ಕಲರ ಕಥೆ!

ತಿಕ್ಕಲರು ಹಾಗೂ ಪುಕ್ಕಲರ ಕಥೆಯನ್ನು ಹೇಳಲು ಒಂದು ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಬಿ.ಕೆ. ಅಂಕರಾಜು ಅವರು ಈ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿ, ನಿರ್ದೇಶನ ಕೂಡ ಮಾಡಿದ್ದಾರೆ.

ಸಿನಿಮಾ ಬಗ್ಗೆ ಮಾಹಿತಿ ನೀಡಲು ಅವರು ತಮ್ಮ ತಂಡದ ಜೊತೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದರು. ‘ಇದು ಹಾಸ್ಯ ಹಾಗೂ ಹಾರರ್‌ ಅಂಶಗಳನ್ನು ಹೊಂದಿರುವ ಸಿನಿಮಾ. ಒಂದೇ ಹಂತದಲ್ಲಿ, 45 ದಿನಗಳ ಅವಧಿಯಲ್ಲಿ ಚಿತ್ರೀಕರಣ ನಡೆಸಿದ್ದೇವೆ’ ಎಂದರು ಅಂಕರಾಜು.

ಈ ಸಿನಿಮಾ ವೀಕ್ಷಿಸಿ, ಮನೋರಂಜನೆ ಪಡೆಯದೆಯೇ ಯಾರೊಬ್ಬರೂ ಚಿತ್ರಮಂದಿರದಿಂದ ಹೊರಗೆ ಹೋಗಲು ಸಾಧ್ಯವೇ ಇಲ್ಲ ಎಂಬುದು ಅವರ ವಿಶ್ವಾಸದ ಮಾತು. ‘ಇದೊಂದು ವಿಭಿನ್ನವಾದ ಪ್ರಯತ್ನ. ಮಂಡ್ಯ, ಮೈಸೂರು ಹಾಗೂ ಕೆ.ಎಂ. ದೊಡ್ಡಿಯಲ್ಲಿ ಚಿತ್ರೀಕರಣ ನಡೆದಿದೆ’ ಎಂದು ಅವರು ಹೇಳಿದರು. ಸಿನಿಮಾವನ್ನು ಅಕ್ಟೋಬರ್ 27ರಂದು ತೆರೆಗೆ ತರಬೇಕು ಎಂಬುದು ಅಂಕರಾಜು ಅವರ ಉದ್ದೇಶ.

ಅಂದಹಾಗೆ, ಈ ಸಿನಿಮಾದಲ್ಲಿ ಹಾರರ್‌ ಅಂಶಗಳು ಇದ್ದರೂ ಇದರಲ್ಲಿ ರಕ್ತಪಾತ ಅಥವಾ ಭೂತ–ಪಿಶಾಚಿಗಳ ದರ್ಶನ ಇರುವುದಿಲ್ಲವಂತೆ! ಯಶಸ್ ಅವರು ಈ ಸಿನಿಮಾದ ನಾಯಕ ನಟ. ನಾಯಕಿಯ ಪಾತ್ರ ಮಾಡಿರುವವರು ಐಶ್ವರ್ಯಾ.

‘ನಾನು ಎಂಜಿನಿಯರಿಂಗ್ ಓದಿದ್ದೇನೆ. ನನ್ನದು ಊರಿನ ಗೌಡನ ಸೋದರಳಿಯನ ಪಾತ್ರ. ಇದು ನನ್ನ ಪಾಲಿನ ಮೊದಲ ಸಿನಿಮಾ’ ಎಂದರು ಯಶಸ್. ಯಶಸ್ ಕಂಡು ಪ್ರೀತಿಗೆ ಬೀಳುವ ಪಾತ್ರವನ್ನು ಐಶ್ವರ್ಯಾ ನಿಭಾಯಿಸಿದ್ದಾರೆ. ‘ನಾನು ಇನ್ನೂ ಕಾಲೇಜು ವಿದ್ಯಾರ್ಥಿನಿ. ಶಾಲಾ ದಿನಗಳಿಂದಲೂ ಸಿನಿಮಾ ಬಗ್ಗೆ ಒಲವು ಇದೆ’ ಎಂದು ತಮ್ಮನ್ನು ಪರಿಚಯಿಸಿಕೊಂಡರು ಐಶ್ವರ್ಯಾ.

ಈ ಸಿನಿಮಾವನ್ನು 60ರಿಂದ 70 ಚಿತ್ರಮಂದಿರಗಳಲ್ಲಿ ತೆರೆಗೆ ತರಬೇಕು ಎಂಬುದು ಸಿನಿಮಾ ವಿತರಣೆಯ ಹೊಣೆ ಹೊತ್ತಿರುವ ಲಕ್ಷ್ಮೀಪತಿ ಅವರ ಗುರಿ. ಸಂತೋಷ್ ಎನ್ನುವವರು ಈ ಸಿನಿಮಾದಲ್ಲಿ ಖಳನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry